ನಟ ಗೋವಿಂದ-ಸುನೀತಾ ಅಹುಜಾ ವಿಚ್ಛೇದನದ ವದಂತಿ : ಮೌನ ಮುರಿದ ನಟನ ಪತ್ನಿ

ಬಾಲಿವುಡ್ ನಟ ಗೋವಿಂದ ಮತ್ತು ಅವರ ಪತ್ನಿ ಸುನೀತಾ ಅಹುಜಾ ಅವರು ತಮ್ಮ ವಿಚ್ಛೇದನದ ಬಗ್ಗೆ ಹರಡಿರುವ ವದಂತಿಗಳಿಗೆ ಕೊನೆಗೂತೆರೆ ಎಳೆದಿದ್ದಾರೆ.
37 ವರ್ಷಗಳ ಹಿಂದೆ ವಿವಾಹವಾದ ದಂಪತಿ ಬೇರ್ಪಡುತ್ತಿದ್ದಾರೆ ಎಂದು ಇತ್ತೀಚಿಗೆ ವರದಿಯಾದ ಬೆನ್ನಲ್ಲೇ ನಟ ಗೋವಿಂದ ಅವರ ಪತ್ನಿ ಸುನೀತಾ ಅಂತಹ ಎಲ್ಲಾ ವರದಿಗಳನ್ನು ತಳ್ಳಿಹಾಕಿದ್ದಾರೆ. ಹಾಗೂ ಅವುಗಳನ್ನು ಆಧಾರರಹಿತ ಮತ್ತು ಕಪೋಲಕಲ್ಪಿತ ಎಂದು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿರುವ ವೈರಲ್ ವೀಡಿಯೊದಲ್ಲಿ, ಸುನೀತಾ ಅವರು ವಿಚ್ಛೇದನ ಪಡೆಯುವ ಬಗೆಗಿನ ಯಾವುದೇ ಹೇಳಿಕೆಗಳನ್ನು ಬಲವಾಗಿ ನಿರಾಕರಿಸಿದರು, “ಗೋವಿಂದ ಮತ್ತು ನನ್ನ ನಡುವೆ ಯಾರೂ ಬರಲು ಸಾಧ್ಯವಿಲ್ಲ” ಎಂದು ಹೇಳಿದ್ದಾರೆ. ತನ್ನ ಮಾತುಗಳನ್ನು ತಪ್ಪಾಗಿ ಅರ್ಥೈಸಲಾಗಿದೆ ಮತ್ತು ಅನಗತ್ಯ ವಿವಾದಕ್ಕೆ ಕಾರಣವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ.

ದಂಪತಿ ಪ್ರತ್ಯೇಕ ಮನೆಗಳಲ್ಲಿ ವಾಸಿಸುತ್ತಿದ್ದಾರೆ ಎಂಬ ವರದಿಗಳು ಬಂದಾಗ ದಂಪತಿ ಬೇರ್ಪಡುವ ಬಗ್ಗೆ ಊಹಾಪೋಹಗಳು ಪ್ರಾರಂಭವಾದವು. ಗೋವಿಂದ ಅವರು ರಾಜಕೀಯದಲ್ಲಿ ಸಕ್ರಿಯರಾದಾಗ ಅವರ ಮನೆಗೆ ಪಕ್ಷದ ಕಾರ್ಯಕರ್ತರು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಆ ಸಮಯದಲ್ಲಿ ತಮ್ಮ ಮಗಳು ಬೆಳೆಯುತ್ತಿದ್ದರಿಂದ, ದಂಪತಿ ಮನೆಯಲ್ಲಿ ಗೌಪ್ಯತೆಯನ್ನು ಕಾಪಾಡಿಕೊಳ್ಳಲು ಹತ್ತಿರದ ಕಟ್ಟಡದಲ್ಲಿ ಪ್ರತ್ಯೇಕ ಕಚೇರಿ ಸ್ಥಳವನ್ನು ಪಡೆಯಲು ನಿರ್ಧರಿಸಿದರು ಎಂದು ಸನಿತಾ ವಿವರಿಸಿದ್ದಾರೆ. “ಈ ಜಗತ್ತಿನಲ್ಲಿ ಯಾರಾದರೂ ಗೋವಿಂದನನ್ನು ಮತ್ತು ನನ್ನನ್ನು ಬೇರ್ಪಡಿಸಬಹುದು ಎಂದು ಭಾವಿಸಿದರೆ ಅದು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ.
ಸುನೀತಾ ಅವರ ಸ್ಪಷ್ಟೀಕರಣದ ವೀಡಿಯೊ ಈಗ ಊಹಾಪೋಹಗಳಿಗೆ ಕೊನೆ ಹಾಡಿದೆ. ಗೋವಿಂದ ಮತ್ತು ಸುನೀತಾ ಅಹುಜಾ ಒಟ್ಟಿಗೆ ಸಂತೋಷದಿಂದ ಇದ್ದಾರೆ ಎಂದು ಪುನರುಚ್ಚರಿಸಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement