ಕುಮಟಾ: ಯುಗಾದಿ ಹಬ್ಬದ ಪ್ರಯುಕ್ತ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಮಹಾಸತಿ ಸಭಾಭವನದಲ್ಲಿ ನಡೆಯಿತು. ಕುಮಟಾ, ಹೊನ್ನಾವರ, ಶಿರಸಿ ಸೇರಿದಂತೆ ಉತ್ತರ ಕನ್ನಡ ಜಿಲ್ಲೆಯ ವಿವಿಧ ತಾಲೂಕುಗಳಿಂದ ವಿವಿಧ ಭಜನಾ ತಂಡಗಳು ಪಾಲ್ಗೊಂಡಿದ್ದವು.
ಈ ವರ್ಷದ ಭಜಾ ಸ್ಪರ್ಧೆಯಲ್ಲಿ ಶಾಸ್ತ್ರೀಯ ಶೈಲಿಯ ಭಜಾ ಸ್ಪರ್ಧೆ ಹಾಗೂ ಸಾಂಪ್ರದಾಯಿಕ ಶೈಲಿಯ ಭಜನಾ ಸ್ಪರ್ಧೆ ಎಂದು ಎರಡು ವಿಭಾಗ ಮಾಡಲಾಗಿತ್ತು.
ಶಾಸ್ತ್ರೀಯ ಶೈಲಿಯ ಭಜನಾ ಸ್ಪರ್ಧೆಯಲ್ಲಿ ಶಾಂತಲಾ ಹಾಗೂ ಸಂಗಡಿಗರಿದ್ದ ಕುಮಟಾದ ಸ್ವರಧಾರಾ ಭಜನಾ ತಂಡ ಪ್ರಥಮ ಸ್ಥಾನ ಪಡೆಯಿತು. ಕುಮಟಾದ ಕುಮಟಾದ ವಸುದಾ ಶಾಸ್ತ್ರಿ ಮತ್ತು ಸಂಗಡಿಗರ ತಂಡವು ದ್ವಿತೀಯ ಬಹುಮಾನ ಪಡೆಯಿತು. ಹಾಗೂ ಶಿರಸಿಯ ಶ್ರೀ ಗೌರಿ ಮಹಿಳಾ ಸಮಾಜದ ತಂಡದವರು ತೃತೀಯ ಬಹುಮಾನ ಪಡೆದರು.
ಶಾಸ್ತ್ರೀಯ ಶೈಲಿ ಭಜನಾ ವಿಭಾಗದಲ್ಲಿ ಪ್ರಥಮ ಹಾಗೂ ದ್ವಿತೀಯ ಸ್ಥಾನ ಪಡೆದ ಭಜನಾ ತಂಡಗಳಿಗೆ ವಿದ್ವಾನ್ ಗೌರೀಶ ಯಾಜಿ ಅವರು ತರಬೇತಿ ನೀಡಿದ್ದರು.
ಸಾಂಪ್ರದಾಯಿಕ ಭಜನಾ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನವನ್ನು ಶ್ರೀ ಮಹಾವಿಷ್ಣು ಭಜನಾ ಮಂಡಳಿ ಬಳ್ಕೂರು (ಹೊನ್ನಾವರ ತಾಲೂಕು) ಪ್ರಥಮ ಸ್ಥಾನ ಪಡೆಯಿತು. ದ್ವಿತೀಯ ಸ್ಥಾನವನ್ನು ಶ್ರೀ ಜಟಕೇಶ್ವರ ಭಜನಾ ಮಂಡಳಿ ಕಡ್ಲೆ (ಹೊನ್ನಾವರ ತಾಲೂಕು) ಹಾಗೂ ತೃತೀಯ ಸ್ಥಾನವನ್ನು ಶ್ರೀ ಶಾಂತಿಕಾ ಪರಮೇಶ್ವರಿ ಭಜನಾ ಮಂಡಳಿ ಕುಮಟಾ ಅವರು ಪಡೆದುಕೊಂಡರು.
ಭಜನಾಸ್ಪರ್ಧಾ ನಿರ್ಣಾಯಕರಾಗಿ ತಾರಾ ಭಟ್ ಹೊನ್ನಾವರ, ಸುಧೀರ್ ಸುರೇಶ ನಾಯಕ್ ಬೆಂಗ್ರೆ ಸಿದ್ದಾಪುರ. ಕೃಷ್ಣಮೂರ್ತಿ ಗುನಗಾ ಅಂಕೋಲಾ ಆಗಮಿಸಿದ್ದರು.
ಉದ್ಘಾಟನೆ :
ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಯುಗಾದಿ ಉತ್ಸವ ಸಮಿತಿಯ ಅಧ್ಯಕ್ಷರಾದ ಡಾ.ಸುರೇಶ ಹೆಗಡೆ, ಹಿಂದೂ ಧರ್ಮದಲ್ಲಿ, ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿರುವ ಭಜನೆ ಮನಸ್ಸಿಗೆ ಶಾಂತಿ ನೀಡುವುದಷ್ಟೇ ಅಲ್ಲ. ಸಂಘಟನೆಯ ಸೂತ್ರವೂ ಹೌದು ಎಂದು ಹೇಳಿದರು.
ಉತ್ಸವ ಸಮಿತಿಯ ಸಂಚಾಲಕರಾದ ಮುರಳೀಧರ ಪ್ರಭು ಮಾತನಾಡಿ, ಭಗವಂತನನ್ನು ಭಕ್ತಿಯಿಂದ ಒಲಿಸುವ ಮಾರ್ಗವೆಂದರೆ ಅದು ಭಜನೆ. ಮುಖ್ಯವಾಗಿ ಯುವ ಸಮೂಹಕ್ಕೆ ಸನಾತನ ಪರಂಪರೆಗಳನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಇದೆ. ಇದಕ್ಕೆ ಎಲ್ಲರೂ ಕೈಜೋಡಿಸೋಣ ಎಂದರು.
ಯುಗಾದಿ ಉತ್ಸವ ಸಮಿತಿಯ ಎಂ.ಟಿ. ಗೌಡ ಸ್ವಾಗತಿಸಿದರು. ಅರುಣ ಮಂಕೀಕರ್ ಕಾರ್ಯಕ್ರಮ ನಿರೂಪಿಸಿದರು. ವೇದಿಕೆಯ ಮೇಲೆ ಉತ್ಸವ ಸಮಿತಿಯ ಕೋಶಾಧಿಕಾರಿಗಳಾದ ಜಿ.ಎಸ್. ಹೆಗಡೆ ಇದ್ದರು.
ಕಾರ್ಯಕ್ರಮದ ಕೊನೆಯಲ್ಲಿ ನಿರಂತರ ತಮ್ಮ ಜೀವನವಿಡೀ ಭಜನಾ ಸೇವೆ ಮುಂದುವರಿಸಿಕೊಂಡು ಬರುತ್ತಿರುವ ಹಿರಿಯ ನಾಗರಿಕರಾದ ಬಳಕೂರಿನ ವಿಠ್ಠಲ ತಿವಿಕ್ರಮ್ ಭಟ್ ಹಾಗೂ ಶಿರಸಿಯ ನಾಗರತ್ನ ಶೇಟ್ ಅವರನ್ನು ಅವರ ನಿರಂತರ ಭಜನಾ ಸೇವೆಯನ್ನು ಸ್ಮರಿಸಿ ಸನ್ಮಾನಿಸಲಾಯಿತು.
ಯುಗಾದಿ ಉತ್ಸವ ಸಮಿತಿಯ ಗೌರವಾಧ್ಯಕ್ಷರಾದ ಎಸ್.ಜಿ ನಾಯ್ಕ, ಉಪಾಧ್ಯಕ್ಷರಾದ ಸುಧಾ ಶಾನಭಾಗ, ಸದಸ್ಯರಾದ ಬಿ. ಎನ್. ಕೆ. ನಾಗರಾಜ, ಅರುಣ ಹೆಗಡೆ, ಸುರೇಶ ಭಟ್, ಎಂ. ಆರ್. ಭಟ್, ಎಸ್. ವಿ, ಹೆಗಡೆ. ರೋಹಿದಾಸ ಗಾವಡಿ, ಶೀತಲ್ ಭಂಡಾರಿ, ವಿನುತಾ ಶಾನಭಾಗ, ಪೂರ್ಣಿಮಾ ಕಾಮತ್ ಮೊದಲಾದವರು ಹಾಜರಿದ್ದರು.
ನಿಮ್ಮ ಕಾಮೆಂಟ್ ಬರೆಯಿರಿ