ಚಿಂತಾಮಣಿ | ಕೃಷಿ ಹೊಂಡದಲ್ಲಿ ವಿದ್ಯುತ್​ ಸ್ಪರ್ಶಿಸಿ ಮೂವರು ಯುವಕರು ಸಾವು

ಚಿಕ್ಕಬಳ್ಳಾಪುರ : ಕೃಷಿ ಹೊಂಡದಲ್ಲಿ ವಿದ್ಯುತ್ ಸ್ಪರ್ಶದಿಂದ ಮೂವರು ಯುವಕರು ಸಾವಿಗೀಡಾದ ಘಟನೆ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುಂತಕೆದಿರೇನಹಳ್ಳಿಯಲ್ಲಿ ನಡೆದಿದೆ. ಎಂದು ವರದಿಯಾಗಿದೆ.
ಚಿಂತಾಮಣಿ ತಾಲೂಕಿನ ಮುಂತಕೆದಿರೇನಹಳ್ಳಿಯ ಕೃಷಿ ಹೊಂಡದಲ್ಲಿ ಶುಕ್ರವಾರ ಸಂಜೆ 4 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಹೊಂಡದಲ್ಲಿ ನೀರೆತ್ತುತ್ತಿದ್ದ 22–28 ವರ್ಷದ ಮೂವರು ವಿದ್ಯುತ್‌ ಸ್ಪರ್ಷದಿಂದ ಸಾವಿಗೀಡಾಗಿದ್ದಾರೆ ಎಂದು ಹೇಳಲಾಗಿದೆ. ಮೃತರನ್ನು ಶ್ರೀಕಾಂತ(25), ಲೋಕೇಶ್(೩೨), ರಮೇಶ್(೨೮) ಎಂದು ಗುರುತಿಸಲಾಗಿದೆ. ಒಬ್ಬರನ್ನು ಮತ್ತೊಬ್ಬರು ರಕ್ಷಿಸಲು ಹೋಗಿ ಮೂವರು ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಕೃಷಿ ಹೊಂಡದ ಸಮೀಪದ ಹಾಸಿದ ವಿದ್ಯುತ್ ಕೇಬಲ್‌ಗಳು ಸವೆದು ನೀರಿಗೆ ಸಂಪರ್ಕಗೊಂಡಿರುವುದು ಈ ಅವಾಂತರಕ್ಕೆ ಕಾರಣ ಎನ್ನಲಾಗಿದೆ.
ಘಟನೆಯ ನಂತರ, ವಿದ್ಯುತ್ ಮಂಡಳಿಯ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ವೈಜಿ ಗುಡ್ಡ ಜಲಾಶಯದಲ್ಲಿ ಮುಳುಗಿ ಮೂವರು ಯುವತಿಯರು ಸಾವು ; ನಾಲ್ವರ ರಕ್ಷಣೆ

ನಿಮ್ಮ ಕಾಮೆಂಟ್ ಬರೆಯಿರಿ

advertisement