ಇವಿಎಂ ಡೇಟಾಗಳನ್ನು ಅಳಿಸಬೇಡಿ: ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್‌ ಸೂಚನೆ

ನವದೆಹಲಿ: ಇವಿಎಂ(EVM) ದತ್ತಾಂಶಗಳನ್ನು‌( ಅಳಿಸಬೇಡಿ ಎಂದು ಸುಪ್ರೀಂ ಕೋರ್ಟ್ (Supreme Court) ಚುನಾವಣಾ ಆಯೋಗಕ್ಕೆ ಮಂಗಳವಾರ(ಫೆ.11) ಸೂಚನೆ ನೀಡಿದೆ.
ಮತ ಎಣಿಕೆ ಮುಗಿದ ನಂತರವೂ ಎಲೆಕ್ಟ್ರಾನಿಕ್ ಮತ ಯಂತ್ರಗಳ ದತ್ತಾಂಶವನ್ನು ಅಳಿಸಬಾರದು ಎಂದು ಕೋರಿ ಸಲ್ಲಿಸಲಾದ ಅರ್ಜಿಗೆ ಪ್ರತಿಕ್ರಿಯೆಯಾಗಿ ಸುಪ್ರೀಂ ಕೋರ್ಟ್ ಈ ಸೂಚನೆ ನೀಡಿದ್ದು, ಸದ್ಯಕ್ಕೆ ಇವಿಎಂನಿಂದ ಯಾವುದೇ ದತ್ತಾಂಶ ಅಳಿಸಬೇಡಿ ಅಥವಾ ಯಾವುದೇ ದತ್ತಾಂಶವನ್ನು ಮರುಲೋಡ್ ಮಾಡಬೇಡಿ ಎಂದು ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸಂಜೀವ ಖನ್ನಾ ನೇತೃತ್ವದ ಪೀಠ ಸೂಚಿಸಿದೆ.
ಎಡಿಆ‌ರ್, ಹರಿಯಾಣ ಹಾಗೂ ಕಾಂಗ್ರೆಸ್‌ನ ಒಂದು ಗುಂಪು ಸಲ್ಲಿಸಿದ್ದ ಅರ್ಜಿ ಸಂಬಂಧ ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಿತು.

ಚುನಾವಣೆಯ ನಂತರ ಇವಿಎಂ ಮೆಮೊರಿ ಮತ್ತು ಮೈಕ್ರೋ ಕಂಟ್ರೋಲರ್ ಅನ್ನು ಅಳಿಸುವ ಪ್ರಕ್ರಿಯೆಯ ಬಗ್ಗೆ ಚುನಾವಣಾ ಆಯೋಗವು ನ್ಯಾಯಾಲಯಕ್ಕೆ ಮಾಹಿತಿ ಒದಗಿಸಬೇಕು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಸೋತ ಅಭ್ಯರ್ಥಿ ಸ್ಪಷ್ಟೀಕರಣ ಬಯಸಿದರೆ, ಇಂಜಿನಿಯರ್‌ಗಳು ಪರಿಶೀಲಿಸಿ ಯಾವುದೇ ಟ್ಯಾಂಪರಿಂಗ್ ನಡೆದಿಲ್ಲ ಎಂದು ಸ್ಪಷ್ಟೀಕರಣವನ್ನು ನೀಡಬಹುದು ಎಂದು ಎಂದು ಪೀಠ ತಿಳಿಸಿದೆ.
ವಿಚಾರಣೆ ಸಂದರ್ಭದಲ್ಲಿ ಎಡಿಆರ್ ಪರವಾಗಿ ಹಿರಿಯ ನ್ಯಾಯವಾದಿ ಪ್ರಶಾಂತ ಭೂಷಣ ಹಾಜರಾಗಿದ್ದರು. ಸುಪ್ರೀಂ ಕೋರ್ಟ್ ತೀರ್ಪಿನಂತೆ ಪ್ರಮಾಣಿತ ಕಾರ್ಯಾಚರಣೆ ವಿಧಾನವನ್ನು ಚುನಾವಣಾ ಆಯೋಗ ಅಳವಡಿಸಿಕೊಳ್ಳಬೇಕು. ಒಂದು ವೇಳೆ ಇವಿಎಂ ತಂತ್ರಾಂಶದಲ್ಲಿ ದೋಷವಿದ್ದರೆ ಅಥವಾ ತಿರುಚಿರುವ ಆರೋಪದ ಬಗ್ಗೆ ಯಾರಾದರೂ ಅನುಮಾನ ವ್ಯಕ್ತಪಡಿಸಿದರೆ ಈ ಬಗ್ಗೆ ಪರೀಕ್ಷಿಸಲು ಕೋರಬಹುದು ಎಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.
ಸುಪ್ರೀಂ ಕೋರ್ಟ್ ವಿಚಾರಣೆಯನ್ನು ಮಾರ್ಚ್ 17ಕ್ಕೆ ಮುಂದೂಡಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನಕ್ಕೆ ಐಎಂಎಫ್‌ನ ಬೇಲ್‌ಔಟ್ ಪ್ಯಾಕೇಜ್ ಮೇಲಿನ ಮತದಾನದಿಂದ ದೂರ ಉಳಿದ ಭಾರತ ; ಪಾಕಿಸ್ತಾನದ 'ಕಳಪೆ ದಾಖಲೆ'ಯ ಉಲ್ಲೇಖ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement