ನವದೆಹಲಿ/ ಬೆಂಗಳೂರು : ಗಣರಾಜ್ಯೋತ್ಸವ ಅಂಗವಾಗಿ ರಾಷ್ಟ್ರಪತಿ ಪದಕ ಘೋಷಣೆ ಮಾಡಲಾಗಿದ್ದು, ಅಗ್ನಿ ಮತ್ತು ನಾಗರಿಕದಳದ ಸಿಬ್ಬಂದಿ ಸೇರಿದಂತೆ ಒಟ್ಟು 942 ಪೊಲೀಸ್ ಸಿಬ್ಬಂದಿ ವಿವಿಧ ರೀತಿಯ ಶೌರ್ಯ ಮತ್ತು ಸೇವಾ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ ಎಂದು ಸರ್ಕಾರದ ಪ್ರಕಟಣೆ ತಿಳಿಸಿದೆ. ಹೋಮ್ ಗಾರ್ಡ್, ನಾಗರಿಕ ರಕ್ಷಣೆ, ಪೊಲೀಸ್ ಸಿಬ್ಬಂದಿ ಸೇರಿದಂತೆ ವಿವಿಧ ಸೇವೆಗಳಲ್ಲಿ ಕರ್ತವ್ಯ ನಿರ್ವಹಣೆ ನಡೆಸಿದ ಸಿಬ್ಬಂದಿ ಈ ಗೌರವ ಪದಕಕ್ಕೆ ಪಾತ್ರರಾಗಿದ್ದಾರೆ. ಇದರಲ್ಲಿ 95 ಶೌರ್ಯ ಪ್ರಶಸ್ತಿಗಳಾಗಿವೆ.
ಶೌರ್ಯ ಪ್ರಶಸ್ತಿ ಪುರಸ್ಕೃತರಲ್ಲಿ ಮಾವೋ ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ನಿಯೋಜಿಸಲಾದ 28, ಜಮ್ಮು ಮತ್ತು ಕಾಶ್ಮೀರ ಪ್ರದೇಶದಲ್ಲಿ 28, ಈಶಾನ್ಯದಲ್ಲಿ ಮೂರು ಮತ್ತು ಇತರ ಪ್ರದೇಶಗಳಲ್ಲಿ ನಿಯೋಜಿಸಲಾದ 36 ಸಿಬ್ಬಂದಿ ಸೇರಿದ್ದಾರೆ. ವಿಶೇಷ ಸೇವೆಗಾಗಿ ನೀಡುವ 101 ರಾಷ್ಟ್ರಪತಿಗಳ ಪದಕಗಳಲ್ಲಿ, 85 ಪೊಲೀಸ್ ಸಿಬ್ಬಂದಿಗೆ, 5 ಅಗ್ನಿಶಾಮಕ ಸೇವಾ ಸಿಬ್ಬಂದಿಗೆ, 7 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ಸೇವೆಗೆ ಮತ್ತು 4 ಸುಧಾರಣಾ ಸೇವೆ ಗುರುತಿಸಿ ನೀಡಲಾಗಿದೆ. ಮೆರಿಟೋರಿಯಸ್ ಸೇವೆಗಾಗಿ 746 ಪದಕಗಳಲ್ಲಿ, 634 ಪೊಲೀಸ್ ಸೇವೆಗೆ, 37 ಅಗ್ನಿಶಾಮಕ ಸೇವೆಗೆ, 39 ಸಿವಿಲ್ ಡಿಫೆನ್ಸ್ ಮತ್ತು ಹೋಮ್ ಗಾರ್ಡ್ ಸೇವೆಗೆ ಮತ್ತು 36 ಸುಧಾರಣಾ ಸೇವೆಗೆ ನೀಡಲಾಗಿದೆ.
ರಾಷ್ಟ್ರಪತಿಗಳ ಪದಕದ ಗೌರವಕ್ಕೆ ಕರ್ನಾಟಕದ 21 ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ಭಾಜನರಾಗಿದ್ದಾರೆ. ಇಬ್ಬರು ಪೊಲೀಸ್ ಅಧಿಕಾರಿಗಳು ರಾಷ್ಟ್ರಪತಿಗಳ ವಿಶಿಷ್ಟ ಸೇವಾ ಪದಕ ಮತ್ತು 19 ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ರಾಷ್ಟ್ರಪತಿ ಶ್ಲಾಘನೀಯ ಸೇವಾ ಪದಕಕ್ಕೆ ಪಾತ್ರರಾಗಿದ್ದಾರೆ.
ವಿಶಿಷ್ಟ ಸೇವಾ ಪದಕ ಪುರಸ್ಕೃತರು
ಬಸವರಾಜು ಶರಣಪ್ಪ ಜಿಳ್ಳೆ- ಡಿಐಜಿಪಿ, ಕೆಎಸ್ಆರ್ಪಿ, ಬೆಂಗಳೂರು
ಹಂಜಾ ಹುಸೇನ್-ಕಮಾಂಡೆಂಟ್, ಕೆಎಸ್ಆರ್ಪಿ, ತುಮಕೂರು
ಶ್ಲಾಘನೀಯ ಸೇವಾ ಪದಕ ಪುರಸ್ಕೃತರು
ರೇಣುಕಾ ಕೆ ಸುಕುಮಾರ- ಡಿಐಜಿಪಿ, ಡಿಸಿಆರ್ಇ, ಬೆಂಗಳೂರು
ಸಂಜೀವ ಎಂ ಪಾಟೀಲ-ಎಐಜಿಪಿ, ಜನರಲ್, ಪೊಲೀಸ್ ಪ್ರಧಾನ ಕೇಂದ್ರ ಕಚೇರಿ
ಬಿಎಂ ಪ್ರಸಾದ- ಕಮಾಂಡೆಂಟ್, ಐಆರ್ಬಿ, ಕೊಪ್ಪಳ
ಗೋಪಾಲ ಡಿ ಜೋಗಿನ್-ಎಸಿಪಿ, ಸಿಸಿಬಿ ಬೆಂಗಳೂರು
ವೀರೇಂದ್ರ ನಾಯಕ ಎನ್-ಡೆಪ್ಯೂಟಿ ಕಮಾಂಡೆಂಟ್, ಕೆಎಸ್ಆರ್ಪಿ, ಬೆಂಗಳೂರು
ಗೋಪಾಲಕೃಷ್ಣ ಬಿ ಗೌಡರ-ಡಿವೈಎಸ್ಪಿ, ಚಿಕ್ಕೋಡಿ ಉಪವಿಭಾಗ, ಬೆಳಗಾವಿ
ಎಚ್. ಗುರುಬಸವರಾಜ-ಪೊಲೀಸ್ ಇನ್ಸ್ಪೆಕ್ಟರ್-ಲೋಕಾಯುಕ್ತ, ಚಿತ್ರದುರ್ಗ
ಜಯರಾಜ ಎಚ್-ಪೊಲೀಸ್ ಇನ್ಸ್ಪೆಕ್ಟರ್, ಗೋವಿಂದಪುರ ಪೊಲೀಸ್ ಠಾಣೆ, ಬೆಂಗಳೂರು
ಪ್ರದೀಪ ಬಿ ಆರ್- ಸರ್ಕಲ್ ಇನ್ಸ್ಪೆಕ್ಟರ್ ಆಫ್ ಪೊಲೀಸ್, ಹೊಳೆನರಸಿಪುರ ವೃತ್ತ, ಹಾಸನ
ಮೊಹಮ್ಮದ್ ಮುಕರಂ-ಪೊಲೀಸ್ ಇನ್ಸ್ಪೆಕ್ಟರ್ ಸಿಸಿಬಿ, ಬೆಂಗಳೂರು
ವಸಂತಕುಮಾರ ಎಂಎ, ಪೊಲೀಸ್ ಇನ್ಸ್ಪೆಕ್ಟರ್, ಬ್ಯುರೋ ಆಫ್ ಇಮಿಗ್ರೇಶನ್
ಮಂಜುನಾಥ ವಿ.ಜಿ-ಎಎಸ್ಐ ಸಿಐಡಿ, ಬೆಂಗಳೂರು
ಅಲ್ತಾಫ್ ಹುಸೇನ್ ಎನ್ ದಖನಿ-ಎಎಸ್ಐ, ಬೆಂಗಳೂರು
ಬಲೇಂದ್ರನ್-ಸ್ಟೇಷನ್ ಆರ್ಹೆಚ್ಸಿ, ಕೆಎಸ್ಆರ್ಪಿ, ಬೆಂಗಳೂರು
ಅರುಣಕುಮಾರ-ಸಿಎಚ್ಸಿ, ಡಿಐಜಿಪಿ ಕಚೇರಿ, ಕಲಬುರಗಿ
ನಯಾಜ್ ಅಂಜುಂ -ಎಎಚ್ಸಿ ಡಿಪಿಒ, ಚಿಕ್ಕಮಗಳೂರು
ಶ್ರೀನಿವಾಸ ಎಂ. -ಸಿಎಚ್ಸಿ, ಡಿಸಿಪಿ ಪಶ್ಚಿಮ ವಿಭಾಗ ಕಚೇರಿ, ಬೆಂಗಳೂರು
ಅಶ್ರಫ್ ಪಿ. ಎಂ-ಹಿರಿಯ ಗುಪ್ತ ಸಹಾಯಕರು, ರಾಜ್ಯ ಗುಪ್ತವಾರ್ತೆ, ಬೆಂಗಳೂರು
ಶಿವಾನಂದ ಬಿ-ಸಿಎಚ್ಸಿ ಕುಂದಾಪುರ ಪೊಲೀಸ್ ಠಾಣೆ, ಉಡುಪಿ
ಎಲ್ಲ ರಾಜ್ಯಗಳ ಪೊಲೀಸ್, ಅಗ್ನಿಶಾಮಕ, ಗೃಹರಕ್ಷಕ ಮತ್ತು ಇತರೆ ಸೇವೆಗಳ ಒಟ್ಟು 942 ಸಿಬ್ಬಂದಿಯು 2025ರ ಗಣರಾಜ್ಯೋತ್ಸವ ಅಂಗವಾಗಿ ಕೊಡುವ ಶೌರ್ಯ ಮತ್ತು ಸೇವಾ ಪದಕ ಗೌರವಕ್ಕೆ ಪಾತ್ರರಾಗಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ