ಬಸ್‌ ನಲ್ಲೇ ಎಲೆ ಅಡಿಕೆ ತಿಂದು ಉಗಿದ ಮಹಿಳೆ ; ಪ್ರಶ್ನೆ ಮಾಡಿದ್ದಕ್ಕೆ ಕಂಡಕ್ಟರಗೆ ಹಿಗ್ಗಾಮುಗ್ಗಾ ಥಳಿತ…!

ತುಮಕೂರು : ಕ್ಷುಲ್ಲಕ ಕಾರಣಕ್ಕೆ ಸಾರಿಗೆ ಬಸ್ ನಿರ್ವಾಹಕ ಮತ್ತು ಪ್ರಯಾಣಿಕರ ಮಧ್ಯೆ ಜಗಳ ನಡೆದು, ನಿರ್ವಾಹಕನನ್ನು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ತುಮಕೂರು ಜಿಲ್ಲೆಯ ಪಾವಗಡ ಪಟ್ಟಣದಲ್ಲಿ ನಡೆದಿದೆ.
ಕೆಎಸ್ಆರ್‌ಟಿಸಿ ಬಸ್ಸಿನಲ್ಲಿ ಎಲೆ ಅಡಿಕೆ ತಿಂದ ಮಹಿಳೆ ಅದನ್ನು ಬಸ್ಸಿನ ಒಳಗೆ ಉಗಿದಿದ್ದರು. ಇದನ್ನು ನೋಡಿ ಪ್ರಶ್ನೆ ಮಾಡಿದ ಕಂಡಕ್ಟರ್‌ ಮೇಲೆ ಹಲ್ಲೆ ನಡೆಸಿ ಹಿಗ್ಗಾಮುಗ್ಗಾ ಥಳಿಸಲಾಗಿದೆ ಎಂದು ಹೇಳಲಾಗಿದೆ. ಕಂಡಕ್ಟರ್‌ ಅನಿಲಕುಮಾರ ಈ ಸಂಬಂಧ ಪೊಲೀಸ್ ಠಾಣೆಗೆ ನಿರ್ವಾಹಕ ದೂರು ನೀಡಿದ್ದಾರೆ.
ಪಾವಗಡದಿಂದ ತುಮಕೂರು ಕಡೆಗೆ ಹೊರಟ್ಟಿದ್ದ ಕೆಎಸ್ಆರ್‌ಟಿಸಿ ಬಸ್‌ನಲ್ಲಿ ಪಾವಗಡ ಪಟ್ಟಣದ ಇಬ್ಬರು ಮಹಿಳೆಯರು ಸೇರಿ ಒಟ್ಟು 6 ಜನ ಬಸ್ ನಲ್ಲಿ ಕುಳಿತಿದ್ದರು. ಅವರೆಲ್ಲ ಬೆಂಗಳೂರಿಗೆ ಪ್ರಯಾಣ ಮಾಡಬೇಕಾಗಿತ್ತು. ಆದರೆ ಕಂಡಕ್ಟರ್‌ ಬಸ್ ಬೆಂಗಳೂರಿಗೆ ಹೋಗುವುದಿಲ್ಲ, ತುಮಕೂರು ವರೆಗೆ ಮಾತ್ರ ಹೋಗುತ್ತದೆ ಎಂದು ತಿಳಿಸಿದಂತೆ.. ಈ ವೇಳೆ ಬಸ್ ಇಳಿಯಲು ಆರು ಜನ ಮುಂದಾಗಿದ್ದಾರೆ. ಆಗ ಬಸ್ ಒಳಗೆ ಮಹಿಳೆಯೋರ್ವಳು ಎಲೆ-ಅಡಿಕೆ ಉಗಿದಿದ್ದಾಳೆ ಎನ್ನಲಾಗಿದೆ. ಇದನ್ನು ನೋಡಿದ ಕಂಡಕ್ಟರ್‌ ಇದನ್ನು ಪ್ರಶ್ನಿಸಿದ್ದಾನೆ ಹಾಗೂ ಸ್ವಚ್ಛಗೊಳಿಸುವಂತೆ ಹೇಳಿದರು ಎನ್ನಲಾಗಿದೆ. ಈ ವೇಳೆ ಮಾತಿಗೆ ಮಾತು ಬೆಳೆದು ವಿಕೋಪಕ್ಕೆ ಹೋಗಿಮಹಿಳೆ ಜೊತೆಗಿದ್ದವರು ಬಸ್ ಕಂಡಕ್ಟರ್ ಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎನ್ನಲಾಗಿದೆ. ಈ ಘಟನೆ ಸಂಬಂಧ ಪಾವಗಡ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಪೊಲೀಸರು ಮಹಿಳೆ ಸೇರಿ ನಾಲ್ವರನ್ನ ಬಂಧಿಸಿದ್ದಾರೆ.

ಪ್ರಮುಖ ಸುದ್ದಿ :-   ಚಿತ್ರದುರ್ಗ | ಬಡಿದಾಡಿಕೊಂಡ ಪಿಎಸ್‌ಐ-ಬಿಜೆಪಿ ಮುಖಂಡ ; ವೀಡಿಯೊ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement