ಹೊಸ ವರ್ಷದ ಮೊದಲ ದಿನವೇ ಹೊಟೇಲ್‌ ನಲ್ಲಿ ತಾಯಿ, ನಾಲ್ವರು ಸಹೋದರಿಯರನ್ನು ಕೊಲೆ ಮಾಡಿದ ವ್ಯಕ್ತಿ…!

ಲಕ್ನೋ: ದುರಂತ ಘಟನೆಯೊಂದರಲ್ಲಿ ವ್ಯಕ್ತಿಯೊಬ್ಬ ಹೊಸ ವರ್ಷದ ದಿನವೇ ಲಕ್ನೋದ ಹೋಟೆಲ್‌ನಲ್ಲಿ ತನ್ನ ತಾಯಿ ಮತ್ತು ನಾಲ್ವರು ಸಹೋದರಿಯರನ್ನು ಕೊಂದಿದ್ದು, ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೋಲೀಸರ ಪ್ರಕಾರ, ಅರ್ಷದ್ (24) ಆಗ್ರಾ ಮೂಲದವನಾಗಿದ್ದು, ಕೌಟುಂಬಿಕ ಕಲಹದ ಕಾರಣದಿಂದ ಹೀಗೆ ಮಾಡಿರುವುದಾಗಿ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದುಬಂದಿದೆ. ಮೃತರನ್ನು ಅರ್ಷದ್‌ ಸಹೋದರಿಯರಾದ ಅಲಿಯಾ (9), ಅಲ್ಶಿಯಾ (19), ಅಕ್ಸಾ (16) ಮತ್ತು ರಹಮೀನ್ (18) ಎಂದು ಗುರುತಿಸಲಾಗಿದೆ. ಐದನೆಯವಳು ಆರೋಪಿಯ ತಾಯಿ ಅಸ್ಮಾ ಎಂದು ಪೊಲೀಸರು ತಿಳಿಸಿದ್ದಾರೆ.
ಐವರ ಮಣಿಕಟ್ಟಿನ ಮೇಲೆ ಸೀಳು ಗಾಯಗಳಾಗಿದ್ದು, ಅದರಿಂದಲೇ ಅವರು ಸಾವಿಗೀಡಾಗಿದ್ದಾರೆ ಮತ್ತು ಅವರ ಉಣ್ಣೆಯ ಬಟ್ಟೆಗಳು ರಕ್ತದಲ್ಲಿ ತೊಯ್ದಿದ್ದವು. ಅರ್ಷದ್ ಆಹಾರದಲ್ಲಿ ಅಮಲು ಪದಾರ್ಥ ಬೆರೆಸಿ ಕೊಲೆ ಮಾಡಿದ್ದಾನೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಪೊಲೀಸ್ ಮೂಲಗಳ ಪ್ರಕಾರ, ಘಟನೆಗೂ ಮುನ್ನ ಕುಟುಂಬ ಸದಸ್ಯರಿಗೆ ಮದ್ಯವನ್ನು ನೀಡಲಾಗಿದೆ. ಕೊಲೆ ಪ್ರಕರಣದಲ್ಲಿ ಅರ್ಷದ್‌ನ ತಂದೆ ಬಾದರ್‌ ಎಂಬಾತನೂ ಶಂಕಿತ ಆರೋಪಿ ಎಂದು ಪೊಲೀಸರು ಹೆಸರಿಸಿದ್ದಾರೆ. ತಂದೆ ಇನ್ನೂ ತಲೆಮರೆಸಿಕೊಂಡಿದ್ದು, ಆತನಿಗಾಗಿ ಪೊಲೀಸರು ಶೋಧ ಕಾರ್ಯ ಆರಂಭಿಸಿದ್ದಾರೆ.
ಕುಟುಂಬದ ಕೆಲವರನ್ನು ಕತ್ತು ಹಿಸುಕಿ ಹತ್ಯೆ ಮಾಡಲಾಗಿದ್ದು, ಉಳಿದವರನ್ನು ಬ್ಲೇಡ್‌ನಿಂದ ಕೊಂದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಲಕ್ನೋದ ನಾಕಾ ಪ್ರದೇಶದ ಹೋಟೆಲ್ ಶರಣಜಿತ್‌ನಲ್ಲಿ ಈ ಘಟನೆ ನಡೆದಿದೆ ಎಂದು ಕೇಂದ್ರ ಲಕ್ನೋದ ಉಪ ಪೊಲೀಸ್ ಆಯುಕ್ತ (ಡಿಸಿಪಿ) ರವೀನಾ ತ್ಯಾಗಿ ಹೇಳಿದ್ದಾರೆ. “ಆರೋಪಿಯನ್ನು ಅರ್ಷದ್ (24) ಎಂದು ಗುರುತಿಸಲಾಗಿದೆ, ತನ್ನ ಸ್ವಂತ ಕುಟುಂಬದ ಐವರನ್ನು ಕೊಂದಿದ್ದಾನೆ. ಭೀಕರ ಕೃತ್ಯದ ನಂತರ, ಸ್ಥಳೀಯ ಪೊಲೀಸರು ಅಪರಾಧದ ಸ್ಥಳದಿಂದ ಆರೋಪಿಯನ್ನು ಬಂಧಿಸಿದ್ದಾರೆ” ಎಂದು ಡಿಸಿಪಿ ತ್ಯಾಗಿ ಹೇಳಿದರು.
ಈ ಬಗ್ಗೆ ವಿವರವಾದ ತನಿಖೆಯನ್ನು ಪ್ರಾರಂಭಿಸಲಾಗಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲು ಫೋರೆನ್ಸಿಕ್ ತಂಡಗಳನ್ನು ಅಪರಾಧ ಸ್ಥಳದಲ್ಲಿ ನಿಯೋಜಿಸಲಾಗಿದೆ ಎಂದು ಡಿಸಿಪಿ ತ್ಯಾಗಿ ಹೇಳಿದ್ದಾರೆ.

ಪ್ರಮುಖ ಸುದ್ದಿ :-   8 ವರ್ಷಗಳ ಪ್ರೇಮದಲ್ಲಿ ಬಿರುಕು ; ಯುವತಿ ಆತ್ಮಹತ್ಯೆ, ಮೃತದೇಹಕ್ಕೆ ಪ್ರಿಯಕರ ಮಂಗಳಸೂತ್ರ ಕಟ್ಟಬೇಕು ಎಂದು ಕುಟುಂಬಸ್ಥರ ಪಟ್ಟು...

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement