A++ ಗ್ರೇಡ್‌ ನೀಡಲು ಲಂಚದ ಆರೋಪ : ನ್ಯಾಕ್‌ ಪರಿಶೀಲನಾ ಸಮಿತಿ ಅಧ್ಯಕ್ಷ, ದಾವಣಗೆರೆ ವಿವಿ ಪ್ರಾಧ್ಯಾಪಕಿ ಸೇರಿ 10 ಮಂದಿ ಬಂಧನ

ನವದೆಹಲಿ : A++ ಮಾನ್ಯತೆ ಪಡೆಯಲು ನ್ಯಾಷನಲ್ ಅಸೆಸ್ಮೆಂಟ್ ಮತ್ತು ಅಕ್ರೆಡಿಟೇಶನ್ ಕೌನ್ಸಿಲ್ (NAAC) ಒಳಗೊಂಡ ಲಂಚ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ನ್ಯಾಕ್‌ ಪರಿಶೀಲನಾ ಸಮಿತಿಯ ಅಧ್ಯಕ್ಷರು, ದಾವಣೆಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿ, ಜೆಎನ್‌ಯು ಪ್ರಾಧ್ಯಾಪಕ ಸೇರಿದಂತೆ 10 ವ್ಯಕ್ತಿಗಳನ್ನು ಬಂಧಿಸಿದೆ.
ಬಂಧಿತ ವ್ಯಕ್ತಿಗಳಲ್ಲಿ ನ್ಯಾಕ್ ಪರಿಶೀಲನಾ ಸಮಿತಿಯ ಅಧ್ಯಕ್ಷರು ಮತ್ತು ಆರು ಸದಸ್ಯರು ಮತ್ತು ಕೋನೇರು ಲಕ್ಷ್ಮಯ್ಯ ಶಿಕ್ಷಣ ಪ್ರತಿಷ್ಠಾನದ (ಕೆಎಲ್‌ಇಎಫ್) ಕಾರ್ಯನಿರ್ವಾಹಕರು ಸೇರಿದ್ದಾರೆ.
ಭಾರತದಾದ್ಯಂತ 20 ಸ್ಥಳಗಳಲ್ಲಿ ಸಿಬಿಐ ದಾಳಿ ನಡೆಸಿದ್ದು, ನಗದು, ಲ್ಯಾಪ್‌ಟಾಪ್‌ಗಳು ಮತ್ತು ಇತರ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿದೆ. ಬಂಧಿತರ ಮೇಲೆ ನ್ಯಾಕ್‌ A++ ಮಾನ್ಯತೆಗೆ ಬದಲಾಗಿ ಲಂಚ ತೆಗೆದುಕೊಂಡ ಆರೋಪವಿದೆ.

ಕೆಎಲ್‌ಇಎಫ್ (KLEF)ಗೆ A++ ಮಾನ್ಯತೆ ಪಡೆಯಲು ನ್ಯಾಕ್‌ (NAAC) ತಪಾಸಣಾ ಸಮಿತಿಯ ಸದಸ್ಯರಿಗೆ ಲಂಚ ನೀಡುವಲ್ಲಿ ಭಾಗಿಯಾಗಿರುವ ಆರೋಪದಲ್ಲಿ ಹಲವಾರು ವ್ಯಕ್ತಿಗಳನ್ನು ಸಿಬಿಐ ಬಂಧಿಸಿದ ಸರಣಿ ಕಾರ್ಯಾಚರಣೆಯ ನಂತರ ಇವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ನ್ಯಾಕ್‌ ಪರಿಶೀಲನಾ ಸಮಿತಿಯ ಅಧ್ಯಕ್ಷ, ರಾಮಚಂದ್ರ ಚಂದ್ರವಂಶಿ ವಿಶ್ವವಿದ್ಯಾಲಯದ ಉಪಕುಲಪತಿ ಸಮರೇಂದ್ರನಾಥ ಸಹಾ ಮತ್ತು ಸಮಿತಿಯ ಸದಸ್ಯರಾದ ಜೆಎನ್‌ಯು ಪ್ರಾಧ್ಯಾಪಕ ರಾಜೀವ ಸಿಜಾರಿಯಾ, ಭಾರತ್ ಇನ್‌ಸ್ಟಿಟ್ಯೂಟ್ ಆಫ್ ಲಾ ಡೀನ್ ಡಿ.ಗೋಪಾಲ, ಜಾಗರಣ ಲೇಕ್‌ಸಿಟಿ ವಿಶ್ವವಿದ್ಯಾಲಯದ ಡೀನ್ ರಾಜೇಶ್ ಸಿಂಗ್ ಪವಾರ್, ಜಿ.ಎಲ್‌. ಬಜಾಜ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್‌ಮೆಂಟ್‌ ನಿರ್ದೇಶಕ ಮಾನಸಕುಮಾರ ಮಿಶ್ರಾ, ದಾವಣಗೆರೆ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಗಾಯತ್ರಿ ದೇವರಾಜ ಮತ್ತು ಸಂಬಲ್ಪುರ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಬುಲು ಮಹಾರಾಣಾ ಸೇರಿದ್ದಾರೆ.

ಪ್ರಮುಖ ಸುದ್ದಿ :-   ಹಿಂದೂಸ್ತಾನಿ ಸಂಗೀತದ ಖ್ಯಾತ ಗಾಯಕ ಪಂಡಿತ ಪ್ರಭಾಕರ ಕಾರೇಕರ ನಿಧನ

ನ್ಯಾಕ್ ತಂಡಕ್ಕೆ ಹಣ, ಚಿನ್ನ, ಮೊಬೈಲ್ ಫೋನ್‌ಗಳು ಮತ್ತು ಲ್ಯಾಪ್‌ಟಾಪ್‌ಗಳನ್ನು ಒಳಗೊಂಡಂತೆ ಲಂಚದ ನೀಡಿದ್ದನ್ನು ಸಿಬಿಐನ ತನಿಖೆಯ ಶೋಧ ಕಾರ್ಯಾಚರಣೆ ವೇಳೆ ಪತ್ತೆಹಚ್ಚಲಾಯಿತು. ಚೆನ್ನೈ, ಬೆಂಗಳೂರು, ವಿಜಯವಾಡ, ಪಲಮು, ಸಂಬಲ್‌ಪುರ, ಭೋಪಾಲ್, ಬಿಲಾಸ್‌ಪುರ್, ಗೌತಮ್ ಬುದ್ಧ ನಗರ ಮತ್ತು ನವದೆಹಲಿ ಸೇರಿದಂತೆ ಭಾರತದಾದ್ಯಂತ 20 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ ಎಂದು ಸಂಸ್ಥೆ ತಿಳಿಸಿದೆ.
ಒಟ್ಟಾರೆಯಾಗಿ, ಸಿಬಿಐ ಅಂದಾಜು ₹ 37 ಲಕ್ಷ ನಗದು, ಆರು ಲೆನೊವೊ ಲ್ಯಾಪ್‌ಟಾಪ್‌ಗಳು, ಒಂದು ಐಫೋನ್ 16 ಪ್ರೊ ಮತ್ತು ಇತರ ದೋಷಾರೋಪಣೆಯ ವಸ್ತುಗಳನ್ನು ವಶಪಡಿಸಿಕೊಂಡಿದೆ.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement