ಬಾಲಿವುಡ್‌ ನಟ ಸಲ್ಮಾನ್ ಖಾನ್ ರಾಮ ಮಂದಿರ ಎಡಿಶನ್‌ ವಾಚ್ ಧರಿಸಿದ್ದಕ್ಕೆ ಮುಸ್ಲಿಂ ಧರ್ಮಗುರು ಆಕ್ಷೇಪ

ಬಾಲಿವುಡ್ ನಟ ಸಲ್ಮಾನ್ ಖಾನ್ ಅವರು ರಾಮ ಜನ್ಮಭೂಮಿ ಆವೃತ್ತಿಯ ಕೈಗಡಿಯಾರವನ್ನು ಧರಿಸುವುದು “ಹರಾಮ್” (ಇಸ್ಲಾಂನಲ್ಲಿ ನಿಷೇಧಿಸಲಾಗಿದೆ) ಎಂದು ಬರೇಲ್ವಿ ಧರ್ಮಗುರು ಮತ್ತು ಅಖಿಲ ಭಾರತ ಮುಸ್ಲಿಂ ಜಮಾತ್ ಅಧ್ಯಕ್ಷ ಮೌಲಾನಾ ಶಹಾಬುದ್ದೀನ್ ರಜ್ವಿ ಹೇಳಿದ್ದಾರೆ.
ಸಲ್ಮಾನ್‌ ಖಾನ್‌ ಅವರು ತಮ್ಮ ಮುಂಬರುವ ಚಲನಚಿತ್ರ ಸಿಕಂದರ್ ಪ್ರಚಾರದ ಸಂದರ್ಭದಲ್ಲಿ ಧರಿಸಿದ್ದ ಸೀಮಿತ ಆವೃತ್ತಿಯ ರಾಮ ಜನ್ಮಭೂಮಿ ವಾಚ್ ಎಲ್ಲರ ಗಮನ ಸೆಳೆಯಿತು. ನಟ ಇನ್ಸ್ಟಾಗ್ರಾಂ(Instagram)ನಲ್ಲಿ ಪ್ರಚಾರದ ಚಿತ್ರವನ್ನು ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಅವರು ಈ ವಾಚ್‌ ಧರಿಸಿದ್ದಾರೆ.
ಶುಕ್ರವಾರ ಹೇಳಿಕೆ ನೀಡಿದ ಮೌಲಾನಾ ರಜ್ವಿ , ನಟ ಸಲ್ಮಾನ್ ಖಾನ್ ರಾಮ ಮಂದಿರದ ಪ್ರಚಾರಕ್ಕಾಗಿ ತಯಾರಿಸಿದ ರಾಮ ಆವೃತ್ತಿಯ ವಾಚ್ ಅನ್ನು ಧರಿಸಿದ್ದಾರೆ. ಮುಸ್ಲಿಮರಾಗಿರುವ ಅವರು ವಾಚ್‌ ಅನ್ನು ಕೈಯಲ್ಲಿ ಧರಿಸುವುದು ಕಾನೂನುಬಾಹಿರ ಮತ್ತು ಹರಾಮ್ ಎಂದು ಹೇಳಿದ್ದಾರೆ. ಅವರು ಇಸ್ಲಾಂ ಧರ್ಮಕ್ಕೆ ವಿರುದ್ಧವಾದ ಚಟುವಟಿಕೆಗಳಿಂದ ದೂರವಿರಬೇಕು ಎಂದು ಒತ್ತಿ ಹೇಳಿದರು.

“ಸಲ್ಮಾನ್ ಖಾನ್ ಭಾರತದ ಪ್ರಸಿದ್ಧ ವ್ಯಕ್ತಿ. ಅವರು ಲಕ್ಷಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ ಮತ್ತು ಅವರು ಮುಸ್ಲಿಂ ಕೂಡ” ಎಂದು ಅವರು ಹೇಳಿದರು. ಯಾವುದೇ ಮುಸ್ಲಿಂ, ಅವರು ಸಲ್ಮಾನ್ ಖಾನ್ ಆಗಿದ್ದರೂ ಸಹ, ರಾಮಮಂದಿರ ಅಥವಾ ಇತರ ಯಾವುದೇ ಮುಸ್ಲಿಮೇತರ ವಿಷಯವನ್ನು ಪ್ರಚಾರ ಮಾಡುತ್ತಿದ್ದರೆ, ಅದನ್ನು ಹರಾಮ್ ಎಂದು ಪರಿಗಣಿಸಲಾಗುತ್ತದೆ. ನಾನು ಸಲ್ಮಾನ್ ಖಾನ್ ಅವರು ಷರಿಯತ್ ತತ್ವಗಳನ್ನು ಅನುಸರಿಸಲು ಒತ್ತಾಯಿಸುತ್ತೇನೆ” ಎಂದು ಮೌಲಾನಾ ಹೇಳಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಇಸ್ಲಾಮಿಗೆ ವಿರುದ್ಧವಾದ ಚಟುವಟಿಕೆಗಳನ್ನು ಮಾಡುವುದು ಷರಿಯತ್ ವಿರುದ್ಧವಾಗಿದೆ. ಅವರು ಅಂತಹ ಚಟುವಟಿಕೆಗಳಿಂದ ದೂರವಿರಬೇಕು ಎಂದು ಮೌಲಾನಾ ಹೇಳಿದರು.

ಪ್ರಮುಖ ಸುದ್ದಿ :-   ಸಿಇಟಿ ಫಲಿತಾಂಶ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ ರಾಜ್ಯಕ್ಕೆ ಪ್ರಥಮ

ರಾಮಜನ್ಮಭೂಮಿ ಆವೃತ್ತಿಯ ವಾಚ್
ಸಲ್ಮಾನ್ ಖಾನ್ ಅವರ ಮುಂಬರುವ ಚಿತ್ರ ಸಿಕಂದರ್‌ನ ಪ್ರಚಾರದ ಸಮಯದಲ್ಲಿ ಸೀಮಿತ ಆವೃತ್ತಿ ರಾಮ ಜನ್ಮಭೂಮಿ ವಾಚ್‌ ಧರಿಸಿದ್ದರು.
ವಾಚ್‌ನಲ್ಲಿ ರಾಮ ಜನ್ಮಭೂಮಿಯ ಸಾಂಸ್ಕೃತಿಕ ಮತ್ತು ಐತಿಹಾಸಿಕ ಮಹತ್ವವನ್ನು ಹೇಳುವ ಕೆತ್ತನೆಗಳಿವೆ.
ಸೀಮಿತ ಆವೃತ್ತಿಯ ವಾಚ್‌ನ ಕೇವಲ 49 ವಾಚ್‌ಗಳು ಪ್ರಪಂಚದಾದ್ಯಂತ ಲಭ್ಯವಿದೆ ಮತ್ತು ಅವುಗಳಲ್ಲಿ ಒಂದು ಸಲ್ಮಾನ್‌ ಖಾನ್‌ ಬಳಿ ಇದೆ. ವಾಚ್ ₹34 ಲಕ್ಷ ಮೌಲ್ಯದ್ದಾಗಿದೆ.
ಸಲ್ಮಾನ್ ಖಾನ್ ಅವರ ಮುಂದಿನ ಚಿತ್ರ ಸಿಕಂದರ್ ಮಾರ್ಚ್ 30 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇದರಲ್ಲಿ ರಶ್ಮಿಕಾ ಮಂದಣ್ಣ ಕೂಡ ನಟಿಸಿದ್ದಾರೆ.

4 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement