ಆಸ್ಪತ್ರೆಗೆ ಕರೆದೊಯ್ದ ಆಟೋ ಚಾಲಕನನ್ನು ಭೇಟಿಯಾದ ಸೈಫ್‌ ಅಲಿ ಖಾನ್‌

ಮುಂಬೈ : ಬಾಲಿವುಡ್ ಸ್ಟಾರ್ ಸೈಫ್ ಅಲಿ ಖಾನ್ ಚಾಕು ಇರಿತಕ್ಕೆ ಒಳಗಾಗಿ ಗಾಯಗೊಂಡ ನಂತರ ತುರ್ತು ಸಂದರ್ಭದಲ್ಲಿ ತಮ್ಮನ್ನು ಆಸ್ಪತ್ರೆಗೆ ಒಯ್ದ ಭಜನ್ ಸಿಂಗ್ ರಾಣಾ ಅವರನ್ನು ಭೇಟಿಯಾಗಿದ್ದಾರೆ.
ತಮ್ಮ ಬಾಂದ್ರಾ ಮನೆಯಲ್ಲಿ ಇರಿತಕ್ಕೆ ಒಳಗಾದ ನಂತರ ತಮ್ಮನ್ನು ಲೀಲಾವತಿ ಆಸ್ಪತ್ರೆಗೆ ಸಾಗಿಸುವ ಮೂಲಕ ನಿಜ ಜೀವನದ ಹೀರೋ ಆಗಿದ್ದಾರೆ. ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ರಾಣಾ ಅವರನ್ನು ಭೇಟಿಯಾದ ಸೈಫ್ ಅಲಿಖಾನ್ ಅವರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಈ ಕುರಿತ ಫೋಟೋಗಳು ವೈರಲ್ ಆಗಿದ್ದು, ರಾಣಾ ಅವರ ಪಕ್ಕ ಸೈಫ್ ಅಲಿಖಾನ್ ನಿಂತಿದ್ದಾರೆ.
ಲೀಲಾವತಿ ಆಸ್ಪತ್ರೆಯಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸೈಫ್ ಅಲಿಖಾನ್ ಆರು ದಿನಗಳ ಬಳಿಕ ಮಂಗಳವಾರ ಆಸ್ಪತ್ರೆಯಿಂದ ಡಿಸ್ಚಾರ್ಚ್ ಆದರು. ಅವರಿಗೆ ಶಸ್ತ್ರ ಚಿಕಿತ್ಸೆ ನಡೆಸಲಾಗಿತ್ತು.
ಸೈಫ್ ಅಲಿಖಾನ್ ಭೇಟಿ ಆದ ನಂತರ ಮಾತನಾಡಿದ ರಾಣಾ ಅವರು, ಮಧ್ಯಾಹ್ನ 3:30ಕ್ಕೆ ಭೇಟಿಯಾಗಲು ತಿಳಿಸಲಾಗಿತ್ತು. ಆದರೆ, ನಾಲ್ಕೈದು ನಿಮಿಷ ತಡವಾಗಿ ಹೋದೆ. ನಂತರ ಸೈಫ್ ಅಲಿಖಾನ್ ಭೇಟಿಯಾಯಿತು. ಅವರ ತಾಯಿ, ಮಕ್ಕಳು ಅಲ್ಲಿದ್ದರು. ಎಲ್ಲರೂ ತುಂಬಾ ಗೌರವದಿಂದ ಮಾತನಾಡಿಸಿದರು. ಅದೊಂದು ಸಹಜ ಭೇಟಿಯಾಗಿತ್ತು. ಬೇಗ ಹುಷಾರಾಗಿ ಎಂದು ಹೇಳಿದೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ಶಾಸಕ ಸ್ಥಾನದಿಂದ ಅನರ್ಹಗೊಂಡ ಜನಾರ್ದನ ರೆಡ್ಡಿ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement