ಬೆಂಗಳೂರಿನ 8 ತಿಂಗಳ ಮಗುವಿನಲ್ಲಿ ಎಚ್‌ಎಂಪಿ ವೈರಸ್‌ ಸೋಂಕು ಪತ್ತೆ

ಬೆಂಗಳೂರು: ಭಾರತದಲ್ಲಿ ಹ್ಯೂಮನ್ ಮೆಟಾ ನ್ಯುಮೋವೈರಸ್ (HMPV) ಪ್ರಕರಣ ಕಂಡುಬಂದಿದ್ದು, ಬೆಂಗಳೂರಿನ 8 ತಿಂಗಳ ಶಿಶುವಿನಲ್ಲಿ ಇದು ಕಂಡುಬಂದಿದೆ ಎಂದು ವರದಿಯಾಗಿದೆ. ಇದು ಭಾರತದಲ್ಲಿ ಕಂಡುಬಂದ ಮೊದಲ ಪ್ರಕರಣ ಎಂದು ಹೇಳಲಾಗಿದೆ.
8 ತಿಂಗಳ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಎಚ್‌ಎಂಪಿವಿ (HMPV) ರೋಗ ಲಕ್ಷಣಗಳು ಕಂಡು ಬಂದ ಹಿನ್ನಲೆಯಲ್ಲಿ ಆಸ್ಪತ್ರೆ ವೈದ್ಯರು ಮಗುವಿನ ರಕ್ಷ ಪರೀಕ್ಷೆ ಮಾಡಿದ್ದಾರೆ. ಈ ವೇಳೆ ಈ ವೈರಸ್ ಪತ್ತೆಯಾಗಿದೆ. ಇದು ಕರ್ನಾಟಕದ ಹಾಗೂ ಭಾರತದ ಮೊದಲ ಪ್ರಕರಣ ಎಂದು ಹೇಳಲಾಗುತ್ತಿದೆ.

“ನಾವು ಇನ್ನೂ ನಮ್ಮ ಲ್ಯಾಬ್‌ನಲ್ಲಿ ಪರೀಕ್ಷೆಗಳನ್ನು ನಡೆಸಿಲ್ಲ. ಆದಾಗ್ಯೂ, ಖಾಸಗಿ ಆಸ್ಪತ್ರೆಯ ಫಲಿತಾಂಶಗಳ ನಿಖರತೆಯನ್ನು ನಾವು ಅನುಮಾನಿಸಲು ಯಾವುದೇ ಕಾರಣವಿಲ್ಲ ಎಂದು ಕರ್ನಾಟಕ ಆರೋಗ್ಯ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಹ್ಯೂಮನ್ ಮೆಟಾ ನ್ಯುಮೋವೈರಸ್ (HMPV) ಪ್ರಾಥಮಿಕವಾಗಿ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ ಮತ್ತು ಉಸಿರಾಟದ ಸೋಂಕುಗಳಿಗೆ ಕಾರಣವಾಗುತ್ತದೆ. ಜಾಗತಿಕವಾಗಿ, ಎಲ್ಲಾ ಫ್ಲೂ ಮಾದರಿಗಳಲ್ಲಿ ಸುಮಾರು 0.7% ರಷ್ಟು ಹ್ಯೂಮನ್ ಮೆಟಾ ನ್ಯುಮೋವೈರಸ್ (HMPV)ಎಂದು ಗುರುತಿಸಲಾಗಿದೆ. ಆದಾಗ್ಯೂ, ಈ ಸಂದರ್ಭದಲ್ಲಿ ವೈರಸ್ಸಿನ ನಿರ್ದಿಷ್ಟ ಸ್ಟ್ರೈನ್ ಬಗ್ಗೆ ಸೀಮಿತ ಮಾಹಿತಿ ಇದೆ.

ಪ್ರಮುಖ ಸುದ್ದಿ :-   ಇಟ್ಟಿಗೆ ಗೂಡಿನಲ್ಲಿ ಕಪ್ಪು ಚಿರತೆ ಜೊತೆ ಸೆಣಸಾಡಿ ಅದನ್ನೇ ನಿಗ್ರಹಿಸಿದ ಯುವಕ..! ದೃಶ್ಯ ವೀಡಿಯೊದಲ್ಲಿ ಸೆರೆ-ವೀಕ್ಷಿಸಿ

ಹ್ಯೂಮನ್ ಮೆಟಾ ನ್ಯುಮೋವೈರಸ್(HMPV)ಗೆ ಯಾರೂ ಆತಂಕ ಪಡುವ ಅಗತ್ಯವಿಲ್ಲ. ಈ ವೈರಸ್‌ ತಗುಲಿದವರು ಶೀಘ್ರದಲ್ಲೇ ಗುಣಮುಖರಾಗುತ್ತಾರೆ. ಸದ್ಯ ಆತಂಕದ ಪರಿಸ್ಥಿತಿ ಇಲ್ಲ. ಮಕ್ಕಳು ಹಾಗೂ ಹಿರಿಯರು ಹೆಚ್ಚಿನ ಕಾಳಜಿ ವಹಿಸುವಂತೆ ಸೂಚಿಸಲಾಗಿದೆ.
ಈ ವೈರಸ್‌ ಚೀನಾದಲ್ಲಿ ಉಲ್ಬಣಗೊಂಡಿದೆ ಎಂದು ವರದಿಗಳಿವೆ. ಅದು ಚೀನಾದಿಂದ ಮಲೇಷಿಯಾ, ಸಿಂಗಾಪುರಕ್ಕೆ ಹರಡಿತ್ತು. ಈಗ ಭಾರತಕ್ಕೂ ಕಾಲಿಟ್ಟಿದೆ. ಶೀತ, ಜ್ವರ, ಕೆಮ್ಮು, ಉಸಿರಾಟ ಸಂಬಂಧಿತ ಸಮಸ್ಯೆಗಳು ಕಾಣಿಸಿಕೊಂಡ ತಕ್ಷಣ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಲು ಸೂಚಿಸಲಾಗಿದೆ. ಆತಂಕ ಪಡುವ ಅಗತ್ಯವಿಲ್ಲ. ಚಳಿಗಾಲದಲ್ಲಿ ಈ ರೀತಿ ವೈರಸ್ ಕಾಣಿಸಿಕೊಳ್ಳುವುದು ಸಾಮಾನ್ಯ. ಆದರೆ ಈ ಬಗ್ಗೆ ಮುನ್ನಚ್ಚರಿಕೆ ವಹಿಸುವುದು ಉತ್ತಮ ಎಂದು ಆರೋಗ್ಯ ಇಲಾಖೆ ಸೂಚಿಸಿದೆ.

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement