ಖ್ಯಾತ ನಟಿಯ ಕಾರು ಹರಿದು ಕಾರ್ಮಿಕ ಸಾವು; ಚಾಲಕನಿಗೆ ಗಾಯ

ಮುಂಬೈ: ಮುಂಬೈನ ಕಂಡಿವಿಲಿಯಲ್ಲಿ ಜನಪ್ರಿಯ ಮರಾಠಿ ನಟಿಯೊಬ್ಬರ ಮಾಲೀಕತ್ವದ ಕಾರು ಹರಿದ ಪರಿಣಾಮ ಕಾರ್ಮಿಕರೊಬ್ಬರು ಮೃತಪಟ್ಟಿದ್ದಾರೆ ಮತ್ತು ಇನ್ನೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ನಟಿ ಶೂಟಿಂಗ್ ಮುಗಿಸಿ ವಾಪಸ್ಸಾಗುತ್ತಿದ್ದಾಗ ಈ ಘಟನೆ ನಡೆದಿದ್ದು, ಕಾರು ಚಾಲಕ ಹಾಗೂ ನಟಿಗೆ ಗಾಯಗಳಾಗಿವೆ.
ನಟಿ ಊರ್ಮಿಳಾ ಕೊಠಾರೆ ಅಕಾ ಊರ್ಮಿಳಾ ಕಾನೇಟ್ಕರ್ ಶುಕ್ರವಾರ ರಾತ್ರಿ ಶೂಟಿಂಗ್ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಪೋಯ್ಸರ್ ಮೆಟ್ರೋ ನಿಲ್ದಾಣದ ಬಳಿ ಮೆಟ್ರೋ ಯೋಜನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರಿಗೆ ಕಾರು ಡಿಕ್ಕಿ ಹೊಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರು ಕಾರ್ಮಿಕರ ಮೇಲೆ ಕಾರು ಹರಿದಿದ್ದು, ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ ಮತ್ತೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಪೊಲೀಸರ ಹೇಳಿಕೆ ತಿಳಿಸಿದೆ. ಚಾಲಕ ಕೂಡ ತೀವ್ರವಾಗಿ ಗಾಯಗೊಂಡಿದ್ದು, ನಟಿ ಕೊಠಾರೆ ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಹ್ಯುಂಡೈ ವೆರ್ನಾ ಕಾರನ್ನು ಅತಿವೇಗದಲ್ಲಿ ಓಡಿಸುತ್ತಿದ್ದು, ಸರಿಯಾದ ಸಮಯಕ್ಕೆ ಏರ್‌ಬ್ಯಾಗ್ ತೆರೆದ ಕಾರಣ ನಟಿಯ ಪ್ರಾಣ ಉಳಿದಿದೆ ಎಂದು ಮೂಲಗಳು ತಿಳಿಸಿವೆ.
ಚಾಲಕನ ವಿರುದ್ಧ ಅತಿವೇಗದ ಚಾಲನೆ ಮತ್ತು ನಿರ್ಲಕ್ಷ್ಯದಿಂದ ಸಾವಿಗೆ ಕಾರಣವಾದ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಪ್ರಮುಖ ಸುದ್ದಿ :-   254 ಕೆಜಿ ತೂಕದ ಭಾರಿ ಬೊಜ್ಜಿನ ವ್ಯಕ್ತಿಗೆ ತೂಕ ಕಡಿಮೆ ಮಾಡಲು ಹೈ ರಿಸ್ಕ್‌ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ನಡೆಸಿದ ಏಮ್ಸ್ ವೈದ್ಯರು...! ಏನಿದು ಸರ್ಜರಿ..?

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement