ಅನಾರೋಗ್ಯ : ತುಳುನಾಡಿನ ದೈವದ ಮೊರೆ ಹೋದ ಖ್ಯಾತ ನಟ ವಿಶಾಲ

ಮಂಗಳೂರು: ಅನಾರೋಗ್ಯದ ಹಿನ್ನೆಲೆಯಲ್ಲಿ ತಮಿಳಿನ ಖ್ಯಾತ ನಟ ವಿಶಾಲ ಅವರು ತುಳುನಾಡಿನ ದೈವದ ಮೊರೆ ಹೋಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ತಮಿಳಿನ ʼಮದಗಜರಾಜʼ ಸಿನಿಮಾ ಪ್ರಚಾರದ ವೇಳೆ ವಿಶಾಲ ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಬಳಿಕ ಅವರು ತೀವ್ರ ವೈರಲ್‌ ಫೀವರ್‌ನಿಂದ ಬಳಲುತ್ತಿರುವುದಾಗಿ ವೈದ್ಯರು ತಿಳಿಸಿದ್ದರು. ಆದರೆ, ಇದೀಗ ಅನಾರೋಗ್ಯದ ನಿವಾರಣೆಗಾಗಿ ತುಳುನಾಡಿನ ದೈವಸ್ಥಾನದ ಮೊರೆ ಹೋಗಿದ್ದರು.
ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ತಾಲೂಕಿನ ಹರಿಪಾದೆಯ ಧರ್ಮದೈವ ಜಾರಂದಾಯ ದೈವಸ್ಥಾನಕ್ಕೆ ಮಂಗಳವಾರ ರಾತ್ರಿ ಭೇಟಿ ನೀಡಿ, ಆರೋಗ್ಯ ‌ಸಮಸ್ಯೆ ಬಗ್ಗೆ ಜಾರಂದಾಯ ದೈವದ ಬಳಿ ಪ್ರಾರ್ಥಿಸಿದ್ದಾರೆ.
ಹರಿಪಾದೆ ಜಾರಂದಾಯ ವಾರ್ಷಿಕ ನೇಮದ ಹಿನ್ನೆಲೆಯಲ್ಲಿ ಕಾಲ ವಿಶಾಲ ಭಕ್ತಿಯಿಂದ ಜಾರಂದಾಯ ನೇಮವನ್ನು ವೀಕ್ಷಿಸಿದ್ದಾರೆ. ನಟ ವಿಶಾಲ ಅವರ ಸಮಸ್ಯೆ ಆಲಿಸಿದ ಜಾರಂದಾಯ ದೈವ, ನಾನಿದ್ದೇನೆ ಎಂದು ಅಭಯ ನೀಡಿದೆ. ಇದಾದ ಮೇಲೆ, ಸಂಪೂರ್ಣ ಗುಣಮುಖವಾಗಿ ಬಂದು ಶ್ರೀ ಕ್ಷೇತ್ರದಲ್ಲಿ ತುಲಾಭಾರ ಸೇವೆ ಕೊಡಲು ಸೂಚಿಸಿದೆ ಎನ್ನಲಾಗಿದೆ.

ಇದೇ ವರ್ಷ ಜನವರಿ ಮೊದಲ ವಾರದಲ್ಲಿ ಚೆನ್ನೈನಲ್ಲಿ ನಡೆದಿದ್ದ ಮದಗಜರಾಜ ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ವಿಶಾಲ ಅವರು ತೀವ್ರ ಅನಾರೋಗ್ಯಕ್ಕೀಡಾಗಿದಂತೆ ಕಂಡಿದ್ದರು. ಅವರ ಕೈಗಳು ನಡುಗುತ್ತಿದ್ದವು. ವಿಶಾಲ್‌ ಅವರು ಸಹಾಯಕ ಸಿಬ್ಬಂದಿಯ ಕೈಹಿಡಿದುಕೊಂಡು ಅವರು ಸಭಾಂಗಣಕ್ಕೆ ಬಂದಿದ್ದರು. ಈ ಬಗ್ಗೆ ವೈದ್ಯರು ಸ್ಪ,ಷ್ಟನೆ ನೀಡಿ, ವಿಶಾಲ ಅವರಿಗೆ ವೈರಲ್ ಫೀವರ್ ಇದೆ. ಅದರ ನಡುವೆಯೂ ಅವರು ಕಾರ್ಯಕ್ರಮಕ್ಕೆ ಬಂದಿದ್ದರಿಂದ ಅವರಿಗೆ ಕಾರ್ಯಕ್ರಮದಲ್ಲಿ ಮಾತನಾಡಲು ಆಗಿರಲಿಲ್ಲ ಎಂದು ಹೇಳಿದ್ದರು. ಇದಾದ ಬಳಿಕ ಎಲ್ಲೂ ಕಾಣಿಸಿಕೊಂಡಿರದ ವಿಶಾಲ್ ಅವರು ದಕ್ಷಿಣ ಕನ್ನಡ ದೈವಸ್ಥಾನಕ್ಕೆ ಭೇಟಿ ನೀಡಿ, ಆರೋಗ್ಯಕ್ಕಾಗಿ ಪ್ರಾರ್ಥಿಸಿ, ಹರಕೆ ಹೊತ್ತಿದ್ದಾರೆ.

ಪ್ರಮುಖ ಸುದ್ದಿ :-   ಜನಿವಾರ ವಿವಾದ | ವಿದ್ಯಾರ್ಥಿ ಸುಚಿವ್ರತಗೆ ಭೀಮಣ್ಣ ಖಂಡ್ರೆ ಇಂಜಿನಿಯರಿಂಗ್‌ ಕಾಲೇಜಿನಲ್ಲಿ ಉಚಿತ ಪ್ರವೇಶ; ಸಚಿವ ಈಶ್ವರ ಖಂಡ್ರೆ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement