ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆ ಮಾಡಿಕೊಂಡ ದಂಪತಿ….

ಹೈದರಾಬಾದ್ : ದಾರುಣ ಘಟನೆಯೊಂದರಲ್ಲಿ, ಆರ್ಥಿಕ ಸಮಸ್ಯೆಯಿಂದಾಗಿ ದಂಪತಿ ತಮ್ಮ 10 ಮತ್ತು 15 ವರ್ಷದ ಇಬ್ಬರು ಮಕ್ಕಳನ್ನು ಕೊಂದು ನಂತರ ತಾವೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಹೈದರಾಬಾದಿನಲ್ಲಿ ಸೋಮವಾರ ನಡೆದಿದೆ.
ಉಸ್ಮಾನಿಯಾ ವಿಶ್ವವಿದ್ಯಾಲಯ ಪೊಲೀಸ್ ಠಾಣೆ ವ್ಯಾಪ್ತಿಯ ಹಬ್ಸಿಗುಡಾದ ರವೀಂದ್ರ ನಗರ ಕಾಲೋನಿಯಲ್ಲಿರುವ ದಂಪತಿಯ ಮನೆಯಲ್ಲಿ ಸೋಮವಾರ ನಾಲ್ಕು ಶವಗಳು ಪತ್ತೆಯಾಗಿವೆ. ಚಂದ್ರಶೇಖರ ರೆಡ್ಡಿ (44) ಮತ್ತು ಅವರ ಪತ್ನಿ ಕವಿತಾ (35) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ತಮ್ಮ ಮಗ ವಿಶ್ವನ್ ರೆಡ್ಡಿ (10) ಮತ್ತು ಪುತ್ರಿ ಶ್ರೀತಾ ರೆಡ್ಡಿ (15) ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.
ಶ್ರೀತಾ ರೆಡ್ಡಿ ಒಂಬತ್ತನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ವಿಶ್ವನ್ ರೆಡ್ಡಿ ಐದನೇ ತರಗತಿಯಲ್ಲಿ ಓದುತ್ತಿದ್ದ. ಡಯಲ್ 100ಕ್ಕೆ ಈಬಗ್ಗೆ ಮಾಹಿತಿ ಬಂದ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿದರು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರತ್ಯೇಕ ಕೊಠಡಿಗಳಲ್ಲಿ ಚಂದ್ರಶೇಖರ ರೆಡ್ಡಿ ಮತ್ತು ಅವರಪತ್ನಿಯ ಶವಗಳು ಪತ್ತೆಯಾದರೆ ಅವರ ಮಕ್ಕಳು ಹಾಸಿಗೆಯ ಮೇಲೆ ಸಾವಿಗೀಡಾಗಿದ್ದರು.

ಪ್ರಮುಖ ಸುದ್ದಿ :-   ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

ಚಂದ್ರಶೇಖರ ರೆಡ್ಡಿ ಬರೆದಿರುವ ಆತ್ಮಹತ್ಯೆ ಪತ್ರವನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ತನ್ನ ಮತ್ತು ತನ್ನ ಕುಟುಂಬದ ಸಾವಿಗೆ ಯಾರೂ ಕಾರಣರಲ್ಲ ಎಂದು ಅವರು ಡೆತ್‌ ನೋಟ್‌ ಬರೆದಿದ್ದಾರೆ. “ನನ್ನ ಜೀವನವನ್ನು ಕೊನೆಗೊಳಿಸುವುದನ್ನು ಬಿಟ್ಟು ನನಗೆ ಬೇರೆ ಆಯ್ಕೆ ಇರಲಿಲ್ಲ. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನನ್ನ ವೃತ್ತಿಜೀವನದಲ್ಲಿ ಹೋರಾಡುತ್ತಿದ್ದೇನೆ ಮತ್ತು ಮಾನಸಿಕವಾಗಿ ಮತ್ತು ದೈಹಿಕವಾಗಿ ಬಳಲಿದ್ದೇನೆ. ನಾನು ಮಧುಮೇಹ, ನರ ಮತ್ತು ಮೂತ್ರಪಿಂಡಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿದ್ದೇನೆ ಎಂದು ಅವರು ತೆಲುಗಿನಲ್ಲಿ ಬರೆದಿರುವ ಟಿಪ್ಪಣಿಯಲ್ಲಿ ತಿಳಿಸಿದ್ದಾರೆ. ಪೊಲೀಸರು ಶವಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದು, ತನಿಖೆ ಕೈಗೊಂಡಿದ್ದಾರೆ.

ಇವರು ಮೂಲತಃ ಮಹಬೂಬ್‌ನಗರ ಜಿಲ್ಲೆಯ ಕಲ್ವಕುರ್ತಿಯವರಾಗಿದ್ದು, ಒಂದು ವರ್ಷದ ಹಿಂದೆ ಹೈದರಾಬಾದ್‌ಗೆ ವಲಸೆ ಬಂದಿದ್ದರು ಎಂದು ಪೊಲೀಸರ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಚಂದ್ರಶೇಖರ ರೆಡ್ಡಿ ಅವರು ಕೆಲವು ತಿಂಗಳು ಖಾಸಗಿ ಕಾಲೇಜಿನಲ್ಲಿ ಜೂನಿಯರ್ ಉಪನ್ಯಾಸಕರಾಗಿ ಕೆಲಸ ಮಾಡಿದ್ದರು. ಆದರೆ ಅವರಿಗೆ ಸುಮಾರು ಆರು ತಿಂಗಳ ಕಾಲ ಕೆಲಸವಿಲ್ಲದೆ ಮತ್ತು ಆದಾಯದ ಮೂಲವಿಲ್ಲದೆ, ಕುಟುಂಬವು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿತ್ತು ಎನ್ನಲಾಗಿದೆ.
ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದೇವೆ ಎಂದು ಸರ್ಕಲ್ ಇನ್ಸ್‌ಪೆಕ್ಟರ್ ಎನ್.ರಾಜೇಂದರ ತಿಳಿಸಿದ್ದಾರೆ.
ಶವಪರೀಕ್ಷೆ ವರದಿ ಬಂದ ನಂತರ ಮಕ್ಕಳ ಸಾವಿಗೆ ನಿಖರ ಕಾರಣ ತಿಳಿಯಲಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಲ್ ಸೋಫಿಯಾ ಬಗ್ಗೆ ಸಚಿವ ವಿಜಯ ಶಾ ಹೇಳಿಕೆ | ಎಸ್ಐಟಿ ತನಿಖೆಗೆ ಸುಪ್ರೀಂ ಕೋರ್ಟ್‌ ಆದೇಶ ; ಬಂಧನಕ್ಕೆ ತಡೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement