ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬಾಲಿವುಡ್ ನಟಿ ಕತ್ರಿನಾ ಕೈಫ್ ಭೇಟಿ ; ಸರ್ಪ ಸಂಸ್ಕಾರ ಸೇವೆ

ಮಂಗಳೂರು : ಖ್ಯಾತ ಬಾಲಿವುಡ್ ನಟಿ ಕತ್ರಿನಾ ಕೈಫ್ ಮಂಗಳವಾರ (ಮಾರ್ಚ್‌ 11) ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ್ದು, ಕ್ಷೇತ್ರದಲ್ಲಿ ನಡೆಯುವ ಪ್ರಮುಖ ಸರ್ಪಸಂಸ್ಕಾರ ಸೇವೆಯನ್ನು ನೆರವೇರಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಭೇಟಿ ನೀಡಿದ ಅವರು ಸುಬ್ರಹ್ಮಣ್ಯ ದೇವರ ದರ್ಶನ ಪಡೆದರು. ಆಶ್ಲೇಷ ನಕ್ಷತ್ರದ ದಿನವಾದ ಮಂಗಳವಾರ ಬೆಳಗ್ಗೆ ಕ್ಷೇತ್ರದ ಆದಿ ಸುಬ್ರಹ್ಮಣ್ಯದ ಸರ್ಪಸಂಸ್ಕಾರ ಯಾಗಶಾಲೆಯಲ್ಲಿ ಅವರು ಸರ್ಪಸಂಸ್ಕಾರ ಪೂಜೆಯನ್ನು ನೆರವೇರಿಸಿದರು. ಬಳಿಕ ಮಧ್ಯಾಹ್ನ ಕ್ಷೇತ್ರದಲ್ಲಿ ಅನ್ನಪ್ರಸಾದ ಸ್ವೀಕರಿಸಿದ್ದು, ಬುಧವಾರ ಮತ್ತೆ ಸರ್ಪಸಂಸ್ಕಾರ ಸೇವೆಯ ವಿಧಿವಿಧಾನಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಹೇಳಲಾಗಿದೆ.

ಸಂತಾನಪ್ರಾಪ್ತಿ, ವೃತ್ತಿ ಬದುಕಿನಲ್ಲಿ ಸಫಲತೆ ಮತ್ತು ಕುಟುಂಬದ ಯೋಗಕ್ಷೇಮ ಹಾಗೂ ದೋಷ ನಿವಾರಣೆಯ ಉದ್ದೇಶದಿಂದ ಕತ್ರಿನಾ ಅವರು ಸಂರ್ಪ ಸಂಸ್ಕಾರ ಸೇವೆಯನ್ನು ಮಾಡಿದ್ದಾರೆ. ಮಂಗಳವಾರ ಮಧ್ಯಾಹ್ನದ ತನಕ ಸರ್ಪಸಂಸ್ಕಾರ ಸೇವೆಯ ವಿಧಿ-ವಿಧಾನಗಳು‌ ನಡೆಯಲಿದೆ.
ಕತ್ರಿನಾ ಪೂಜೆ ನೆರವೇರಿಸುತ್ತಿರುವ ಹಿನ್ನಲೆಯಲ್ಲಿ ಕ್ಷೇತ್ರದ ವತಿಯಿಂದ ವಿಶೇಷ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಆಶ್ಲೇಷ ನಕ್ಷತ್ರ ಸುಬ್ರಹ್ಮಣ್ಯನಿಗೆ ಅತ್ಯಂತ ಪ್ರೀತಿಯ ನಕ್ಷತ್ರವಾಗಿದ್ದು, ಈ ದಿನದಂದು ಸೇವೆ ಸಲ್ಲಿಸಿದರೆ ಹೆಚ್ಚು ಫಲಪ್ರದವಾಗುತ್ತದೆ ಎನ್ನುವ ನಂಬಿಕೆ ಇದೆ.
ಕತ್ರಿನಾ ಅವರು ದೇವಸ್ಥಾನದ ವಿಐಪಿ ಅತಿಥಿ ಗೃಹದಲ್ಲಿ ಉಳಿದುಕೊಂಡಿದ್ದಾರೆ ಎನ್ನಲಾಗಿದೆ. ಅವರು ಇತ್ತೀಚೆಗೆ ಉತ್ತರಪ್ರದೇಶದ ಪ್ರಯಾಗರಾಜ್‌ನಲ್ಲಿ ನಡೆದ ಮಹಾ ಕುಂಭಮೇಳಲ್ಲಿ ಭಾಗವಹಿಸಿ ತ್ರಿವೇಣಿ ಸಂಗಮದಲ್ಲಿ ಪುಣ್ಯಸ್ನಾನ ಮಾಡಿದ್ದರು.

ಪ್ರಮುಖ ಸುದ್ದಿ :-   ಸಚಿವರು, ಶಾಸಕರ ವೇತನ ದ್ವಿಗುಣ ಸಾಧ್ಯತೆ : ವೇತನ. ಭತ್ಯೆ ಹೆಚ್ಚಳಕ್ಕೆ ತಿದ್ದುಪಡಿ ಮಸೂದೆ ಸಿದ್ಧ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement