ರಾಯ್ಪುರ: ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಭೂಪೇಶ ಬಘೇಲ್ ಅವರು ಕಾಂಗ್ರೆಸ್ ಸಭೆಯಲ್ಲಿ ಪಾಲ್ಗೊಳ್ಳಲು ದೆಹಲಿಗೆ ಹೊರಡುವ ಮೊದಲು ತಮ್ಮ ನಿವಾಸದಲ್ಲಿ ಸಿಬಿಐ ಶೋಧ ನಡೆಸಿದೆ ಎಂದು ಬುಧವಾರ ಹೇಳಿದ್ದಾರೆ.
ಕೇಂದ್ರೀಯ ತನಿಖಾ ದಳದ (ಸಿಬಿಐ) ತಂಡಗಳು ಬುಧವಾರ ರಾಯ್ಪುರ ಮತ್ತು ಭಿಲೈನಲ್ಲಿರುವ ಬಘೆಲ್ ಅವರ ನಿವಾಸಗಳು ಮತ್ತು ಹಿರಿಯ ಪೊಲೀಸ್ ಅಧಿಕಾರಿ ಮತ್ತು ಅವರ ನಿಕಟವರ್ತಿಗಳ ನಿವಾಸಗಳು ಮೇಲೆಯೂ ಸಿಬಿಐ ದಾಳಿ ನಡೆಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಯಾವುದಕ್ಕಾಗಿ ಶೋಧ ನಡೆಸಲಾಗಿದೆ ಎಂಬುದರ ಬಗ್ಗೆ ಸಿಬೀಐ ಏನನ್ನೂ ಹೇಳಿಲ್ಲ. ಆದಾಗ್ಯೂ, ಇದು ಮಹದೇವ್ ಆನ್‌ಲೈನ್ ಬೆಟ್ಟಿಂಗ್ ಅಪ್ಲಿಕೇಶನ್ ‘ಹಗರಣ’ಕ್ಕೆ ಲಿಂಕ್ ಆಗಿದೆ ಎಂದು ಹೇಳಲಾಗುತ್ತಿದೆ.
ಸಿಬಿಐಗೆ ಪ್ರತಿಕ್ರಿಯಿಸಿದ ಬಘೆಲ್ ಅವರ ಕಚೇರಿ ಈ ಬಗ್ಗೆ ಎಕ್ಸ್‌ನಲ್ಲಿನ ಪೋಸ್ಟ್ ಮಾಡಿದ್ದು, “ಈಗ ಸಿಬಿಐ ಬಂದಿದೆ. ಮಾಜಿ ಮುಖ್ಯಮಂತ್ರಿ ಭೂಪೇಶ್ ಬಾಘೇಲ್ ಏಪ್ರಿಲ್ 8 ಮತ್ತು 9 ರಂದು ಅಹಮದಾಬಾದ್‌ನಲ್ಲಿ (ಗುಜರಾತ್) ನಡೆಯಲಿರುವ ಎಐಸಿಸಿ ಸಭೆಗಾಗಿ ರಚಿಸಲಾದ “ಕರಡು ಸಮಿತಿ” ಸಭೆಯಲ್ಲಿ ಪಾಲ್ಗೊಳ್ಳಲು ಇಂದು ದೆಹಲಿಗೆ ಹೋಗಲಿದ್ದಾರೆ. ಅದಕ್ಕೂ ಮುನ್ನ ಸಿಬಿಐ ಅವರ ರಾಯ್ಪುರ ಮತ್ತು ಭಿಲೈ ನಿವಾಸಗಳನ್ನು ತಲುಪಿದೆ ಎಂದು ಅದು ಹೇಳಿದೆ.
ವರದಿಗಳ ಪ್ರಕಾರ, ರಾಯ್ಪುರ ಮತ್ತು ದುರ್ಗ್ ಜಿಲ್ಲೆಗಳಲ್ಲಿ ಕಾಂಗ್ರೆಸ್‌ನ ಇತರ ಕೆಲವು ನಾಯಕರು ಮತ್ತು ಪೊಲೀಸ್ ಅಧಿಕಾರಿಗಳ ಆವರಣಗಳ ಮೇಲಯೂ ಈ ದಾಳಿಗಳು ನಡೆದಿವೆ.
ಛತ್ತೀಸ್‌ಗಢ ಕಾಂಗ್ರೆಸ್ ಸಂವಹನ ವಿಭಾಗದ ಮುಖ್ಯಸ್ಥ ಸುಶೀಲ ಆನಂದ ಶುಕ್ಲಾ ಈ ಕ್ರಮದ ಬಗ್ಗೆ ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡರು ಮತ್ತು ಆಡಳಿತಾರೂಢ ಬಿಜೆಪಿಯು ಬಘೇಲ್ ಅವರಿಗೆ ಹೆದರುತ್ತಿದೆ ಎಂದು ಹೇಳಿದ್ದಾರೆ.
“ಭೂಪೇಶ ಬಘೇಲ್ ಪಂಜಾಬ್ ಪಕ್ಷದ ಉಸ್ತುವಾರಿ ಆದಂದಿನಿಂದ ಬಿಜೆಪಿಗೆ ಭಯವಾಗಿದೆ. ಮೊದಲು ಅವರ ನಿವಾಸಕ್ಕೆ ಜಾರಿ ನಿರ್ದೇಶನಾಲಯವನ್ನು ಕಳುಹಿಸಲಾಗಿತ್ತು ಮತ್ತು ಈಗ ಸಿಬಿಐ ಅನ್ನು ಕಳುಹಿಸಲಾಗಿದೆ. ಇದು ಬಿಜೆಪಿಯ ಭಯವನ್ನು ತೋರಿಸುತ್ತದೆ. ಬಿಜೆಪಿಯು ರಾಜಕೀಯವಾಗಿ ಹೋರಾಡಲು ವಿಫಲವಾದಾಗ ಅದು ತನ್ನ ವಿರೋಧಿಗಳ ವಿರುದ್ಧ ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಬಳಸುತ್ತದೆ,” ಎಂದು ಅವರು ಆರೋಪಿಸಿದರು.
ಭೂಪೇಶ ಬಘೇಲ್ ಅಥವಾ ಕಾಂಗ್ರೆಸ್ ಪಕ್ಷವು ಹೆದರುವುದಿಲ್ಲ ಎಂದು ಶುಕ್ಲಾ ಹೇಳಿದರು. ಬಿಜೆಪಿಯ ಈ ದಬ್ಬಾಳಿಕೆಯ ನೀತಿಯನ್ನು ದೇಶ ಮತ್ತು ರಾಜ್ಯದ ಜನತೆ ಚೆನ್ನಾಗಿ ಅರಿತಿದ್ದಾರೆ ಎಂದರು. ಈ ಹಿಂದೆಯೂ, ಏಳು ವರ್ಷದ (ಸ್ಲೀಜ್) ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ಸಿಬಿಐ ಬಘೆಲ್ ವಿರುದ್ಧ ಪ್ರಕರಣ ದಾಖಲಿಸಿತ್ತು, ಆದರೆ ನ್ಯಾಯಾಲಯವು ಇತ್ತೀಚೆಗೆ ಅವರನ್ನು ಎಲ್ಲಾ ಆರೋಪಗಳಿಂದ ಬಿಡುಗಡೆ ಮಾಡಿದೆ ಎಂದು ಶುಕ್ಲಾ ಹೇಳಿದರು.
ರಾಜ್ಯ ಸರ್ಕಾರವು ಕಳೆದ ವರ್ಷ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಮಹಾದೇವ್ ಹಗರಣಕ್ಕೆ ಸಂಬಂಧಿಸಿದ 70 ಪ್ರಕರಣಗಳು ಮತ್ತು ರಾಜ್ಯದ ಆರ್ಥಿಕ ಅಪರಾಧಗಳ ವಿಭಾಗದಲ್ಲಿ (ಇಒಡಬ್ಲ್ಯು) ದಾಖಲಾಗಿರುವ ಒಂದು ಪ್ರಕರಣವನ್ನು ಸಿಬಿಐಗೆ ಹಸ್ತಾಂತರಿಸಿದೆ.
ಇತ್ತೀಚೆಗೆ, ಜಾರಿ ನಿರ್ದೇಶನಾಲಯವು ಆಪಾದಿತ ಮದ್ಯ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಬಘೇಲ್ ಅವರ ನಿವಾಸದಲ್ಲಿ ಶೋಧ ನಡೆಸಿತ್ತು
ನಿಮ್ಮ ಕಾಮೆಂಟ್ ಬರೆಯಿರಿ