ನವದೆಹಲಿ: ಉತ್ತರಾಖಂಡದಲ್ಲಿ ಇಂದಿನಿಂದ (ಜನವರಿ 27) ಏಕರೂಪ ನಾಗರಿಕ ಸಂಹಿತೆ (Uniform Civil Code) ಜಾರಿಯಾಗುತ್ತಿದ್ದು, ಎಲ್ಲಾ ನಾಗರಿಕರಿಗೆ ಮದುವೆ, ವಿಚ್ಛೇದನ, ಆಸ್ತಿ, ಉತ್ತರಾಧಿಕಾರ ಮತ್ತು ದತ್ತು ಕಾನೂನುಗಳಿಗೆ ಸಂಬಂಧಿಸಿದಂತೆ ಏಕರೂಪದ ಚೌಕಟ್ಟನ್ನು ಹಾಕುತ್ತದೆ. ಇದು ಗೋವಾದ ನಂತರ ನಾಗರಿಕರಿಗೆ ಏಕರೂಪದ ಕಾನೂನು ಚೌಕಟ್ಟನ್ನು ಹೊಂದಲಿರುವ ಎರಡನೇ ರಾಜ್ಯವಾಗಲಿದೆ.
2022ರ ಉತ್ತರಾಖಂಡದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ಪ್ರಮುಖ ಚುನಾವಣಾ ಭರವಸೆಗಳಲ್ಲಿ ಒಂದಾದ ಏಕರೂಪ ನಾಗರಿಕ ಸಂಹಿತೆ (Uniform Civil Code) ಮಸೂದೆಯನ್ನು ಉತ್ತರಾಖಂಡ ವಿಧಾನಸಭೆಯಲ್ಲಿ ಅಂಗೀಕರಿಸಿದ ಸುಮಾರು ಒಂದು ವರ್ಷದ ನಂತರ ಇದು ಜಾರಿಗೆ ಬರುತ್ತಿದೆ. ಇದರ ಷರತ್ತುಗಳ ಪೈಕಿ ಲಿವ್-ಇನ್ ಸಂಬಂಧಗಳ ಕಡ್ಡಾಯ ನೋಂದಣಿ ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನ ವ್ಯಕ್ತಿಗಳನ್ನು ಒಳಗೊಂಡಿರುವ ಲಿವ್-ಇನ್ ಸಂಬಂಧಗಳಿಗೆ ಪೋಷಕರ ಒಪ್ಪಿಗೆ. ಈ ನಿಯಮವು “ಲಿವ್-ಇನ್ ಸಂಬಂಧದಲ್ಲಿರುವ ಉತ್ತರಾಖಂಡದ ಯಾವುದೇ ನಿವಾಸಿಗಳಿಗೆ ಅನ್ವಯಿಸುತ್ತದೆ.
ಲಿವ್-ಇನ್ ಸಂಬಂಧಗಳನ್ನು ಘೋಷಣೆ ಮಾಡಲು ವಿಫಲವಾದರೆ ಅಥವಾ ತಪ್ಪು ಮಾಹಿತಿ ನೀಡಿದರೆ, ಒಬ್ಬ ವ್ಯಕ್ತಿಯನ್ನು ಮೂರು ತಿಂಗಳವರೆಗೆ ಜೈಲಿಗೆ ತಳ್ಳಬಹುದು ಅಥವಾ 25,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು. ನೋಂದಣಿಯಲ್ಲಿ ಒಂದು ತಿಂಗಳ ವಿಳಂಬವಾದರೂ ಮೂರು ತಿಂಗಳವರೆಗೆ ಜೈಲು ಶಿಕ್ಷೆ, 10,000 ರೂ. ದಂಡ ಅಥವಾ ಎರಡನ್ನೂ ವಿಧಿಸಬಹುದು.
ಮದುವೆಗಳನ್ನು ನೋಂದಾಯಿಸಿಕೊಳ್ಳಬೇಕು ಮತ್ತು ಯಾವುದೇ ಧರ್ಮದವರಾದರೂ ಎರಡೂ ಲಿಂಗಗಳ ಮದುವೆಯ ವಯಸ್ಸು 21 ವರ್ಷಗಳು. ಅವರು ಮದುವೆಯಾಗುವ ಮೊದಲು ತಮ್ಮ ಶಿಕ್ಷಣವನ್ನು ಪೂರ್ಣಗೊಳಿಸಬಹುದು ಎಂಬುದನ್ನು ಖಚಿತಪಡಿಸಿಕೊಳ್ಳುವುದನ್ನು ಇದು ಉದ್ದೇಶಿಸಿದೆ.
ಬಹುಪತ್ನಿತ್ವ, ಬಾಲ್ಯವಿವಾಹ, ತ್ರಿವಳಿ ತಲಾಖ್ ಮತ್ತು ವಿಚ್ಛೇದನಕ್ಕೆ ಏಕರೂಪ ನಾಗರಿಕ ಸಂಹಿತೆಯು ನಿಷೇಧಿಸುತ್ತದೆ. ಸಂಹಿತೆಯು ನಿರ್ದಿಷ್ಟ ಬುಡಕಟ್ಟು ಪಂಗಡಗಳಿಗೆ ಅನ್ವಯಿಸುವುದಿಲ್ಲ.
ಇದು ಉತ್ತರಾಧಿಕಾರ ಹಕ್ಕುಗಳ ವಿಷಯದಲ್ಲಿ ಸಮುದಾಯಗಳ ನಡುವೆ ಸಮಾನತೆ ತರುವ ಗುರಿಯನ್ನು ಹೊಂದಿದೆ. ಏಕರೂಪ ನಾಗರಿಕ ಸಂಹಿತೆ (UCC)ಯು ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳನ್ನು “ದಂಪತಿಯ ಕಾನೂನುಬದ್ಧ ಮಗು” ಎಂದು ಗುರುತಿಸುತ್ತದೆ ಮತ್ತು ಅವರು ಉತ್ತರಾಧಿಕಾರದಲ್ಲಿ ಸಮಾನ ಹಕ್ಕುಗಳನ್ನು ಪಡೆಯುವುದನ್ನು ಅದು ಖಚಿತಪಡಿಸುತ್ತದೆ. ಯಾವುದೇ ಲಿಂಗ ವ್ಯತ್ಯಾಸವಿಲ್ಲದೆ ಗಂಡು ಮತ್ತು ಹೆಣ್ಣು ಮಕ್ಕಳನ್ನು “ಮಗು” ಎಂದು ಉಲ್ಲೇಖಿಸಲಾಗುತ್ತದೆ.
ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯ ಅನುಷ್ಠಾನದಿಂದ ಏನೆಲ್ಲಾ ಬದಲಾವಣೆ..?
ಕಡ್ಡಾಯ ಮದುವೆ ನೋಂದಣಿ: ಎಲ್ಲಾ ಮದುವೆಗಳು ಈಗ ನೋಂದಣಿ ಮಾಡಬೇಕು.
ಏಕರೂಪದ ವಿಚ್ಛೇದನ ಕಾನೂನುಗಳು: ಧರ್ಮ ಅಥವಾ ಜಾತಿಯನ್ನು ಲೆಕ್ಕಿಸದೆ ಎಲ್ಲಾ ಸಮುದಾಯಗಳಿಗೆ ಒಂದೇ ವಿಚ್ಛೇದನ ಕಾನೂನು ಅನ್ವಯಿಸುತ್ತದೆ.
ಕನಿಷ್ಠ ಮದುವೆ ವಯಸ್ಸು: ಎಲ್ಲಾ ಧರ್ಮಗಳ ಹೆಣ್ಣುಮಕ್ಕಳ ಮದುವೆಗೆ ಕನಿಷ್ಠ ವಯಸ್ಸನ್ನು 18, ಹುಡುಗರ ಮದುವೆ ವಯಸ್ಸು 21
ಸಮಾನ ದತ್ತು ಹಕ್ಕುಗಳು: ದತ್ತು ಎಲ್ಲಾ ಧರ್ಮಗಳಿಗೆ ಮುಕ್ತವಾಗಿರುತ್ತದೆ, ಆದರೆ ಇನ್ನೊಂದು ಧರ್ಮದಿಂದ ಮಗುವನ್ನು ದತ್ತು ಪಡೆಯುವುದನ್ನು ನಿಷೇಧಿಸಲಾಗಿದೆ.
ಇದು ನಿಷಿದ್ಧ: ರಾಜ್ಯದಲ್ಲಿ ಇನ್ನು ಮುಂದೆ ‘ಹಲಾಲಾ’ ಮತ್ತು ‘ಇದ್ದತ್’ ಪದ್ಧತಿಗೆ ಅವಕಾಶ ನೀಡುವುದಿಲ್ಲ.
ಬಹುಪತ್ನಿತ್ವಕ್ಕೆ ನಿಷೇಧ : ಮೊದಲ ಹೆಂಡತಿ ಜೀವಂತವಾಗಿದ್ದರೆ ಎರಡನೇ ವಿವಾಹಕ್ಕೆ ಅನುಮತಿ ಇಲ್ಲ
ಸಮಾನ ಪಿತ್ರಾರ್ಜಿತ ಹಕ್ಕುಗಳು: ಪುತ್ರರು ಮತ್ತು ಪುತ್ರಿಯರಿಗೆ ಉತ್ತರಾಧಿಕಾರದಲ್ಲಿ ಸಮಾನ ಪಾಲು
ಲಿವ್-ಇನ್ ಸಂಬಂಧದ ನಿಯಮಗಳು: ಲಿವ್-ಇನ್ ಸಂಬಂಧಗಳಿಗೆ ನೋಂದಣಿ ಕಡ್ಡಾಯವಾಗಿರುತ್ತದೆ. 18 ಮತ್ತು 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ, ಪೋಷಕರ ಒಪ್ಪಿಗೆ ಕಡ್ಡಾಯ.
ಲಿವ್-ಇನ್ ಸಂಬಂಧಗಳಿಂದ ಜನಿಸಿದ ಮಕ್ಕಳ ಹಕ್ಕುಗಳು: ಈ ಮಕ್ಕಳು ವಿವಾಹಿತ ದಂಪತಿಗಳಿಗೆ ಜನಿಸಿದಂತೆಯೇ ಅದೇ ಹಕ್ಕುಗಳನ್ನು ಹೊಂದಿರುತ್ತಾರೆ.
ನಿಮ್ಮ ಕಾಮೆಂಟ್ ಬರೆಯಿರಿ