ಚಿತ್ರದುರ್ಗ | ಬಡಿದಾಡಿಕೊಂಡ ಪಿಎಸ್‌ಐ-ಬಿಜೆಪಿ ಮುಖಂಡ ; ವೀಡಿಯೊ ವೈರಲ್‌

ಆಘಾತಕಾರಿ ಘಟನೆಯೊಂದರಲ್ಲಿ ಚಿತ್ರದುರ್ಗದಲ್ಲಿ ಪೊಲೀಸ್ ಅಧಿಕಾರಿ ಮತ್ತು ಸ್ಥಳೀಯ ಬಿಜೆಪಿ ಮುಖಂಡ ಪರಸ್ಪರ ಕಪಾಳಮೋಕ್ಷ ಮಾಡಿಕೊಂಡ ಘಟನೆ ನಡೆದಿದೆ. ದುರ್ಗದ ಸಿರಿ ಹೋಟೆಲ್ ಎದರಿನ ರಸ್ತೆಯಲ್ಲಿ ನಡೆದ ಪರಸ್ಪರ ಕಪಾಳಮೋಕ್ಷ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವರದಿಗಳ ಪ್ರಕಾರ, ಶುಕ್ರವಾರ ಮಧ್ಯರಾತ್ರಿ ಮಧುಗಿರಿ ಬಿಜೆಪಿ ಜಿಲ್ಲಾಧ್ಯಕ್ಷ ಹನುಮಂತಗೌಡ ಮತ್ತು ಇತರರು ಹೋಟೆಲ್ ಎದುರಿನ ಪ್ರದೇಶದಲ್ಲಿ ನಿಂತಿದ್ದಾಗ ಈ ಘಟನೆ ಸಂಭವಿಸಿದೆ. ಕರ್ತವ್ಯ ನಿರತ ಸಬ್ ಇನ್ಸ್ ಪೆಕ್ಟರ್ ಗಾದಿಲಿಂಗಪ್ಪ ನಿಂತಿದ್ದವರ ಬಳಿ ಬಂದು ಾಲ್ಲಿಂದ ತೆರಳುವಂತೆ ಸೂಚಿಸಿದ್ದಾರೆ. ನಂತರ ಆದರೆ, ಹನುಮಂತಗೌಡರು ಹಾಗೂ ಸಬ್ ಇನ್ಸ್ ಪೆಕ್ಟರ್ ನಡುವೆ ಮಾತಿನ ಚಕಮಕಿ ನಡೆದಿದೆ. ಇದು ವಿಕೋಪಕ್ಕೆ ಹೋಗಿ ಪರಸ್ಪರ ಕಪಾಳಮೋಕ್ಷ ಮಾಡಿದ್ದಾರೆ. ನಂತರ ಅಲ್ಲಿದ್ದವರು ಜಗಳ ಬಿಡಿಸಿದ್ದಾರೆ.

ವಾಗ್ವಾದದ ವೇಳೆ ಸಬ್ ಇನ್ಸ್ ಪೆಕ್ಟರ್ ಗಾದಿಲಿಂಗಪ್ಪ ಅವರ ಕೈ ಮತ್ತು ಬೆರಳುಗಳಿಗೆ ಗಾಯಗಳಾಗಿವೆ. ನಂತರ ಚಿಕಿತ್ಸೆಗಾಗಿ ಅವರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ. ಘರ್ಷಣೆ ಹಿನ್ನೆಲೆಯಲ್ಲಿ ಪೊಲೀಸರು ಹನುಮಂತೇಗೌಡ ಅವರನ್ನು ವಶಕ್ಕೆ ಪಡೆದಿದ್ದಾರೆ. ಆ ಬಳಿಕ ಹನುಮಂತೇಗೌಡ ಎದೆ ನೋವೆಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಆದರೆ, ಗೌಡರು ಆರೋಪವನ್ನು ತಳ್ಳಿಹಾಕಿದ್ದು, ಪೊಲೀಸರು ನನ್ನ ಮಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ದಾರೆ..
ಈ ಘಟನೆ ಬಗ್ಗೆ ಬಿಜೆಪಿಯ ಕರ್ನಾಟಕ ರಾಜ್ಯ ಘಟಕದ ಮುಖ್ಯಸ್ಥ ಬಿವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದು, ರಾಜ್ಯದ ಕಾನೂನು ಸುವ್ಯವಸ್ಥೆಯ ಬಗ್ಗೆ ಆಡಳಿತಾರೂಢ ಕಾಂಗ್ರೆಸ್ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದಾರೆ. X (ಹಿಂದೆ ಟ್ವಿಟರ್) ನಲ್ಲಿ ವೈರಲ್ ವೀಡಿಯೊವನ್ನು ಹಂಚಿಕೊಂಡಿರುವ ವಿಜಯೇಂದ್ರ, ಕಾಂಗ್ರೆಸ್ ನೇತೃತ್ವದ ಸರ್ಕಾರವು ರಾಜ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.

https://twitter.com/HateDetectors/status/1900882063731159139?ref_src=twsrc%5Etfw%7Ctwcamp%5Etweetembed%7Ctwterm%5E1900882063731159139%7Ctwgr%5E4c80b40ff88a8c5b421d90c63241e001e387719d%7Ctwcon%5Es1_&ref_url=https%3A%2F%2Fwww.newsx.com%2Findia%2Fkarnataka-why-did-a-bjp-leader-and-cop-slap-each-other-watch-video%2F

“ಕೆಲವು ಕೆಳ ಹಂತದ ಪೊಲೀಸ್ ಅಧಿಕಾರಿಗಳು ದರ್ಪವನ್ನು ಆಶ್ರಯಿಸುತ್ತಿದ್ದಾರೆ, ಸಾಮಾನ್ಯ ನಾಗರಿಕರು ಮತ್ತು ಜವಾಬ್ದಾರಿಯುತ ನಾಯಕರ ಮೇಲೆ ದೈಹಿಕವಾಗಿ ಹಲ್ಲೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ವಾಗ್ವಾದವನ್ನು ಖಂಡಿಸಿದ ವಿಜಯೇಂದ್ರ, “ನಮ್ಮ ಪಕ್ಷದ ಮಧುಗಿರಿ (ಸಂಘಟನಾ ಜಿಲ್ಲಾ) ಜಿಲ್ಲಾಧ್ಯಕ್ಷ ಹನುಮಂತೇಗೌಡ ಅವರ ವಿರುದ್ಧ ಚಿತ್ರದುರ್ಗದಲ್ಲಿ ಪಿಎಸ್‌ಐ ಗಾದಿಲಿಂಗಪ್ಪ ಅವರು ಗೂಂಡಾಗಿರಿ ಪ್ರದರ್ಶಿಸಿರುವುದನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ ಎಂದು ಹೇಳಿದ್ದಾರೆ.

ಆಸ್ಪತ್ರೆಗೆ ಬಿಜೆಪಿ ಮುಖಂಡರ ಭೇಟಿ: ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ, ವಿದಾನ ಪರಿಷತ್‌ ಸದಸ್ಯ ಕೆ.ಎಸ್‌.ನವೀನ, ಮುಖಂಡರಾದ ತಿಪ್ಪಾ ರೆಡ್ಡಿ ಮೊದಲಾದವರು ಆಸ್ಪತ್ರೆಗೆ ಭೇಟಿ ನೀಡಿ ಹನುಮಂತೇಗೌಡ ಅವರು ಆರೋಗ್ಯ ವಿಚಾರಿಸಿದ್ದಾರೆ. ಹೊಟೇಲ್‌ ಬಳಿ ನಿಂತಿದ್ದವರ ಮೇಲೆ ಪಿಎಸ್‌ಐ ಏಕಾಏಕಿ ಹಲ್ಲೆ ನಡೆಸಿ ದೌರ್ನ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದು ಕ್ರಮಕ್ಕೆ ಆಗ್ರಹಿಸಿದ್ದಾರೆ.
ಎರಡೂ ಕಡೆಯವರು ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಪರಸ್ಪರ ದೂರು ದಾಖಲಿಸಿಕೊಂಡಿದ್ದಾರೆ. ಪೊಲೀಸರು ಎರಡೂ ಕಡೆಯಿಂದ ಪ್ರತಿ-ದೂರುಗಳನ್ನು ದಾಖಲಿಸಿಕೊಂಡಿದ್ದಾರೆ ಮತ್ತು ಹೊಡೆದಾಟಕ್ಕೆ ಕಾರಣವೇನು ಮತ್ತು ಪರಿಸ್ಥಿತಿ ವಿಕೋಪಕ್ಕೆ ಹೋಗಲು ಕಾರಣ ಏನು ಎಂಬುದನ್ನು ನಿರ್ಧರಿಸಲು ತನಿಖೆ ನಡೆಯುತ್ತಿದೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement