ಮ್ಯಾನ್ಮಾರ್‌ನಲ್ಲಿ ಶುಕ್ರವಾರ ಸಂಭವಿಸಿದ 7.7 ತೀವ್ರತೆಯ ಭೂಕಂಪದಿಂದ ಉಂಟಾದ ಭಾರಿ ಕಂಪನದಿಂದಾಗಿ ಬ್ಯಾಂಕಾಕಿನ ಹೋಟೆಲ್‌ನ ಮೇಲ್ಛಾವಣಿಯ ಸ್ವಮ್ಮಿಂಗ್ ಪೂಲ್‌ನಲ್ಲಿ ಶಾಂತವಾಗಿದ್ದ ನೀರು ಒಮ್ಮೆಲೇ ಉಗ್ರ ರೂಪ ತಾಳಿತು. ಶಾಂತವಾದ ಈಜುಕೊಳವು ಪ್ರಕ್ಷುಬ್ಧವಾಗಿ ಮಾರ್ಪಟ್ಟ ಭಯಾನಕ ಕ್ಷಣವನ್ನು ವೀಡಿಯೊ ಸೆರೆಹಿಡಿದಿದೆ.
ನೀರಿನಲ್ಲಿ ಗಾಳಿ ತುಂಬಿದ ಲಾಂಜರ್‌ಗಳ ಮೇಲೆ ಇಬ್ಬರು ತೇಲುತ್ತಿರುವಾಗ ಪೂಲ್‌ಸೈಡ್‌ನಲ್ಲಿ ವ್ಯಕ್ತಿಯೊಬ್ಬರು ವಿಶ್ರಾಂತಿ ಪಡೆಯುತ್ತಿರುವುದನ್ನು ತುಣುಕಿನಲ್ಲಿ ತೋರಿಸಲಾಗಿದೆ. ಭೂಕಂಪ ಸಂಭವಿಸುತ್ತಿದ್ದಂತೆ, ನೀರು ಅಲೆಯಾಗಿ ಮಾರ್ಪಟ್ಟು ಉಕ್ಕೇರಲು ಪ್ರಾರಂಭಿಸಿತು. ಕೆಲವೇ ಸೆಕೆಂಡುಗಳಲ್ಲಿ, ಬೃಹತ್ ಅಲೆಗಳು ರೂಪುಗೊಂಡವು, ಕೊಳದ ದಂಡೆಯ ಮೇಲೆ ಅಪ್ಪಳಿಸಲು ಪ್ರಾರಂಭಿಸಿತು.
ನೀರಿನಲ್ಲಿ ತೇಲುತ್ತಿದ್ದ ದಂಪತಿಗೆ ತಕ್ಷಣವೇ ಹೊರಹೋಗುವಂತೆ ಡೆಕ್‌ನ ಮೇಲಿದ್ದ ವ್ಯಕ್ತಿ ಸನ್ನೆ ಮಾಡಿದ್ದಾನೆ. ದಂಪತಿ ತಕ್ಷಣವೇ ಕೊಳದ ದಡಕ್ಕೆ ಬಂದಿದಾರೆ. ಡೆಕ್‌ಗೆ ನೀರು ಅಪ್ಪಳಿಸುತ್ತಿದ್ದಾಗ ಮಹಿಳೆ ಹೇಗೋ ದಡವನ್ನು ತಲುಪಿದ್ದಾಳೆ. ತಕ್ಷಣವೇ ಪುರುಷ ಹಿಂಬಾಲಿಸಿದ. ಕೆಲವೇ ಕ್ಷಣಗಳಲ್ಲಿ, ಏರಿಳಿತದ ಅಲೆಗಳು ಇಡೀ ಪ್ರದೇಶದಲ್ಲಿ ಭಯಭೀತಿ ಉಂಟು ಮಾಡಿದವು. ಉಕ್ಕಿದ ನೀರು ಮೇಲ್ಛಾವಣಿಯಿಂದ ಕೆಳಗಿರುವ ಬೀದಿಗಳಲ್ಲಿ ಧುಮ್ಮಿಕ್ಕಿತು.
ಥೈಲ್ಯಾಂಡ್ ಮತ್ತು ಮ್ಯಾನ್ಮಾರ್‌ನಾದ್ಯಂತ ಇದೇ ರೀತಿಯ ದೃಶ್ಯಗಳು ಕಂಡುಬಂದವು, ಅಲ್ಲಿ ಎತ್ತರದ ಕಟ್ಟಡಗಳಲ್ಲಿನ ಮೇಲ್ಛಾವಣಿಯ ಈಜುಕೊಳಗಳು ಜಲಪಾತಗಳಾಗಿ ಮಾರ್ಪಟ್ಟಿವು. ಭೂಕಂಪದ ಪ್ರಬಲ ಕಂಪನಕ್ಕೆ ಈಜುಕೊಳಗಳು ಉಕ್ಕಿ ಗಗನಚುಂಬಿ ಕಟ್ಟಡಗಳಲ್ಲಿ ಜಲಪಾತದಂತೆ ಕೆಳಗೆ ಇಳಿಯಿತು, ಹಠಾತ್ ಅಲೆಗಳು ಬೀದಿಗೆ ಬೀಳುವಾಗ ಕೆಲವರು ಮೇಲೆ ದೊಪ್ಪೆಂದು ಅಪ್ಪಳಿಸಿದವು.
ಈ ಶತಮಾನದಲ್ಲಿ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಅತ್ಯಂತ ಶಕ್ತಿಶಾಲಿ ಭೂಕಂಪವು ಶುಕ್ರವಾರ ಸ್ಥಳೀಯ ಕಾಲಮಾನ ಮಧ್ಯಾಹ್ನ 12:50 ಕ್ಕೆ ಅಪ್ಪಳಿಸಿತು. 7.7 ತೀವ್ರತೆಯ ಭೂಕಂಪವು ಮಧ್ಯ ಮ್ಯಾನ್ಮಾರ್‌ನಲ್ಲಿ ಕೇಂದ್ರಬಿಂದುವನ್ನು ಹೊಂದಿದ್ದು, ಥೈಲ್ಯಾಂಡ್, ಚೀನಾ, ಭಾರತ, ವಿಯೆಟ್ನಾಂ ಮತ್ತು ಬಾಂಗ್ಲಾದೇಶದವರೆಗೆ ಕಂಪನಗಳು ಸಂಭವಿಸಿವೆ. ಭೂಕಂಪದ ನಂತರ 6.4 ತೀವ್ರತೆಯ ನಂತರದ ಆಘಾತ ಸಂಭವಿಸಿದೆ.
ಭೂಕಂಪದಲ್ಲಿ ಕನಿಷ್ಠ 1,644 ಜನರು ಸಾವಿಗೀಡಾಗಿದ್ದಾರೆ ಮತ್ತು 3,400 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ದೃಢಪಡಿಸಲಾಗಿದೆ, ಸಂಖ್ಯೆಗಳು ಹೆಚ್ಚಾಗುವ ನಿರೀಕ್ಷೆಯಿದೆ. ಕಟ್ಟಡಗಳು ಕುಸಿದಿವೆ, ರಸ್ತೆಗಳು ಒಡೆದಿವೆ ಮತ್ತು ಸಾವಿರಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದಾರೆ ಎಂದು ನಂಬಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ