ಬೆಂಗಳೂರು: ಕರ್ನಾಟಕದ ೨೦೨೫ರ ಬಜೆಟ್ ಮಂಡಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಬಜೆಟ್ ನಲ್ಲಿ ಮುಸ್ಲಿಮರಿಗೆ ಹಾಗೂ ರಾಜ್ಯದ ಇನ್ನುಳಿದ ಅಲ್ಪಸಂಖ್ಯಾತ ಸಮುದಾಯಗಳಿಗೆ ವಿವಿಧ ಯೋಜನೆಗಳನ್ನು ಘೋಷಿಸಿದ್ದಾರೆ. ಅವುಗಳಲ್ಲಿ ಪ್ರಮುಖವಾದವೆಂದರೆ, 2 ಕೋಟಿ ರೂ.ವರೆಗಿನ ಗುತ್ತಿಗೆ ಕಾಮಗಾರಿಗಳಲ್ಲಿ ಪ್ರವರ್ಗ 2, 2ಎ ವರ್ಗದವರಿಗೆ (ಅಲ್ಪಸಂಖ್ಯಾತರು) ಮೀಸಲಾತಿ ಕಲ್ಪಿಸಲು ನಿರ್ಧರಿಸಲಾಗಿದೆ.
ವಕ್ಫ್ ಆಸ್ತಿಗಳ ರಕ್ಷಣೆಗಾಗಿ 150 ಕೋಟಿ ರೂ.ಗಳನ್ನು ಮೀಸಲಿರಿಸುವುದಾಗಿ ಬಜೆಟ್ ನಲ್ಲಿ ಘೋಷಿಸಲಾಗಿದೆ. ಅದಲ್ಲದೆ, ಹಜ್ ಭವನದಲ್ಲಿ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ, ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತ ಯುವತಿಯರ ಮದುವೆಗೆ ತಲಾ 50,000 ಘೋಷಣೆ, ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 1,000 ಕೋಟಿ ರೂ., ವಕ್ಫ್ ಮಾಲೀಕತ್ವದ ಖಾಲಿ ಸ್ಥಳಗಳಲ್ಲಿ ಒಟ್ಟು 16 ಮಹಿಳಾ ಕಾಲೇಜುಗಳ ನಿರ್ಮಾಣ ಹೀಗೆ ವಿವಿಧ ಯೋಜನೆಗಳನ್ನು ಬಜೆಟ್‌ನಲ್ಲಿ ಘೋಷಿಸಲಾಗಿದೆ.
ಮುಸ್ಲಿಮರಿಗೆ ಬಜೆಟ್‌ನಲ್ಲಿ ಸಿಕ್ಕಿದ್ದೇನು..?
ವಕ್ಫ್ ಆಸ್ತಿಗಳ ಸಂರಕ್ಷಣೆಗಾಗಿ 150 ಕೋಟಿ ರೂ. ಮೀಸಲು.
ಅಲ್ಪಸಂಖ್ಯಾತ ಕಾಲೋನಿಗಳ ಅಭಿವೃದ್ಧಿಗೆ 1,000 ಕೋಟಿ ರೂ.
100 ಉರ್ದು ಶಾಲೆಗಳ ಉನ್ನತೀಕರಣಕ್ಕೆ 100 ಕೋಟಿ ರೂ.
ಹಜ್ ಭವನದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕೇಂದ್ರ ಸ್ಥಾಪನೆ.
ವಕ್ಫ್ ಖಾಲಿ ನಿವೇಶನಗಳಲ್ಲಿ 16 ಮಹಿಳಾ ಕಾಲೇಜು ನಿರ್ಮಾಣ.
ಬೆಂಗಳೂರು ಹಜ್ ಯಾತ್ರಿಕರಿಗೆ ಹೆಚ್ಚುವರಿ ಕಟ್ಟಡ.
2,500 ಅಲ್ಪಸಂಖ್ಯಾತ ವಿದ್ಯಾರ್ಥಿನಿಯರಿಗೆ ಆತ್ಮರಕ್ಷಣೆ ಕಲೆ ಕಲಿಯಲು ಸೌಲಭ್ಯ.
ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸರಳ ವಿವಾಹಕ್ಕೆ ನಗದು ಪ್ರೋತ್ಸಾಹ ಧನ; ಪ್ರತಿ ಜೋಡಿಗೆ 50 ಸಾವಿರ ರೂ.
ಮದರಸಾಗಳಲ್ಲಿ ಕಂಪ್ಯೂಟರ್, ಸ್ಮಾರ್ಟ್ ಬೋರ್ಡ್ ಸೌಲಭ್ಯ.
ಅಲ್ಪಸಂಖ್ಯಾತ ಯುವಕ ಯುವತಿಯರ ನವೋದ್ಯಮಕ್ಕೆ ಉತ್ತೇಜನ
ಇತರೆ ಅಲ್ಪಸಂಖ್ಯಾತರಿಗೆ….
ಜೈನ, ಬುದ್ಧ, ಸಿಖ್ ಸಮಗ್ರ ಅಭಿವೃದ್ಧಿಗೆ 100 ಕೋಟಿ ರೂ. ಅನುದಾನ.
ಕ್ರೈಸ್ತ ಸಮುದಾಯದ ಅಭಿವೃದ್ಧಿಗೆ 250 ಕೋಟಿ ರೂ.
ಗುರುದ್ವಾರಗಳಿಗೆ ಮೂಲಸೌಕರ್ಯಗಳಿಗೆ 2 ಕೋಟಿ ರೂ. ಅನುದಾನ.
ಬೌದ್ಧ ಅಧ್ಯಯನ ಅಕಾಡೆಮಿ, ಮಹಾಬೋಧಿ ಅಧ್ಯಯನ ಕೇಂದ್ರ ಸ್ಥಾಪನೆಗೆ ನಿರ್ಧಾರ.
ಅಲ್ಪಸಂಖ್ಯಾತ ಮೊರಾಜಿ ಶಾಲೆಗಳಲ್ಲಿ ಕಾಮರ್ಸ್ ವಿಭಾಗ
ಜೈನ ಅರ್ಚಕರು, ಸಿಖ್ ಮುಖ್ಯಗ್ರಂಥಿಗಳು, ಮಸೀದಿಗಳ ಪೇಷ್ ಇಮಾಮ್ ಗಳಿಗೆ ನೀಡುತ್ತಿರುವ ಮಾಸಿಕ ಗೌರವಧನ 6,000 ರೂ. ಗಳಿಗೆ ಹೆಚ್ಚಳ. ಸಿಖ್ ಸಹಾಯಕ ಗ್ರಂಥಿಗಳು ಹಾಗೂ ಮೋಝಿನ್ ಗಳಿಗೆ ನೀಡುವ ಮಾಸಿಕ ಗೌರವಧನವನ್ನು 5,000ಕ್ಕೆ ಏರಿಕೆ.
ನಿಮ್ಮ ಕಾಮೆಂಟ್ ಬರೆಯಿರಿ