ಖ್ಯಾತ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಆಸ್ಪತ್ರೆಗೆ ದಾಖಲು

ಚೆನ್ನೈ: ಖ್ಯಾತ ಸಂಗೀತ ಸಂಯೋಜಕ ಎ.ಆರ್. ರೆಹಮಾನ್ ಅವರನ್ನು ಚೆನ್ನೈನ ಗ್ರೀಮ್ಸ್ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರು ಪ್ರಸ್ತುತ ಅಪೋಲೋ ಆಸ್ಪತ್ರೆಯಲ್ಲಿ ವೈದ್ಯಕೀಯ ಆರೈಕೆಯಲ್ಲಿದ್ದಾರೆ.ಅವರು ಇಂದು, ಭಾನುವಾರ ಡಿಸ್ಚಾರ್ಜ್ ಆಗುವ ನಿರೀಕ್ಷೆ ಇದೆ.
ರೆಹಮಾನ್ ಅವರು ಲಂಡನ್‌ನಿಂದ ಹಿಂದಿರುಗಿದ ನಂತರ ಅಸ್ವಸ್ಥತೆಯನ್ನು ಅನುಭವಿಸಿದ ನಂತರ ಚೆನ್ನೈನ ಅಪೋಲೋ ಆಸ್ಪತ್ರೆಗೆ ದಾಖಲಿಸಲಾಗಿದೆ. ಅವರ ವಕ್ತಾರರ ಪ್ರಕಾರ, ರೆಹಮಾನ್ ಅವರು ಅಸ್ವಸ್ಥರಾಗಿದ್ದರು ಮತ್ತು ಕಳೆದ ರಾತ್ರಿ ತಪಾಸಣೆಗೆ ತೆರಳಿದರು, ಅಲ್ಲಿ ವೈದ್ಯರು ಅವರ ಸ್ಥಿತಿ ನಿರ್ಜಲೀಕರಣ(ಡಿಹೈಡ್ರೇಶನ್‌)ದ ಕಾರಣದಿಂದಾಗಿ ಆಗಿದೆ ಎಂದು ದೃಢಪಡಿಸಿದರು. ಈಗ ಅವರು ಉತ್ತಮವಾಗಿದ್ದಾರೆ ಮತ್ತು ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವರ್ಷ ಎಆರ್ ರೆಹಮಾನ್ ಮತ್ತು ಅವರ ಪತ್ನಿ ಸಾಯಿರಾ ಬಾನು ತಮ್ಮ ವಕೀಲರ ಮೂಲಕ ವಿಚ್ಛೇದನವನ್ನು ಘೋಷಿಸಿದ ನಂತರ ಸುದ್ದಿ ಮಾಡಿದ್ದರು. ಅವರು 29 ವರ್ಷಗಳ ತಮ್ಮ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದರು. ಅವರಿಗೆ ಮೂವರು ಮಕ್ಕಳಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement