ಎರಡನೇ ಮದುವೆಯಾಗಲು ವಿರೋಧಿಸಿದ್ದಕ್ಕೆ ತನ್ನ ಮಗನನ್ನು ಗುಂಡು ಹಾರಿಸಿ ಕೊಂದ ತಂದೆ….!

ರಾಜಕೋಟ್: ಗುಜರಾತಿನ ರಾಜಕೋಟದಲ್ಲಿ ಆಘಾತಕಾರಿ ಘಟನೆಯೊಂದು ಬಹಿರಂಗವಾಗಿದ್ದು, 76 ವರ್ಷದ ವ್ಯಕ್ತಿಯೊಬ್ಬರು ಎರಡನೇ ಬಾರಿಗೆ ಮದುವೆಯಾಗಲು ವಿರೋಧಿಸಿದ ಕಾರಣಕ್ಕೆ ತನ್ನ 52 ವರ್ಷದ ಮಗನನ್ನೇ ಗುಂಡಿಕ್ಕಿ ಕೊಂದಿದ್ದಾರೆ.
ವರದಿಗಳ ಪ್ರಕಾರ, ಆರೋಪಿ ರಾಮಭಾಯ್ ಅಲಿಯಾಸ್ ರಾಮಕುಭಾಯಿ ಬೋರಿಚಾ, ಮಾರ್ಚ್ 9 ರಂದು ಭಾನುವಾರ ಬೆಳಿಗ್ಗೆ 10 ಗಂಟೆಗೆ ತನ್ನ ಮಗ ಪ್ರತಾಪ ಬೊರಿಚಾ ಅವರ ಜೊತೆ ತೀವ್ರ ವಾಗ್ವಾದ ನಡೆಸಿದ್ದಾನೆ. ಪ್ರತಾಪ ಮರು ಮದುವೆಯಾಗಲು ಹೊರಟ ತನ್ನ ತಂದೆಯ ನಿರ್ಧಾರವನ್ನು ವಿರೋಧಿಸಿದ್ದರಿಂದ ಭಿನ್ನಾಭಿಪ್ರಾಯ ಉಂಟಾಗಿದೆ. ಇದರಿಂದ ಕುಪಿತಗೊಂಡ ರಾಮಭಾಯ್‌ ಗನ್‌ ತೆಗೆದುಕೊಂಡು ತನ್ನ ಮಗನ ಮೇಲೆ ಎರಡು ಗುಂಡುಗಳನ್ನು ಹಾರಿಸಿದ್ದರಿಂದ ಮಗ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಅಪರಾಧ ಎಸಗಿದ ನಂತರ, ರಾಮಭಾಯ್‌ ತನ್ನ ಮಗನ ಶವದ ಬಳಿ ಕುಳಿತುಕೊಂಡರು, ಆದರೆ ಯಾವುದೇ ಪಶ್ಚಾತ್ತಾಪವನ್ನು ವ್ಯಕ್ತಪಡಿಸಲಿಲ್ಲ ಎಂದು ಪ್ರತ್ಯಕ್ಷದರ್ಶಿಗಳು ಮತ್ತು ಅಧಿಕಾರಿಗಳು ಹೇಳಿದ್ದಾರೆ. ತೋರಿಸಲಿಲ್ಲ. ಈ ಕೃತ್ಯವು ಸ್ಥಳೀಯ ಸಮುದಾಯವನ್ನು ಬೆಚ್ಚಿ ಬೀಳಿಸಿದೆ.
ಘಟನೆಯ ನಂತರ ಪ್ರತಾಪ ಪತ್ನಿ ಜಯಾ ಜಸ್ದಾನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅಧಿಕಾರಿಗಳು ತಕ್ಷಣ ಕ್ರಮ ಕೈಗೊಂಡರು ಹಾಗೂ ಅದೇ ದಿನ ರಾಮಬಾಯ್‌ ನನ್ನು ಬಂಧಿಸಿದರು. ಆತನನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ಎರಡು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ರಾಮಭಾಯ್ ಈ ಕೃತ್ಯವನ್ನು ಪೂರ್ವಯೋಜಿತವಾಗಿ ನಡೆಸಿದ್ದಾ ಅಥವಾ ಇದು ಆ ಕ್ಷಣದ ಕೃತ್ಯವೇ ಎಂಬ ಬಗ್ಗೆಯೂ ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಿ ವಿರುದ್ಧ ಕಾನೂನು ಪ್ರಕ್ರಿಯೆಗಳು ಮುಂದುವರೆದಿದೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ಎಫ್ -16 ಯುದ್ಧ ವಿಮಾನ ಹೊಡೆದುರುಳಿಸಿದ ಭಾರತ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement