ನವದೆಹಲಿ: ಉಪರಾಷ್ಟ್ರಪತಿ ಜಗದೀಪ ಧನಕರ (73) ಅವರು ಅಸ್ವಸ್ಥತೆ ಮತ್ತು ಎದೆ ನೋವಿನ ಅನುಭವವಾದ ನಂತರ ಭಾನುವಾರ ದೆಹಲಿಯ ಏಮ್ಸ್‌ಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ.
ಮುಂಜಾನೆ 2 ಗಂಟೆ ಸುಮಾರಿಗೆ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಸ್ತುತ ಕ್ರಿಟಿಕಲ್ ಕೇರ್ ಯುನಿಟ್‌ನಲ್ಲಿ (CCU) ನಿಗಾದಲ್ಲಿ ಇರಿಸಲಾಗಿದೆ.
ಏಮ್ಸ್‌ನ ಹೃದ್ರೋಗ ವಿಭಾಗದ ಮುಖ್ಯಸ್ಥ ಡಾ.ರಾಜೀವ್ ನಾರಂಗ ಅವರ ನೇತೃತ್ವದಲ್ಲಿ ಉಪರಾಷ್ಟ್ರಪತಿ ಧನಕರ ಚಿಕಿತ್ಸೆ ಪಡೆಯುತ್ತಿದ್ದಾರೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಎಂದು ವರದಿ ತಿಳಿಸಿದೆ.
ಕೇಂದ್ರ ಆರೋಗ್ಯ ಸಚಿವ ಜೆಪಿ ನಡ್ಡಾ ಅವರು ಏಮ್ಸ್‌ಗೆ ಭೇಟಿ ನೀಡಿ ಧನಕರ ಅವರ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ