ವೀಡಿಯೊ : ಸಾರಾಯಿ ಕುಡಿಯಲು ಹಣ ನೀಡದ್ದಕ್ಕೆ ವಿದ್ಯುತ್ ಕಂಬ ಏರಿ ‘ಹೈ ಟೆನ್ಷನ್ ವೈರ್’ ಮೇಲೆ ಮಲಗಿದ ಭೂಪ….!

ಅಮರಾವತಿ: ಯುವಕನೋರ್ವ ತನ್ನ ತಾಯಿ ಸಾರಾಯಿ ಕುಡಿಯಲು ಹಣ ನೀಡಲಿಲ್ಲ ಎಂಬ ಕಾರಣಕ್ಕೆ ಮನೆ ಬಳಿ ಇದ್ದ ಹೈ ಟೆನ್ಷನ್ ವೈರ್ ಮೇಲೆ ಮಲಗಿರುವ ಅಘಾತಕಾರಿ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಆಂಧ್ರ ಪ್ರದೇಶದ ಪಾರ್ವತಿಪುರಂ ಮಾನ್ಯಂ ಜಿಲ್ಲೆಯ ಎಂ ಸಿಂಗಾಪುರಂ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ಕುಡಿದ ಮತ್ತಿನ್ನಲ್ಲಿದ್ದ ಯುವಕ ಮತ್ತೆ ಕುಡಿಯಲು ಹಣ ಬೇಕು ಎಂದು ರಂಪ ಮಾಡಿ ವಿದ್ಯುತ್ ಕಂಬವನ್ನೇರಿ ವಿದ್ಯುತ್‌ ಲೈನ್‌ಗಳ ಮೇಲೆ ಮಲಗಿದ್ದಾನೆ.
ಪಾಲಕೊಂಡ ಮಂಡಲ ಎಂ. ಸಿಂಗಾಪುರದ ನಿವಾಸಿ ಯುವಕ ಕುಡಿತದ ದಾಸವಾಗಿದ್ದು, ಕುಡಿತಕ್ಕಾಗಿ ಹಣ ನೀಡುವಂತೆ ಪ್ರತಿನಿತ್ಯ ಮನೆಯಲ್ಲಿ ತಾಯಿಯ ಜೊತೆ ಜಗಳ ಮಾಡುತ್ತಿದ್ದ. ಮಂಗಳವಾರ ಮನೆಗೆ ಬಂದ ಯುವಕ ಯಜ್ಜಲ ವೆಂಕಣ್ಣ ತನ್ನ ತಾಯಿ ಬಳಿ ಕುಡಿತಕ್ಕೆ ಹಣ ನೀಡುವಂತೆ ಕೇಳಿದ್ದಾನೆ. ಆಗ ತಾಯಿ ನನ್ನಬಳಿ ಹಣವಿಲ್ಲ ಎಂದು ಹೇಳಿದ್ದಾರೆ.

ಆದರೆ ಯುವಕ ನಿನ್ನ ಪಿಂಚಣಿ ಹಣ ಕೊಡು ಎಂದು ಜಗಳ ಮಾಡಿದ್ದಾನೆ. ಅಲ್ಲದೆ, ಹಣ ಕೊಡದಿದ್ದರೆ ವಿದ್ಯುತ್ ಕಂಬ ಏರುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ. ಆದರೂ ತಾಯಿ ಹಣ ನೀಡಿದ ಕಾರಣಎಲ್ಲರೂ ನೋಡುತ್ತಿದ್ದಂತೆಯೇ ವಿದ್ಯುತ್ ಕಂಬ ಏರಿದ್ದಾನೆ. ಇದನ್ನು ಗಮನಿಸಿದ ಗ್ರಾಮಸ್ಥರು ಕೂಡಲೇ ಗ್ರಾಮದ ಟ್ರಾನ್ಸ್ ಫಾರ್ಮರ್ ಬಳಿ ಹೋಗಿದ್ದಾರೆ.
ನಂತರ ಯುವಕ ವಿದ್ಯುತ್ ಕಂಬ ಏರಿ, ಹೈಟೆನ್ಷನ್ ವೈರ್ ಮೇಲೆ ಮಲಗಿದ್ದಾನೆ.

ಅದೃಷ್ಟವಶಾತ್ ಆ ವೇಳೆಗಾಗಲು ಗ್ರಾಮತಸ್ಥರು ಟ್ರಾನ್ಸ್ ಫಾರ್ಮರ್ ಫ್ಯೂಜ್‌ ತೆಗೆದು ವಿದ್ಯುತ್ ಸರಬರಾಜು ನಿಲ್ಲಿಸಿದ್ದಾರೆ. ಇದರಿಂದ ಯುವಕ ಅನಾಹುತದಿಂದ ಪಾರಾಗಿದ್ದಾನೆ.
ನಂತರ ಅರ್ಧ ಗಂಟೆಗೂ ಹೆಚ್ಚು ಕಾಲ ವೆಂಕಣ್ಣ ವಿದ್ಯುತ್ ತಂತಿಗಳ ಮೇಲೆ ಓಡಾಡಿ ಹುಚ್ಚು ವರ್ತನೆ ತೋರಿದ ವೆಂಕಣ್ಣ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಕೆಳಗಿಳಿಯುವಂತೆ ಮನವಿ ಮಾಡಿದರೂ ಕೆಳಗೆ ಇಳಿಯಲಿಲ್ಲ. ಕೊನೆಗೆ ಗ್ರಾಮಸ್ಥರು ಸಾರಾಯಿಗೆ ಹಣ ನೀಡುವುದಾಗಿ ಹೇಳಿದ ನಂತರ ಆತ ಕೆಳಗಿಳಿದಿದ್ದಾನೆ. ಈತನ ಕೃತ್ಯಗಳನ್ನು ಗ್ರಾಮಸ್ಥರು ಮೊಬೈಲ್ ನಲ್ಲಿ ಸೆರೆ ಹಿಡಿದಿದ್ದು, ಇದೀಗ ಈ ವಿಡಿಯೋ ವೈರಲ್ ಆಗುತ್ತಿದೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 5

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement