ಜಸ್ಟ್‌ ಪಾಸಾದ್ರೆ ಸಾಕು… ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್ಸ್‌ ಬರಲೇ ಬೇಕು ; ದೈವಕ್ಕೆ ಪತ್ರ ಬರೆದ ವಿದ್ಯಾರ್ಥಿ

ಉಡುಪಿ : ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ (exam) ಪಾಸ್‌ ಮಾಡಿಸುವಂತೆ ಪ್ರಾರ್ಥಿಸಿ ದೈವಕ್ಕೆ ಚೀಟಿ ಬರೆದಿದ್ದಾನೆ. ಪರೀಕ್ಷೆಯಲ್ಲಿ ನನಗೆ ಇಂತಿಷ್ಟು ಅಂಕ ಬರಬೇಕೆಂದು ಚೀಟಿ ಬರೆದು ಅದನ್ನು ಹುಂಡಿಗೆ ಹಾಕಿ ದೈವ ದೇವರಲ್ಲಿ ಜಸ್ಟ್‌ ಪಾಸ್‌ ಮಾಡಿಸಿದರೆ ಸಾಕು ಎಂದು ಪ್ರಾರ್ಥಿಸಿದ್ದಾನೆ. ಇದೀಗ ಈ ಚೀಟಿ ಫೋಟೋ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.
ಜಿಲ್ಲೆಯ ಕುಂದಾಪುರ ಹೊಳ ಮಗ್ಗಿ ಹೊರ ಬೊಬ್ಬರ್ಯ ದೇವಸ್ಥಾನದ ಕಾಣಿಕೆ ಹುಂಡಿಯ ಲೆಕ್ಕಚಾರ ನಡೆಯುವಾಗ ಈ ಪತ್ರ ಸಿಕ್ಕಿದೆ. ಇದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜಸ್ಟ್ ಪಾಸ್ ಮಾಡುವಷ್ಟು ಅಂಕ ಸಿಗುವಂತೆ ಮಾಡು ಎಂದು ದೈವದ ಬಳಿ ಕೋರಿಕೆ ಇಟ್ಟಿರುವ ವಿದ್ಯಾರ್ಥಿ ಎಷ್ಟು ಅಂಕಗಳು ಬೇಕು ಎಂದು ದೇವರಿಗೆ ಸಲ್ಲಿಸಿದ ಮನವಿ ಪತ್ರದಲ್ಲಿ ಅದನ್ನು ಬರೆದಿದ್ದಾನೆ. ಪ್ರತಿಯೊಂದು ವಿಷಯಕ್ಕೂ ಎಷ್ಟೆಷ್ಟು ಅಂಕ ಸಿಗಬೇಕು ಎಂದು ಬರೆದು ದೈವದ ಬಳಿ ಕೋರಿಕೆ ಇಟ್ಟಿದ್ದಾನೆ. ಇದಕ್ಕಿಂತ ಕಡಿಮೆ ಬೇಡವೇ ಬೇಡ ದೇವರೆ ಎಂದು ಹೊರ ಬೊಬ್ಬರ್ಯ ದೈವದ ಬಳಿ ಪ್ರಾರ್ಥಿಸಿದ್ದಾನೆ.
ದೇವರಿಗೆ ಬರೆದ ಮನವಿಯಲ್ಲಿ “ಪರೀಕ್ಷೆಯಲ್ಲಿ ನನಗೆ ಇಷ್ಟು ಮಾರ್ಕ್‌ ಬರಬೇಕು, ದೇವರೇ ಹೊರ ಬೊಬ್ಬರ್ಯ; ಗಣಿತ- 39, 38, 37, 36, ಇಂಗ್ಲೀಷ್-‌ 39, 38, 37, ಕನ್ನಡ- 40, 39 ವಿಜ್ಞಾನ- 39, 38, ಹಿಂದಿ- 40, 39, ಸಮಾಜ ವಿಜ್ಞಾನ- 38, 37 ಮತ್ತೆ ಇದಕ್ಕಿಂತ ಕಡಿಮೆ ಅಂಕ ಬೇಡ ದೇವರೆ” ಎಂದು ಪರೀಕ್ಷೆಯಲ್ಲಿ ಜಸ್ಟ್‌ ಪಾಸ್‌ ಮಾಡಿಸುವಂತೆ ಮನವಿ ಮಾಡಿದ್ದಾನೆ.

ಪ್ರಮುಖ ಸುದ್ದಿ :-   ಕೆಪಿಸಿಸಿ ನೂತನ ಅಧ್ಯಕ್ಷರಾಗಿ ಬಿ.ಕೆ. ಹರಿಪ್ರಸಾದ ನೇಮಕ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement