ವೀಡಿಯೊ…| ರಸ್ತೆಯಲ್ಲಿ ಹೋಗುತ್ತಿದ್ದ ಬೈಕ್‌ ಸವಾರರಿಗೆ ಏಕಾಏಕಿ ಮುಂದೆ ಪ್ರತ್ಯಕ್ಷವಾದ ಎರಡು ಸಿಂಹಗಳು ; ಆಮೇಲೆ ಆಗಿದ್ದೇನು..?

ಗಾಂಧಿನಗರ: ಗುಜರಾತ್‍ನ ಗಿರ್ ಅರಣ್ಯದೊಳಗಿನ ರಸ್ತೆಯಲ್ಲಿ ಮೂವರು ಯುವಕರು ಬೈಕ್‍ನಲ್ಲಿ ಹೋಗುತ್ತಿದ್ದಾಗ ಎರಡು ಸಿಂಹಗಳು ಆಕಸ್ಮಿಕವಾಗಿ ಅವರ ದಾರಿಗೆ ಅಡ್ಡ ಬಂದ ಘಟನೆಯೊಂದು ನಡೆದಿದೆ. ನಡುರಸ್ತೆಯಲ್ಲಿ ದೈತ್ಯ ಸಿಂಹವನ್ನು ಕಂಡು ಹೆದರಿದ ಬೈಕ್ ಸವಾರ ಮತ್ತು ಇಬ್ಬರು ಯುವಕರು ತಮ್ಮನ್ನು ರಕ್ಷಿಸಿಕೊಳ್ಳಲು ಬೈಕ್ ಬಿಟ್ಟು ಓಡಿ ಹೋಗಿದ್ದಾರೆ. ಆದರೆ ಆ ಸಿಂಹಗಳು ಇವರತ್ತ ಲಕ್ಷ್ಯ ಕೊಡದೆ ಹೊರಟು ಹೋಗಿವೆ. ಇದಕ್ಕೆ ಸಂಬಂಧಪಟ್ಟ ವೀಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್  ಆಗಿದೆ.
ವೈರಲ್ ವಿಡಿಯೊದಲ್ಲಿ ಬೈಕಿನಲ್ಲಿ ಮೂವರು ಯುವಕರು ಬರುತ್ತಿರುವಾಗ ಪೊದೆಯಿಂದ ಹೊರಬಂದ ಎರಡು ಸಿಂಹಗಳು ಕಾಡಿನ ರಸ್ತೆಯಲ್ಲಿ ಬೈಕ್ ಸವಾರರ ಕಡೆಗೆ ನಡೆದುಕೊಂಡು ಬಂದಿವೆ. ಆ ಸಿಂಹಗಳನ್ನು ನೋಡಿ ಭಯಗೊಡ ಒಬ್ಬ ರಸ್ತೆಯಲ್ಲಿ ಬಂದ ದಾರಿಯಲ್ಲೇ ಹಿಂದಕ್ಕೆ ಓಡಿದ್ದಾನೆ. ಇನ್ನೊಬ್ಬ ಪಕ್ಕದಲ್ಲಿದ್ದ ಪೊದೆಯೊಳಗೆ ಹೋಗಿ ಅವಿತುಕೊಂಡಿದ್ದಾನೆ.

ಆದರೆ ಬೈಕ್ ಓಡಿಸುತ್ತಿದ್ದ ವ್ಯಕ್ತಿ ಮಾತ್ರ ಧೈರ್ಯದಿಂದ ಸ್ವಲ್ಪ ಹೊತ್ತು ಅವುಗಳನ್ನೆ ನೋಡುತ್ತಾ ನಿಂತಿದ್ದಾನೆ. ಅವು ಮತ್ತಷ್ಟು ಹತ್ತಿರ ಬಂದಾಗ ಆತ ಕೂಡ ಹೆದರಿ ಪೊದೆಯ ಕಡೆಗೆ ಓಡಿದ್ದಾನೆ. ಆದರೆ ಈ ಎರಡು ಸಿಂಹಗಳು ಇವರತ್ತ ಗಮನ ಕೊಡದೆ ಹಾಗೆ ಹೊರಟು ಹೋಗಿವೆ.
ಭಾರತೀಯ ಅರಣ್ಯ ಸೇವೆಗಳ ಅಧಿಕಾರಿ ಸುಸಾಂತ ನಂದಾ ಅವರು ಈ ವೀಡಿಯೊವನ್ನು ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಸಿಂಹಗಳಿಗೆ ಬೇಟೆಯಾಡುವ ಆಸಕ್ತಿ ಇರಲಿಲ್ಲ. ಹಾಗಾಗಿ ಅವು ಸುಮ್ಮನೆ ಹೋಗಿವೆ ಎಂದು ಇದರಲ್ಲಿ ಬರೆದಿದ್ದಾರೆ.

ಗುಜರಾತ್‍ನಲ್ಲಿ ನಡು ರಸ್ತೆಯಲ್ಲಿ ಸಿಂಹಗಳು ಎದುರಾಗುವಂತಹ ಘಟನೆ ನಡೆದಿದ್ದು ಇದೇ ಮೊದಲಲ್ಲ. ಈ ಹಿಂದೆ ಗುಜರಾತ್‍ನಲ್ಲಿ ರಸ್ತೆಯ ಮಧ್ಯದಲ್ಲಿ ಸಿಂಹವೊಂದು ಬೈಕಿನಲ್ಲಿದ್ದ ಇಬ್ಬರು ವ್ಯಕ್ತಿಗಳ ಬಳಿ ಬಂದ ಘಟನೆ ನಡೆದಿತ್ತು. ಸಿಂಹ ಅವರ ಮೇಲೆ ದಾಳಿ ಮಾಡದೇ ಪಕ್ಕದ ಹೊಲಕ್ಕೆ ಹಾರಿ ಕಾಡಿನಲ್ಲಿ ಕಣ್ಮರೆಯಾಗಿತ್ತು ಎಂದು ಹೇಳಲಾಗಿದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement