ವೀಡಿಯೊ |”ಮಂಗಗಳು ಕೂಡ ಅದನ್ನು ಮಾಡಲ್ಲ…”: ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತದ ವಿರುದ್ಧ ಸೋತ ಪಾಕ್‌ ತಂಡದ ಬಗ್ಗೆ ವಾಸಿಂ ಅಕ್ರಂ ಹೀಗೇಕಂದ್ರು..?

ಪಾಕಿಸ್ತಾನ ಕೋಪಗೊಂಡಿದೆ. ಪಾಕಿಸ್ತಾನ ಹೊಗೆಯಾಡುತ್ತಿದೆ. ಭಾನುವಾರ ನಡೆದ ಚಾಂಪಿಯನ್ಸ್ ಟ್ರೋಫಿ 2025ರ ಲೀಗ್‌ ಹಂತದ ಪಂದ್ಯದಲ್ಲಿ ಪಾಕಿಸ್ತಾನವು ಸಾಂಪ್ರದಾಯಿಕ ವೈರಿ ಭಾರತದ ವಿರುದ್ಧದ ಹೀನಾಯವಾಗಿ ಸೋತಿದ್ದು, ಇದಾದದ ಒಂದು ದಿನದ ನಂತರ ಪಾಕಿಸ್ತಾನ ಕ್ರಿಕೆಟ್ ತಂಡವು ಗುಂಪು ಹಂತದಲ್ಲೇ ಟೂರ್ನಿಯಿಂದಲೇ ಹೊರಬಿದ್ದಿದೆ. ಕಳೆದ ವರ್ಷಗಳಿಂದ ಪಾಕಿಸ್ತಾನವು ಅನಿರೀಕ್ಷಿತವಾದ ತಂಡವಾಗಿತ್ತು. ಮತ್ತು ಅದು ಅವರ ಕ್ರಿಕೆಟ್ ಬ್ರ್ಯಾಂಡ್ ಆಗಿತ್ತು. ಅವರು ಅನಿರೀಕ್ಷಿತ ಎತ್ತರವನ್ನೂ ತಲುಪಿದರು ಮತ್ತು ಅನಿರೀಕ್ಷಿತ ಕಳಪೆ ಪ್ರದರ್ಶವನ್ನೂ ತೋರಿದರು. ಆದರೆ ಕಳೆದ ಕೆಲವು ವರ್ಷಗಳಲ್ಲಿ ಅಚ್ಚರಿಯ ಫಲಿತಾಂಶವು ಪಾಕಿಸ್ತಾನ ತಂಡದಿಂದ ನಾಪತ್ತೆಯಾಗಿದೆ.
ಅವರು ಕೊನೆಯದಾಗಿ 2017 ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತದ ತಂಡವನ್ನು ಸೋಲಿಸಿದ ನಂತರದಿಂದ ಈವರೆಗೆ ಭಾರತ ವಿರುದ್ಧದ ಎಲ್ಲಾ ಏಕದಿನ ಪಂದ್ಯಗಳಲ್ಲಿ ಸೋತಿದ್ದಾರೆ. ಇತ್ತೀಚಿನ ಹಿನ್ನಡೆಯ ನಂತರ, ಪಾಕಿಸ್ತಾನದ ತಂಡದ ಮಾಜಿ ನಾಯಕ ಹಾಗೂ ವಿಶ್ವ ವಿಖ್ಯಾತ ವೇಗಿ ವಾಸಿಂ ಅಕ್ರಂ ಪಾಕಿಸ್ತಾನ ತಂಡದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ಅವರು ಭಾರತದ ವಿರುದ್ಧದ ಪಂದ್ಯದ ಸಮಯದಲ್ಲಿ ಅವರ ಆಹಾರಕ್ರಮದ ಬಗ್ಗೆ ಹಿಗ್ಗಾಮುಗ್ಗಾ ಟೀಕಿಸಿದ್ದಾರೆ.

ಪ್ರಮುಖ ಸುದ್ದಿ :-   ನೂತನ ಪೋಪ್ ಆಗಿ ಆಯ್ಕೆಯಾದ ರಾಬರ್ಟ್ ಪ್ರೇವೋಸ್ಟ್

“ಇದು ಮೊದಲ ಅಥವಾ ಎರಡನೇ ಪಾನೀಯಗಳ ವಿರಾಮ ಎಂದು ನಾನು ಭಾವಿಸುತ್ತೇನೆ, ಮತ್ತು ಆಟಗಾರರಿಗಾಗಿ ಒಂದು ಪ್ಲೇಟ್‌ನಲ್ಲಿ ಬಾಳೆಹಣ್ಣುಗಳು ತುಂಬಿದ್ದವು. ಇತ್ನೆ ಕೆಲೆ ತೋ ಬಂದರ್ ಭೀ ನಹೀ ಖಾತೆ (ಮಂಗಗಳು ಸಹ ಅಷ್ಟೊಂದು ಬಾಳೆಹಣ್ಣುಗಳನ್ನು ತಿನ್ನುವುದಿಲ್ಲ) ಮತ್ತು ಅದು ಅವರ ಆಹಾರವಾಗಿದೆ. ಹಾಗೆ ಮಾಡಿದ್ದರೆ ನಮ್ಮ ನಾಯಕ ಇಮ್ರಾನ್ ಖಾನ್ ಆಗಿದ್ದರೆ, ಅವರು ನಮಗೆ ಹೊಡೆತ ನೀಡುತ್ತಿದ್ದರು,” ಎಂದು ಅಕ್ರಂ ಹೇಳಿದ್ದಾರೆ.
ಅಕ್ರಂ ಪಾಕಿಸ್ತಾನ ತಂಡವನ್ನು ದೂಷಿಸಿದರು, ಆಟದ ವೇಗವು ಬಹು-ಪಟ್ಟು ಹೆಚ್ಚುತ್ತಿರುವ ಸಮಯದಲ್ಲಿ ಅವರು ಇನ್ನೂ ʼಹಳೆಯ ಕ್ರಿಕೆಟ್’ ಆಡುತ್ತಿದ್ದಾರೆ ಎಂದು ಟೀಕಿಸಿದರು.
“ಪಾಕಿಸ್ತಾನ ಕ್ರಿಕೆಟ್‌ ತಂಡದಲ್ಲಿ ತೀವ್ರ ಕ್ರಮಗಳ ಅಗತ್ಯವಿದೆ. ನಾವು ವೈಟ್ ಬಾಲ್‌ನಲ್ಲಿ ಪ್ರಾಚೀನ ಕ್ರಿಕೆಟ್ ಆಡುತ್ತಿದ್ದೇವೆ ಎಂದು ಹೇಳಿದ ಅವರು ದುಬೈನಲ್ಲಿ ಭಾರತ ವಿರುದ್ಧ ತಮ್ಮ ತಂಡದ ಸೋಲಿನ ನಂತರ “ಡ್ರೆಸ್ಸಿಂಗ್ ರೂಮ್” ಎಂಬ ಕಾರ್ಯಕ್ರಮದಲ್ಲಿ ವಾಸಿಂ ಅಕ್ರಮ್ ಹೇಳಿದರು. “ಇದು ಬದಲಾಗಬೇಕು. ನಿರ್ಭೀತ ಕ್ರಿಕೆಟಿಗರನ್ನು, ಯುವಕರನ್ನು ತಂಡಕ್ಕೆ ತನ್ನಿ. ನೀವು ಐದು-ಆರು ಬದಲಾವಣೆಗಳನ್ನು ಮಾಡಬೇಕಾದರೆ ದಯವಿಟ್ಟು ಅದನ್ನು ಮಾಡಿ. ಮುಂದಿನ ಆರು ತಿಂಗಳವರೆಗೆ ನೀವು ಸೋಲುತ್ತಲೇ ಇರುತ್ತೀರಿ. ಆದರೆ ಈಗಿನಿಂದ ವಿಶ್ವ T20 2026 ಗಾಗಿ ತಂಡವನ್ನು ಸಿದ್ಧಗೊಳಿಸಲು ಪ್ರಾರಂಭಿಸಬೇಕು” ಎಂದು ಅವರು ಹೇಳಿದರು.

https://twitter.com/Stroke_Geniuss/status/1894025494162551019?ref_src=twsrc%5Etfw%7Ctwcamp%5Etweetembed%7Ctwterm%5E1894025494162551019%7Ctwgr%5E40490741b2c2af55de63abc4d793c5cdb043209f%7Ctwcon%5Es1_&ref_url=https%3A%2F%2Fsports.ndtv.com%2Ficc-champions-trophy-2025%2Feven-monkeys-dont-wasim-akram-lambasts-pakistans-act-against-india-in-champions-trophy-7793928

ಅಕ್ರಂ ಅವರು ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಪದೇ ಪದೇ ವಿಫಲರಾದ ಪಾಕಿಸ್ತಾನದ ಬೌಲಿಂಗ್ ವಿಬಾಗದ ಬಗ್ಗೆಯೂ ಟಿಪ್ಪಣಿ ಮಾಡಿದ್ದಾರೆ.
“ಸಾಕು ಸಾಕು. ಅವರನ್ನು ಸ್ಟಾರ್‌ಗಳನ್ನಾಗಿ ಮಾಡಿದ್ದೀರಿ. ಕಳೆದ ಐದು ಏಕದಿನ ಪಂದ್ಯಗಳಲ್ಲಿ ಪಾಕಿಸ್ತಾನದ ಬೌಲರ್‌ಗಳು 60ರ ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಅಂದರೆ ಪ್ರತಿ ವಿಕೆಟ್‌ಗೆ 60 ರನ್ ಎಂದು ಅಕ್ರಂ ಹೇಳಿದ್ದಾರೆ.
“ನಮ್ಮ ಸರಾಸರಿಯು ಓಮನ್ ಮತ್ತು ಯುಎಸ್ಎಗಿಂತ ಕಳಪೆಯಾಗಿದೆ. ಏಕದಿನ ಪಂದ್ಯಗಳನ್ನು ಆಡುತ್ತಿರುವ 14 ತಂಡಗಳಲ್ಲಿ, ಪಾಕಿಸ್ತಾನದ ಬೌಲಿಂಗ್ ಸರಾಸರಿ ಎರಡನೇ ಕಳಪೆ ಬೌಲಿಂಗ್‌ ಸರಾಸರಿಯಾಗಿದೆ” ಎಂದು ಅವರು ಹೇಳಿದರು.

ಪ್ರಮುಖ ಸುದ್ದಿ :-   ವೀಡಿಯೊ..| ಒಳಗೆ ನುಗ್ಗಿ ಹೊಡೀತಿದ್ದಾರೆ, ದೇವರೇ ನಮ್ಮನ್ನು ಕಾಪಾಡಬೇಕು : ಭಾರತದ ದಾಳಿ ನಂತ್ರ ಸಂಸತ್ತಿಲ್ಲಿ ಕಣ್ಣೀರಿಟ್ಟ ಪಾಕ್‌ ಸಂಸದ-ವೀಕ್ಷಿಸಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement