ಬಾಗಲಕೋಟೆ : ಹಲವರಿಂದ ಲಕ್ಷಾಂತರ ರೂ. ಸಾಲ ಮಾಡಿ ನಂತರ ಸಾಲಗಾರರಿಂದ ತಪ್ಪಿಸಿಕೊಳ್ಳಲು ಹೆಂಡತಿಯ ಬುರ್ಖಾ ಧರಿಸಿ ಓಡಾಡುತ್ತಿದ್ದ ವ್ಯಕ್ತಿಯೊಬ್ಬನಿಗೆ ಥಳಿಸಲಾಗಿದೆ.
ಬಾಗಲಕೋಟೆಯ ನವನಗರದ ಸೆಕ್ಟರ್ ನಂಬರ್ 47ರಲ್ಲಿ ಈ ಘಟನೆ ನಡೆದಿದೆ ಎಂದು ವರದಿಯಾಗಿದ್ದು, ಬುರ್ಖಾ ಹಾಕಿಕೊಂಡು ಓಡಾಡುತ್ತಿದ್ದ ವ್ಯಕ್ತಿಯನ್ನು ಸಾಲ ನೀಡಿದವರು ಕೊನೆಗೂ ಹಿಡಿದಿದ್ದು ಮನೆಯಿಂದ ಹೊರಗಡೆ ಎಳೆದು ಥಳಿಸಿದ್ದಾರೆ. ಅಹ್ಮದ್ ಜನಮಸಾಗರ್ ಹಲ್ಲೆಗೊಳಗಾದ ವ್ಯಕ್ತಿ.
ಸಾಲ ಕೊಟ್ಟವರು ಈತನ ಮನೆಯ ಬಳಿ ಬಂದು ಹುಡುಕಿದರೂ ಈತ ಸಿಗುತ್ತಿರಲಿಲ್ಲ. ಈತ ಸಾಲಗಾರರ ಬಳಿ ಲಕ್ಷಾಂತರ ರೂ. ಸಾಲ ಪಡೆದು, ಅವರಿಗೆ ಸಿಗದೇ ಓಡಾಡುತ್ತಿದ್ದ ಎನ್ನಲಾಗಿದೆ. ಅವರು ತನ್ನ ಗುರುತು ಹಿಡಬಾರದು ಎಂದು ಈತ ಬುರ್ಖಾ ಧರಿಸಿ ಓಡಾಡುತ್ತಿದ್ದ ಎಂದು ಹೇಳಲಾಗಿದೆ. ಸಾಲಗಾರರು ಅಹ್ಮದ್ ಮನೆಗೆ ಹೋದಾಗ ಬುರ್ಕಾ ಹಾಕಿಕೊಂಡು ಇದ್ದ ವ್ಯಕ್ತಿಯನ್ನು ನೋಡಿ ಅವರಿಗೆ ಅನುಮಾನ ಬಂದಿದೆ. ಬುರ್ಖಾ ಧರಿಸಿದ್ದ ವ್ಯಕ್ತಿ ಅಹ್ಮದ್ ಎಂದು ತಿಳಿದ ಸಾಲಾಗಾರರು, ಮನೆಯಿಂದ ಹೊರಗಡೆ ಎಳೆದು, ಥಳಿಸಿದ್ದಾರೆ.
ಬಾಗಲಕೋಟೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾದ ಮಾಹಿತಿ ಇಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ