ಇಸ್ರೋದ ನೂತನ ಅಧ್ಯಕ್ಷ- ಬಾಹ್ಯಾಕಾಶ ಕಾರ್ಯದರ್ಶಿಯಾಗಿ ವಿ.ನಾರಾಯಣನ್ ನೇಮಕ

ನವದೆಹಲಿ: ಕೇಂದ್ರ ಸರ್ಕಾರವು ವಿ. ನಾರಾಯಣನ್ ಅವರನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೊ)ಯ ನೂತನ ಅಧ್ಯಕ್ಷರಾಗಿ ಮತ್ತು ಬಾಹ್ಯಾಕಾಶ ಇಲಾಖೆಯ ಕಾರ್ಯದರ್ಶಿಯಾಗಿ ನೇಮಿಸಿದೆ. ನಾರಾಯಣನ್ ಅವರು ಪ್ರಸ್ತುತ ಸಂಸ್ಥೆಯ ಅಧ್ಯಕ್ಷ ಎಸ್. ಸೋಮನಾಥ ಅವರಿಂದ ಜನವರಿ 14 ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮಂಗಳವಾರದ ಅಧಿಸೂಚನೆಯಲ್ಲಿ, ಕ್ಯಾಬಿನೆಟ್ ನೇಮಕಾತಿ ಸಮಿತಿಯು ವಲಿಯಮಾಲಾ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ (ಎಲ್‌ಪಿಎಸ್‌ಸಿ) ಮುಖ್ಯಸ್ಥರಾಗಿರುವ ನಾರಾಯಣನ್ ಅವರು ಎರಡು ವರ್ಷಗಳ ಅಧಿಕಾರಾವಧಿ ಹೊಂದಿರುತ್ತಾರೆ ಎಂದು ಹೇಳಿದೆ.
ವಿ. ನಾರಾಯಣನ್ ಅವರು ಪ್ರತಿಷ್ಠಿತ ವಿಜ್ಞಾನಿ (ಅಪೆಕ್ಸ್ ಸ್ಕೇಲ್) ಮತ್ತು ಇಸ್ರೋದಲ್ಲಿ ಹಿರಿಯ ನಿರ್ದೇಶಕರಾಗಿದ್ದಾರೆ. ಅವರು ಮುಖ್ಯಸ್ಥರಾಗಿರುವ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್ ಉಡಾವಣಾ ವಾಹನಗಳಿಗೆ ದ್ರವ, ಅರೆ ಕ್ರಯೋಜೆನಿಕ್ ಮತ್ತು ಕ್ರಯೋಜೆನಿಕ್ ಪ್ರೊಪಲ್ಷನ್ ಹಂತಗಳು, ಉಪಗ್ರಹಗಳಿಗೆ ರಾಸಾಯನಿಕ ಮತ್ತು ವಿದ್ಯುತ್ ಪ್ರೊಪಲ್ಷನ್ ಸಿಸ್ಟಂಗಳು, ಉಡಾವಣಾ ವಾಹನಗಳಿಗೆ ನಿಯಂತ್ರಣ ವ್ಯವಸ್ಥೆಗಳು ಮತ್ತು ಬಾಹ್ಯಾಕಾಶ ವ್ಯವಸ್ಥೆಗಳ ಆರೋಗ್ಯ ಮೇಲ್ವಿಚಾರಣೆಗಾಗಿ ಸಂಜ್ಞಾಪರಿವರ್ತಕಗಳ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ. .

ಅವರು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಕೌನ್ಸಿಲ್-ಬಾಹ್ಯಾಕಾಶ ಟ್ರಾನ್ಸ್‌ಪೋರ್ಟ್‌ ವ್ಯವಸ್ಥೆಯ (PMC-STS) ಅಧ್ಯಕ್ಷರೂ ಆಗಿದ್ದಾರೆ, ಎಲ್ಲಾ ಉಡಾವಣಾ ವಾಹನ ಯೋಜನೆಗಳು ಮತ್ತು ಕಾರ್ಯಕ್ರಮಗಳಲ್ಲಿ ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆ ಇದಾಗಿದೆ. ಮತ್ತು ಭಾರತದ ಯೋಜಿತ ಮಾನವ ಬಾಹ್ಯಾಕಾಶ ಯಾನ ಗಗನಯಾನದ ರಾಷ್ಟ್ರೀಯ ಮಟ್ಟದ ಹ್ಯುಮನ್‌ ರೇಟೆಡ್ ಸರ್ಟಿಫಿಕೇಶನ್‌ ಬೋರ್ಡ್‌ (HRCB) ಅಧ್ಯಕ್ಷರಾಗಿದ್ದಾರೆ.
ತಮಿಳು ಮಾಧ್ಯಮ ಶಾಲೆಯಲ್ಲಿ ಅಧ್ಯಯನ ಮಾಡಿದ ನಂತರ, ನೂತನ ಇಸ್ರೋ ಮುಖ್ಯಸ್ಥರಾಗಲಿರುವ ನಾರಾಯಣನ್‌ ಖರಗಪುರದ ಐಐಟಿಯಿಂದ ಕ್ರಯೋಜೆನಿಕ್ ಎಂಜಿನಿಯರಿಂಗ್‌ನಲ್ಲಿ ಎಂಟೆಕ್ ಮತ್ತು ಏರೋಸ್ಪೇಸ್ ಇಂಜಿನಿಯರಿಂಗ್‌ನಲ್ಲಿ ಪಿಎಚ್‌ಡಿ ಮಾಡಿದ್ದಾರೆ, ಅಲ್ಲಿ ಅವರು ಎಂ ಟೆಕ್ ಕಾರ್ಯಕ್ರಮದಲ್ಲಿ ಮೊದಲ ಶ್ರೇಣಿಯನ್ನು ಸಾಧಿಸಿದ್ದಕ್ಕಾಗಿ ಬೆಳ್ಳಿ ಪದಕವನ್ನು ಪಡೆದರು. ರಾಕೆಟ್ ಮತ್ತು ಬಾಹ್ಯಾಕಾಶ ನೌಕೆಯ ಪ್ರೊಪಲ್ಷನ್ ತಜ್ಞರಾದ ಅವರು 1984 ರಲ್ಲಿ ಇಸ್ರೋಗೆ ಸೇರಿದರು ಮತ್ತು 2018 ರಲ್ಲಿ ಲಿಕ್ವಿಡ್ ಪ್ರೊಪಲ್ಷನ್ ಸಿಸ್ಟಮ್ಸ್ ಸೆಂಟರ್‌ನ ನಿರ್ದೇಶಕರಾದರು.

ಪ್ರಮುಖ ಸುದ್ದಿ :-   ಸರಿಯಾಗಿ ಓದುತ್ತಿಲ್ಲ ಎಂದು ಇಬ್ಬರು ಮಕ್ಕಳನ್ನು ನೀರಿನಲ್ಲಿ ಮುಳುಗಿಸಿ ಕೊಂದು, ತಾನೂ ಆತ್ಮಹತ್ಯೆಗೆ ಶರಣಾದ ತಂದೆ...!

ಅವರ ವೃತ್ತಿಜೀವನದ ಆರಂಭಿಕ ಹಂತದಲ್ಲಿ ಅವರು ಸೌಂಡಿಂಗ್ ರಾಕೆಟ್ಸ್ ಮತ್ತು ಆಗ್ಮೆಂಟೆಡ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ASLV) ಮತ್ತು ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (PSLV) ನ ಸಾಲಿಡ್ ಪ್ರೊಪಲ್ಷನ್ ನಲ್ಲಿ ಕೆಲಸ ಮಾಡಿದರು. ಅವರು ಇಸ್ರೋದ ಜಿಯೋಸಿಂಕ್ರೋನಸ್ ಉಡಾವಣಾ ವಾಹನಗಳಾದ GSLV Mk-II ಮತ್ತು GSLV Mk-III ಗಳಿಗೆ ಗಣನೀಯ ಕೊಡುಗೆ ನೀಡಿದ್ದಾರೆ.
“ಚಂದ್ರಯಾನ-2 ಲ್ಯಾಂಡರ್‌ ಹಾರ್ಡ್‌ ಲ್ಯಾಂಡಿಗ್‌ ಮಾಡಿ ವಿಫಲವಾಗಿದ್ದಕ್ಕೆ ಕಾರಣಗಳನ್ನು ಅಧ್ಯಯನ ಮಾಡಲು ರಚಿಸಿದ ರಾಷ್ಟ್ರೀಯ ತಜ್ಞರ ಸಮಿತಿಯ ಅಧ್ಯಕ್ಷರಾಗಿ, ಅವಲೋಕನ ಮಾಡಿ ಅದನ್ನು ಸರಿಪಡಿಸುವ ಕ್ರಮಗಳನ್ನು ಗುರುತಿಸುವಲ್ಲಿ ಕೊಡುಗೆ ನೀಡಿದ್ದಾರೆ. ಚಂದ್ರಯಾನ-3ಕ್ಕೆ ಎಲ್ಲಾ ಪ್ರೊಪಲ್ಷನ್ ಸಿಸ್ಟಮ್‌ಗಳಲ್ಲಿ ಕೆಲಸ ಮಾಡಿದ್ದಾರೆ ಎಂದು ಡಾ. ನಾರಾಯಣನ್ ಕೆಲಸ ಮಾಡಿದ್ದಾರೆ.
ಎಸ್.ಸೋಮನಾಥ ಅವರು ಜನವರಿ 2022 ರಂದು ಇಸ್ರೋ ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು ಮತ್ತು ಅವರ ಅಡಿಯಲ್ಲಿ ಭಾರತವು ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ರೋವರ್ ಅನ್ನು ಇಳಿಸಿದ ವಿಶ್ವದ ಮೊದಲ ದೇಶವಾಯಿತು. ಅಮೆರಿಕ, ಹಿಂದಿನ ಸೋವಿಯತ್ ಯೂನಿಯನ್ ಮತ್ತು ಚೀನಾದ ನಂತರ ಚಂದ್ರನ ಮೇಲೆ ಮೃದುವಾದ ಇಳಿಯುವಿಕೆ ಸಾಧಿಸಿದ ದೇಶವಾಗಿ ಗಣ್ಯರ ಕ್ಲಬ್‌ಗೆ ಸೇರಿಕೊಂಡಿತು. ಅಲ್ಲದೆ, ಚಂದ್ರನ ದಕ್ಷಿಣ ಧ್ರುವದ ಮೇಲೆ ನೌಕೆ ಇಳಿಸಿದ ಮೊದಲ ದೇಶವಾಯಿತು.

ಪ್ರಮುಖ ಸುದ್ದಿ :-   ಚಿನ್ನ ಕಳ್ಳಸಾಗಣೆ ಪ್ರಕರಣ : ಕಸ್ಟಡಿಯಲ್ಲಿ ನನಗೆ ಚಿತ್ರಹಿಂಸೆ, 10-15 ಬಾರಿ ಕಪಾಳಮೋಕ್ಷ ; ರನ್ಯಾ ರಾವ್ ಆರೋಪ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement