ಬೆಂಗಳೂರು: ರಾಜ್ಯದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದ ಗಣ್ಯರಿಗೆ ರಾಜ್ಯ ಸರ್ಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 2024-25 ನೇ ಸಾಲಿನ ವಿವಿಧ ಪ್ರಶಸ್ತಿಗಳನ್ನು (Karnataka State Awards) ಪ್ರಕಟಿಸಲಾಗಿದೆ.
ಬಸವ ರಾಷ್ಟ್ರೀಯ ಪುರಸ್ಕಾರ, ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ, ಟಿ.ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ, ಗಾನಯೋಗಿ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ ಸೇರಿದಂತೆ 19 ರಾಷ್ಟ್ರೀಯ ಮತ್ತು ರಾಜ್ಯ ಪ್ರಶಸ್ತಿಗಳನ್ನು ಘೋಷಿಸಿದೆ.
ಪ್ರಶಸ್ತಿ ಪುರಸ್ಕೃತರ ಪಟ್ಟಿ …
ಬಸವ ರಾಷ್ಟ್ರೀಯ ಪುರಸ್ಕಾರ – ಡಾ. ಎಸ್. ಆರ್. ಗುಂಜಾಳ ಧಾರವಾಡ.
ಶ್ರೀ ಭಗವಾನ್ ಮಹಾವೀರ ರಾಷ್ಟ್ರೀಯ ಶಾಂತಿ ಪ್ರಶಸ್ತಿ – ಪಂಡಿತರತ್ನ ಎ.ಶಾಂತಿರಾಜ, ಶಾಸ್ತ್ರೀ ಟ್ರಸ್ಟ್ ಬೆಂಗಳೂರು
ಟಿ ಚೌಡಯ್ಯ ರಾಷ್ಟ್ರೀಯ ಪ್ರಶಸ್ತಿ – ಬಸಪ್ಪ ಎಚ್ ಭಜಂತ್ರಿ ಬಾಗಲಕೋಟ
ಗಾನಯೋಗಿ ಪಂಡಿತ ಪಂಚಾಕ್ಷರಿ ಗವಾಯಿ ರಾಷ್ಟ್ರೀಯ ಪ್ರಶಸ್ತಿ – ಬೇಗಂ ಪರ್ವೀನ್ ಸುಲ್ತಾನ್ ಮುಂಬಯಿ
ಪಂಪ ಪ್ರಶಸ್ತಿ – ಡಾ ಬಿ ಎ ವಿವೇಕ ರೈ ದಕ್ಷಿಣ ಕನ್ನಡ
ಸಂಗೊಳ್ಳಿ ರಾಯಣ್ಣ ಪ್ರಶಸ್ತಿ – ಕೆ ರಾಜಕುಮಾರ ಕೋಲಾರ
ಅಕ್ಕಮಹಾದೇವಿ ಪ್ರಶಸ್ತಿ – ಡಾ ಹೇಮಾ ಪಟ್ಟಣಶೆಟ್ಟಿ ಧಾರವಾಡ
ಪ್ರೋ. ಕೆ. ಜಿ. ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ – ಸ.ರಘುನಾಥ, ಕೋಲಾರ
ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ – ಡಾ. ವೈ. ಸಿ. ಭಾನುಮತಿ, ಹಾಸನ
ಬಿ.ವಿ. ಕಾರಂತ ಪ್ರಶಸ್ತಿ – ಜೆ. ಲೋಕೇಶ, ಬೆಂಗಳೂರು
ಡಾ. ಗುಬ್ಬಿ ವೀರಣ್ಣ ಪ್ರಶಸ್ತಿ – ಕೆ. ನಾಗರತ್ನಮ್ಮ, ಮರಿಯಮ್ಮನಹಳ್ಳಿ ವಿಜಯನಗರ
ಡಾ.ಸಿದ್ಧಲಿಂಗಯ್ಯ ಸಾಹಿತ್ಯ ಪ್ರಶಸ್ತಿ – ಡಾ.ಎಲ್ ಹನುಮಂತಯ್ಯ ಬೆಂಗಳೂರು
ವರ್ಣಶಿಲ್ಪಿ ವೆಂಕಟಪ್ಪ ಪ್ರಶಸ್ತಿ – ಎಂ ಜೆ ಕಮಲಾಕ್ಷಿ, ಬೆಂಗಳೂರು
ಜಕಣಾಚಾರಿ ಪ್ರಶಸ್ತಿ – ಎಂ. ರಾಮಮೂರ್ತಿ, ಬೆಂಗಳೂರು
ಜಾನಪದ ಶ್ರೀ ಪ್ರಶಸ್ತಿ – ನಿಂಗಪ್ಪ ಭಜಂತ್ರಿ ಕಲ್ಬುರ್ಗಿ ಮತ್ತು ದೊಡ್ಡಗವಿಬಸಪ್ಪ, ಚಾಮರಾಜನಗರ
ನಿಜಗುಣ ಪುರಂದರ ಪ್ರಶಸ್ತಿ – ಅನಂತ ತೆರದಾಳ, ಬೆಳಗಾವಿ ( ಹಿಂದುಸ್ತಾನಿ ಗಾಯನ )
ಕುಮಾರವ್ಯಾಸ ಪ್ರಶಸ್ತಿ – ಡಾ.ಎ ವಿ ಪ್ರಸನ್ನ, ಹಾಸನ ( ಗಮಕ ವ್ಯಾಖ್ಯಾನ)
ಶಾಂತಲಾ ನಾಟ್ಯ ಪ್ರಶಸ್ತಿ – ಪದ್ಮಿನಿ ರವಿ, ಬೆಂಗಳೂರು ( ಭರತನಾಟ್ಯ)
ಸಂತ ಶಿಶುನಾಳ ಷರೀಫ ಪ್ರಶಸ್ತಿ – ಪ್ರೋ. ಮಲ್ಲಣ್ಣ, ಚಾಮರಾಜನಗರ ( ಸುಗಮ ಸಂಗೀತ )
ನಿಮ್ಮ ಕಾಮೆಂಟ್ ಬರೆಯಿರಿ