ಆರೋಗ್ಯದಲ್ಲಿ ಏರುಪೇರು : ಲಾಲು ಪ್ರಸಾದ ಯಾದವ್ ಆಸ್ಪತ್ರೆಗೆ ದಾಖಲು

ಪಾಟ್ನಾ: ಆರ್‌ಜೆಡಿ ಅಧ್ಯಕ್ಷ ಮತ್ತು ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ ಯಾದವ್‌ ಅವರನ್ನು ಪಾಟ್ನಾದ ಆಸ್ಪತ್ರೆಗೆ ದಾಖಲಿಸಿ ನಂತರ ಬುಧವಾರ ದೆಹಲಿಗೆ ಕರೆದೊಯ್ದು ಏಮ್ಸ್‌ಗೆ ದಾಖಲಿಸಲಾಗಿದೆ ಎಂದು ವರದಿಗಳು ತಿಳಿಸಿದೆ.
76 ವರ್ಷದ ನಾಯಕನನ್ನು ಎಐಐಎಂಎಸ್‌ನ ಕಾರ್ಡಿಯಾಲಜಿ ಪ್ರಾಧ್ಯಾಪಕ ಡಾ ರಾಕೇಶ ಯಾದವ್ ಅವರ ಕಾರ್ಡಿಯೋ-ನ್ಯೂರೋ ಸೆಂಟರ್‌ನ ಕಾರ್ಡಿಯೋ ಕ್ರಿಟಿಕಲ್ ಕೇರ್ ಘಟಕಕ್ಕೆ ದಾಖಲಿಸಲಾಗಿದೆ ಎಂದು ಹೇಳಲಾಗಿದೆ. ವೈದ್ಯರ ತಂಡವು ಅವರ ಸ್ಥಿತಿಯನ್ನು ಮೇಲ್ವಿಚಾರಣೆ ಮಾಡುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಯಾದವ್, ತನ್ನ ತಂದೆಯ ಬೆನ್ನಿನ ಮೇಲೆ ಮತ್ತು ತೋಳಿನ ಮೇಲೆ ಹುಣ್ಣುಗಳು ಕಾಣಿಸಿಕೊಂಡಿದ್ದು, ದೆಹಲಿಯಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವ ಭರವಸೆ ಇದೆ ಎಂದು ಹೇಳಿದರು.
“ಲಾಲು ಪ್ರಸಾದ ಅವರು ದೆಹಲಿಗೆ ವಿಮಾನವನ್ನು ಹತ್ತಲು ಮಧ್ಯಾಹ್ನ ವಿಮಾನ ನಿಲ್ದಾಣವನ್ನು ತಲುಪಿದ್ದರು. ನನ್ನ ತಾಯಿ ರಾಬ್ರಿ ದೇವಿ ಅವರ ಜೊತೆಗಿದ್ದರು. ರಕ್ತದೊತ್ತಡದಲ್ಲಿ ಹಠಾತ್ ಕುಸಿತ ಕಂಡುಬಂದಿತು ಮತ್ತು ನಾವು ಅವರನ್ನು ಪರಾಸ್‌ ಆಸ್ಪತ್ರೆಗೆ ದಾಖಲಿಸಿದೆವು ಎಂದು ಅವರು ಹೇಳಿದರು.
ಮೇವು ಹಗರಣ ಪ್ರಕರಣಗಳಲ್ಲಿ ದೋಷಿಯಾಗಿರುವ ಲಾಲು ಪ್ರಸಾದ ಯಾದವ್‌ ಅವರು ಕೆಲವು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗುವವರೆಗೂ ತಮ್ಮ ಜೈಲು ಶಿಕ್ಷೆಯ ಬಹುಪಾಲು ಭಾಗವನ್ನು ಆಸ್ಪತ್ರೆಗಳಲ್ಲಿ ಕಳೆದರು.

ಪ್ರಮುಖ ಸುದ್ದಿ :-   ನರಕ -ಪಾಕಿಸ್ತಾನದ ನಡುವೆ ಆಯ್ಕೆ ಮಾಡುವ ಪರಿಸ್ಥಿತಿ ಬಂದ್ರೆ ನಾನು ಆಯ್ಕೆ ಮಾಡುವುದು ನರಕವನ್ನೇ... ; ಜಾವೇದ್‌ ಅಖ್ತರ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement