ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದ ಅತಿದೊಡ್ಡ ವ್ಯಾಪಾರ ಪಾಲುದಾರರ ಮೇಲೆ ಸುಂಕಗಳನ್ನು ಹೇರಿದ ನಂತರ ಏಷ್ಯಾದ ಕರೆನ್ಸಿಗಳು ಕುಸಿದಿವೆ. ಸೋಮವಾರ ಮೊದಲ ಬಾರಿಗೆ ಭಾರತೀಯ ರೂಪಾಯಿ ಸೋಮವಾರ ದಾಖಲೆಯ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಭಾರತೀಯ ರೂಪಾಯಿ ಪ್ರತಿ ಅಮೆರಿಕ ಡಾಲರ್ ಎದುರು 87 ರಷ್ಟು ದುರ್ಬಲಗೊಂಡಿದೆ.
ಆರಂಭಿಕ ವಹಿವಾಟಿನಲ್ಲಿ ರೂಪಾಯಿ 0.5% ರಷ್ಟು ಕುಸಿದು ಡಾಲರ್ ಎದುರು 87.07 ಕ್ಕೆ ಇಳಿದಿದೆ, ವ್ಯಾಪಾರಿಗಳು ದಿನವಿಡೀ ಕರೆನ್ಸಿಯ ಮತ್ತಷ್ಟು ನಷ್ಟವನ್ನು ಎದುರಿಸಬೇಕಾಗಬಹುದು ಎಂದು ನಿರೀಕ್ಷಿಸಿದ್ದಾರೆ.
ಟ್ರಂಪ್ ತಮ್ಮ ಮೂರು ಆದೇಶಗಳಲ್ಲಿ, ಮಂಗಳವಾರದಿಂದ ಪ್ರಾರಂಭವಾಗುವ ಮೆಕ್ಸಿಕನ್ ಮತ್ತು ಹೆಚ್ಚಿನ ಕೆನಡಾದ ಆಮದುಗಳ ಮೇಲೆ 25% ಮತ್ತು ಚೀನಾದಿಂದ ಸರಕುಗಳ ಮೇಲೆ 10% ಸುಂಕಗಳನ್ನು ವಿಧಿಸಿದರು.
ಇದರಿಂದ ಡಾಲರ್ ಸೂಚ್ಯಂಕವು 0.3% ರಷ್ಟು 109.8 ಕ್ಕೆ ಏರಿತು, ಆದರೆ ಏಷ್ಯಾದ ಕರೆನ್ಸಿಗಳು ದುರ್ಬಲಗೊಂಡವು, ಕಡಲಾಚೆಯ ಚೈನೀಸ್ ಯುವಾನ್ ಅಮೆರಿಕನ್ ಡಾಲರ್ ಎದುರು 0.5%ರಷ್ಟು ಕುಸಿದು ಪ್ರತಿ ಡಾಲರ್‌ಗೆ 7.35ಕ್ಕೆ ತಲುಪಿತು.
ಕಚ್ಚಾ ತೈಲ ಬೆಲೆಗಳ ಏರಿಕೆಯು ಸ್ಥಳೀಯ ಕರೆನ್ಸಿಯ ಮೇಲೆ ಒತ್ತಡವನ್ನುಂಟು ಮಾಡಿತು. ಹೆಚ್ಚುತ್ತಿರುವ ವ್ಯಾಪಾರ ಯುದ್ಧದ ಚಿಂತೆಯಿಂದ ಕಚ್ಚಾ ತೈಲ ಬೆಲೆಗಳು ಏರಿತು ಎಂದು ಹೇಳಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ