ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರು? ಐದಾರು ಹೆಸರುಗಳು ಮುಂಚೂಣಿಯಲ್ಲಿ…

ಮಣಿಪುರದ ಮುಖ್ಯಮಂತ್ರಿ ಸ್ಥಾನಕ್ಕೆ ಭಾನುವಾರ ಎನ್. ಬಿರೇನ್ ಸಿಂಗ್ ಅವರ ಹಠಾತ್ ಮತ್ತು ಅನಿರೀಕ್ಷಿತ ರಾಜೀನಾಮೆ ನೀಡಿದ ನಂತರ ಮಣಿಪುರದ ಮುಂದಿನ ಮುಖ್ಯಮಂತ್ರಿ ಯಾರಾಗಬಹುದು ಹಲವು ಹೆಸರುಗಳು ಮೆನ್ನೆಲೆಗೆ ಬಂದಿವೆ. ಹಿಂಸಾಚಾರ ಪೀಡಿತ ರಾಜ್ಯದ ಮುಂದಿನ ಮುಖ್ಯಮಂತ್ರಿಯಾಗಿ ಯಾರು ಅಧಿಕಾರ ಸ್ವೀಕರಿಸುತ್ತಾರೆ ಎಂಬ ಪ್ರಶ್ನೆಗಳು ಎದ್ದಿವೆ.
ಭಾರತೀಯ ಜನತಾ ಪಕ್ಷ (ಬಿಜೆಪಿ) ಇನ್ನೂ ಅಧಿಕೃತ ಹೇಳಿಕೆ ನೀಡದಿದ್ದರೂ, ಮಣಿಪುರದ ಉನ್ನತ ಹುದ್ದೆಗೆ ಸಂಭಾವ್ಯ ಅಭ್ಯರ್ಥಿಗಳ ಹೆಸರುಗಳು ಚರ್ಚೆಯಾಗುತ್ತಿವೆ.
ಬಿರೇನ್ ಸಿಂಗ್ ಅವರ ಸ್ಥಾನಕ್ಕೆ ಬಿಜೆಪಿಯ ಆಯ್ಕೆಯ ಕುರಿತು ನಡೆಯುತ್ತಿರುವ ಊಹಾಪೋಹಗಳ ನಡುವೆ, ಈ ಐದಾರು ಹೆಸರುಗಳು ಮಣಿಪುರ ಮುಖ್ಯಮಂತ್ರಿ ಹುದ್ದೆಗೆ ಪ್ರಮುಖ ದಾವೆದಾರರು ಎಂದು ಊಹಿಸಲಾಗಿದೆ. ಮೂಲಗಳ ಪ್ರಕಾರ, ರಾಜ್ಯದ ಪಕ್ಷದ ಉಸ್ತುವಾರಿ ಸಂಬಿತ್ ಪಾತ್ರ ಅವರೊಂದಿಗಿನ ಖಾಸಗಿ ಸಭೆಯಲ್ಲಿ ಈ ವ್ಯಕ್ತಿಗಳು ಹಾಜರಿದ್ದರು ಎಂದು ವರದಿಯಾಗಿದೆ.
ತೊಕ್ಚೊಂ ಸತ್ಯಬ್ರತ ಸಿಂಗ್
ತೊಕ್ಚೋಮ್ ಸತ್ಯಬ್ರತ ಸಿಂಗ್ ಅವರು ಮಣಿಪುರದ ಬಿಜೆಪಿ ರಾಜಕಾರಣಿ ಮತ್ತು 2017 ಮತ್ತು 2022 ರಲ್ಲಿ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಯೈಸ್ಕುಲ್ ಕ್ಷೇತ್ರದಿಂದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ. ಪ್ರಸ್ತುತ, ಅವರು ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿದ್ದಾರೆ. ಅವರು ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣೆ, ಕಾನೂನು ಮತ್ತು ಮಣಿಪುರದ ಶಾಸಕಾಂಗ ವ್ಯವಹಾರಗಳು, ಕಾರ್ಮಿಕ ಮತ್ತು ಉದ್ಯೋಗ ಖಾತೆಗಳ ರಾಜ್ಯ ಕ್ಯಾಬಿನೆಟ್ ಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ.
ಬಸಂತ ಕುಮಾರ್ ಸಿಂಗ್
2ನೇ ಬಿರೇನ್ ಸಿಂಗ್ ಸಚಿವ ಸಂಪುಟದ ಶಿಕ್ಷಣ ಸಚಿವ ಬಸಂತ ಕುಮಾರ್ ಸಿಂಗ್ ಅವರು ಮಣಿಪುರದ ಬಿಷ್ಣುಪುರ ಜಿಲ್ಲೆಯ ನಂಬೋಲ್ ವಿಧಾನಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಶಾಸಕರಾಗಿದ್ದಾರೆ, 2022 ರ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ನಲ್ಲಿ ಗೆದ್ದಿದ್ದಾರೆ. ಅ ರಾಜ್ಯ ಸರ್ಕಾರದಲ್ಲಿ ಶಿಕ್ಷಣ ಸಚಿವರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಹೈದರಾಬಾದ್‌ ಕ್ರಿಕೆಟ್‌ ಸ್ಟೇಡಿಯಂ ಸ್ಟ್ಯಾಂಡ್‌ ನಿಂದ ಮೊಹಮ್ಮದ್ ಅಜರುದ್ದೀನ್ ಹೆಸರು ತೆಗೆದುಹಾಕಲು ಆದೇಶ...

ರಾಧೇಶ್ಯಾಮ್ ಸಿಂಗ್
ಬಿಜೆಪಿ ನಾಯಕ ರಾಧೇಶ್ಯಾಮ್ ಸಿಂಗ್ ಅವರು 2017 ರ ಮಣಿಪುರ ವಿಧಾನಸಭೆಯಲ್ಲಿ ಹೀರೋಕ್‌ನಿಂದ ಮಣಿಪುರ ವಿಧಾನಸಭೆಗೆ ಆಯ್ಕೆಯಾಗಿದ್ದಾರೆ. ಅವರು ಎನ್ ಬಿರೇನ್ ಸಿಂಗ್ ಅವರ ಸಂಪುಟದಲ್ಲಿ ಶಿಕ್ಷಣ, ಕಾರ್ಮಿಕ ಮತ್ತು ಉದ್ಯೋಗ ಸಚಿವರಾಗಿದ್ದರು. ನಂತರ ಅವರು 2022 ರಲ್ಲಿ ಮರು ಆಯ್ಕೆಯಾದರು ಮತ್ತು ಮಣಿಪುರದ ಮುಖ್ಯಮಂತ್ರಿಯ ಸಲಹೆಗಾರರಾದರು. ಗಮನಾರ್ಹವೆಂದರೆ, ರಾಧೇಶ್ಯಾಮ್ ಕೂಡ ಮಣಿಪುರದ ನಿವೃತ್ತ ಐಪಿಎಸ್ ಅಧಿಕಾರಿ. ಅವರು 2006 ರಲ್ಲಿ ಶೌರ್ಯಕ್ಕಾಗಿ ರಾಷ್ಟ್ರಪತಿಗಳ ಪೊಲೀಸ್ ಪದಕವನ್ನೂ ಪಡೆದಿದ್ದಾರೆ.
ಯುಮ್ನಮ್ ಖೇಮಚಂದ ಸಿಂಗ್
2017 ರಿಂದ 2022 ರವರೆಗೆ ಮಣಿಪುರ ವಿಧಾನಸಭೆಯ ಸ್ಪೀಕರ್ ಆಗಿ ಸೇವೆ ಸಲ್ಲಿಸಿದ ಯುಮ್ನಮ್ ಖೇಮಚಂದ ಸಿಂಗ್ ಅವರು ಸಚಿವ ಸಂಪುಟದಲ್ಲಿ ಮುನ್ಸಿಪಲ್ ಅಡ್ಮಿನಿಸ್ಟ್ರೇಷನ್ ಹೌಸಿಂಗ್ ಡೆವಲಪ್ಮೆಂಟ್ (MAHUD) ಮತ್ತು ಶಿಕ್ಷಣ ಇಲಾಖೆಯ ಕ್ಯಾಬಿನೆಟ್ ಸಚಿವರಾಗಿದ್ದಾರೆ.
ಬಿಸ್ವಜಿತ್ ಸಿಂಗ್
2012ರಲ್ಲಿ ತೃಣಮೂಲ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದ ಬಿಸ್ವಜಿತ್ ಸಿಂಗ್ 2015ರಲ್ಲಿ ರಾಜೀನಾಮೆ ನೀಡಿ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದರು. ಬಿಸ್ವಜಿತ್ ಸಿಂಗ್ ಅವರು ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಮತ್ತು ವಿದ್ಯುತ್, ಕೃಷಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರಾಗಿದ್ದಾರೆ

ಗೋವಿಂದಾಸ್ ಕೊಂತೌಜಮ್
2022 ರ ಮಣಿಪುರ ವಿಧಾನಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದಿಂದ ಬಿಷ್ಣುಪುರ ಜಿಲ್ಲೆಯ ಬಿಷ್ಣುಪುರ ಕ್ಷೇತ್ರದಿಂದ ಮಣಿಪುರ ವಿಧಾನಸಭೆಯ ಸದಸ್ಯರಾಗಿ ಸತತ ಏಳನೇ ಬಾರಿಗೆ ಗೋವಿಂದಸ್ ಕೊಂತೌಜಮ್ ಸಿಂಗ್ ಆಯ್ಕೆಯಾದವರು. ಪ್ರಸ್ತುತ, ಅವರು ರಾಜ್ಯದಲ್ಲಿ ಪಿಡಬ್ಲ್ಯುಡಿ(PWD), ಯುವ ವ್ಯವಹಾರಗಳು ಮತ್ತು ಕ್ರೀಡಾ ಇಲಾಖೆ ಸಚಿವರಾಗಿದ್ದಾರೆ.
ಫೆಬ್ರವರಿ 10 ರಂದು ತಮ್ಮ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಗಿ ಮಣಿಪುರ ಕಾಂಗ್ರೆಸ್ ಘೋಷಿಸಿದ ಒಂದು ದಿನದ ನಂತರ ಬಿರೇನ್ ಸಿಂಗ್ ರಾಜೀನಾಮೆ ನೀಡಿದ್ದಾರೆ. ಬಿಜೆಪಿಯ ರಾಷ್ಟ್ರೀಯ ಉಸ್ತುವಾರಿ ಸಂಬಿತ್ ಪಾತ್ರಾ ಅವರು ಇತ್ತೀಚೆಗೆ ಮಣಿಪುರದ ಪ್ರಮುಖ ರಾಜಕೀಯ ವ್ಯಕ್ತಿಗಳೊಂದಿಗೆ ಮುಚ್ಚಿದ ಬಾಗಿಲಿನ ಸಭೆ ನಡೆಸಿದರು. ಪಕ್ಷದ ಮುಂದಿರುವ ಪ್ರಮುಖ ಸವಾಲು ಎಂದರೆ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸುವ ನಾಯಕನನ್ನು ಆಯ್ಕೆ ಮಾಡುವುದು, ಹೊಸ ಮುಖವು ಮುಖ್ಯಮಂತ್ರಿ ಬಿರೇನ್ ಸಿಂಗ್ ಅವರ ಬೆಂಬಲಿಗರು ಮತ್ತು ಅವರ ವಿರೋಧಿಗಳನ್ನು ಒಟ್ಟಿಗೆ ಸೇರಿಸುವುದನ್ನು ಖಚಿತಪಡಿಸಿಕೊಳ್ಳುವುದು ಹಾಗೂ ಪಕ್ಷದ ಒಗ್ಗಟ್ಟು ಕಾಪಾಡಲು ಆಯ್ಕೆಯಾದ ನಾಯಕನಿಗೆ ಎರಡೂ ಬಣಗಳ ಬೆಂಬಲವಿರುವುದು ಅತ್ಯಗತ್ಯ ಎಂದು ಪ್ರತಿಪಾದಿಸಿದ್ದಾರೆ.
ಇಂಫಾಲ್‌ನ ಖಾಸಗಿ ಹೊಟೇಲ್‌ನಲ್ಲಿ ಸಭೆ ನಡೆದಿದ್ದು, ರಾಧೇಶ್ಯಾಂ, ಖೇಮಚಂದ್, ನಿಶಿಕಾಂತ್, ಮತ್ತು ನಿರುಲ್ ಹಸನ್ ಸೇರಿದಂತೆ ಹಲವು ಪ್ರಮುಖ ಬಿಜೆಪಿ ನಾಯಕರು ಉಪಸ್ಥಿತರಿದ್ದರು, ಇವರೆಲ್ಲರೂ ಚರ್ಚೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ...!

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement