ಬಿಲ್ ತುಂಬಲಾಗದೆ ಮನೆ ವಿದ್ಯುತ್‌ ಸಂಪರ್ಕ ಕಡಿತ ; ಈತನಿಗೆ ಆದಾಯ ತೆರಿಗೆ ಇಲಾಖೆಯಿಂದ 11 ಕೋಟಿ ರೂ. ಪಾವತಿಸಲು ನೋಟಿಸ್…!

ಅಲಿಗಢ: ವಿದ್ಯುತ್‌ ಬಿಲ್ ಪಾವತಿಸಲು ಸಾಧ್ಯವಾಗದ ಕಾರಣಕ್ಕೆ ಅಲಿಗಢದ ವ್ಯಕ್ತಿಯೊಬ್ಬರ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ, ಆದರೆ ಅವರಿಗೆ ಆದಾಯ ತೆರಿಗೆ ಇಲಾಖೆ ಅವರಿಗೆ ದೊಡ್ಡ ಶಾಕ್‌ ನೀಡಿದೆ.
ಕ್ಷಯರೋಗದಿಂದ ಬಳಲುತ್ತಿರುವ ಪತ್ನಿ ಇರುವ ಕಾರ್ಮಿಕನಿಗೆ 11 ಕೋಟಿ ರೂ.ಗಳಿಗೂ ಹೆಚ್ಚು ತೆರಿಗೆ ಬಾಕಿ ಇದೆ ಎಂದು ಆದಾಯ ತೆರಿಗೆ ಇಲಾಖೆಯಿಂದ ನೋಟಿಸ್ ನೀಡಲಾಗಿದೆ…! ಉತ್ತರ ಪ್ರದೇಶದ ಅಲಿಗಢ ಜಿಲ್ಲೆಯ ಮೂವರಿಗೆ ಆದಾಯ ತೆರಿಗೆ ಇಲಾಖೆಯಿಂದ ಈ ತರಹದ ನೋಟಿಸ್‌ ಬಂದಿದೆ. ಇತರ ಇಬ್ಬರು ಜ್ಯೂಸ್ ಮಾರಾಟಗಾರ ಮತ್ತು ಕ್ಲೀನರ್ ಆಗಿದ್ದಾರೆ. ಕಳೆದ ಹದಿನೈದು ದಿನಗಳಲ್ಲಿ ಒಂದೇ ರೀತಿಯ ನೋಟಿಸ್‌ಗಳನ್ನು ಕಳುಹಿಸಲಾಗಿದೆ. ಈ ನೋಟಿಸ್‌ಗಳು ಈ ಮೂವರ ಆಧಾರ್ ಮತ್ತು ಪ್ಯಾನ್ ಕಾರ್ಡ್‌ಗಳನ್ನು ಯಾರೋ ದುರುಪಯೋಗಪಡಿಸಿಕೊಂಡಿದ್ದಾರೆ ಎಂಬ ಊಹಾಪೋಹಕ್ಕೆ ಕಾರಣವಾಗಿದೆ.
ಬೀಗಗಳಿಗೆ ಬಳಸುವ ಸ್ಪ್ರಿಂಗ್‌ಗಳನ್ನು ತಯಾರಿಸುವ ಕಾರ್ಖಾನೆಯಲ್ಲಿ ಕೆಲಸ ಮಾಡುವ ಯೋಗೇಶ ಶರ್ಮಾ, ತನ್ನ ಕುಟುಂಬದ ಆರ್ಥಿಕ ಪರಿಸ್ಥಿತಿ ಈಗಾಗಲೇ ತೀರಾ ಹದಗೆಟ್ಟಿದೆ, ವಿದ್ಯುತ್‌ ಬಿಲ್‌ ಪಾವತಿಸಲಾಗದೆ ವಿದ್ಯುತ್‌ ಸಂಪರ್ಕ ಕಡಿತಗೊಂಡು ಮನೆಯೇ ಕತ್ತಲೆಯಲ್ಲಿದೆ, ಆದರೆ ನನಗೆ ಆದಾಯ ತೆಇರಗೆ ಇಲಾಖೆಯಿಂದ ನೋಟಿಸ್‌ ಬಂದಿದೆ ಎಂದು ಆಘಾತ ವ್ಯಕ್ತಪಡಿಸಿದ್ದಾರೆ.
“ಮಾರ್ಚ್ 20 ರ ದಿನಾಂಕದ ನೋಟೀಸ್‌ನಲ್ಲಿ ನಾನು ಆದಾಯ ತೆರಿಗೆ ಇಲಾಖೆಗೆ 11.12 ಕೋಟಿ ರೂ. (11,11,85,991 ರೂ.) ತೆರಿಗೆ ಬಾಕಿ ಉಳಿಸಿಕೊಂಡಿದ್ದೇನೆ ಎಂದು ಹೇಳುತ್ತದೆ. ನಾನು ಇಷ್ಟು ಮೊತ್ತದ ಹಣದ ಬಗ್ಗೆ ಕೇಳಿಲ್ಲ, ನೋಡಿದ್ದಂತೂ ದೂರದ ಮಾತು. ನೋಟಿಸ್ ಬಂದ ನಂತರ ನಾನು ಮತ್ತು ನನ್ನ ಹೆಂಡತಿ ಊಟ ಮಾಡಿಲ್ಲ. ನಾನು ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇನೆ ಮತ್ತು ನನ್ನ ಮನೆಗೆ ಒಂದು ವಾರದಿಂದ ವಿದ್ಯುತ್ ಕಡಿತಗೊಳಿಸಲಾಗಿದೆ ಎಂದು ಯೋಗೇಶ ಶರ್ಮಾ ಹೇಳಿದರು. “ನನ್ನ ಹೆಂಡತಿಗೆ ಟಿಬಿ ಇದೆ ಮತ್ತು ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕುಟುಂಬದ ಎಲ್ಲರೂ ಚಿಂತಿತರಾಗಿದ್ದಾರೆ” ಎಂದು ಅವರು ಹೇಳಿದರು.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಗುತ್ತಿಗೆ ಆಧಾರದ ಮೇಲೆ ಕ್ಲೀನರ್ ಆಗಿ ಕೆಲಸ ಮಾಡುತ್ತಿದ್ದು, ತಿಂಗಳಿಗೆ 15,000 ರೂ. ಗಳಿಸುತ್ತಿರುವ ಕರಣಕುಮಾರ ಅವರಿಗೆ 33.89 ಕೋಟಿ ರೂ. (33,88,85,368 ರೂ.) ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ಬಂದಿದೆ.
“ಶನಿವಾರ ಸಂಜೆ 4 ಗಂಟೆ ಸುಮಾರಿಗೆ ನನಗೆ ನೋಟಿಸ್ ಬಂದಿದೆ. ಇದು ಹೇಗೆ ಬಂತು ಎಂದು ನನಗೆ ತಿಳಿದಿಲ್ಲ. ನಾನು ಇದನ್ನು ತನಿಖೆ ಮಾಡಲು ಪ್ರಯತ್ನಿಸುತ್ತಿದ್ದೇನೆ ಮತ್ತು ಎಫ್‌ಐಆರ್‌ ದಾಖಲಿಸಲು ಕಾಯುತ್ತಿದ್ದೇನೆ. ನನ್ನ ಪ್ಯಾನ್ ಕಾರ್ಡ್ ಮತ್ತು ಆಧಾರ್ ದುರುಪಯೋಗವಾಗಿದೆ ಎಂದು ನಾನು ಶಂಕಿಸುತ್ತೇನೆ, ಎಂದು ಅವರು ಹೇಳಿದ್ದಾರೆ.
‘ಇಷ್ಟು ಹಣವನ್ನು ನೋಡಿಲ್ಲ’
ಮೂರನೇ ವ್ಯಕ್ತಿ ಮೊಹಮ್ಮದ್ ರಯೀಸ್ ಎಂಬವರು ಜ್ಯೂಸ್ ಮಾರಾಟ ಮಾಡುತ್ತಾರೆ. ಶನಿವಾರ 7.8 ಕೋಟಿ (ರೂ. 7,79,02,457) ನೋಟಿಸ್ ಪಡೆದಿದ್ದಾರೆ. “ಈ ನೋಟಿಸ್ ಏಕೆ ನೀಡಲಾಗಿದೆ ಎಂದು ನನಗೆ ತಿಳಿದಿಲ್ಲ. ನಾನು ಜ್ಯೂಸ್ ಮಾತ್ರ ಮಾರಾಟ ಮಾಡುತ್ತೇನೆ. ನಾನು ಎಂದಿಗೂ ಇಷ್ಟು ಹಣವನ್ನು ನೋಡಿಲ್ಲ. ನಾನು ಈಗ ಏನು ಮಾಡಬೇಕು? ನಾನು ನನ್ನ ವೈಯಕ್ತಿಕ ದಾಖಲೆಗಳನ್ನು ಯಾರೊಂದಿಗಾದರೂ ಹಂಚಿಕೊಂಡಿದ್ದೇನೆಯೇ ಎಂದು ತಿಳಿದುಕೊಳ್ಳಲು ನಾನು ಐ-ಟಿ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿದರು. ಆದರೆ ನಾನು ಅದನ್ನು ಎಂದಿಗೂ ಮಾಡಿಲ್ಲ ಎಂದು ಹೇಳಿದೆ” ಎಂದು ರಯೀಸ್ ಹೇಳಿದರು.
“ರಯೀಸ್ ಮಿಲಿಯನೇರ್ ಆಗಿದ್ದರೆ, ಆತ ಜ್ಯೂಸ್ ಅಂಗಡಿಯನ್ನು ನಡೆಸುತ್ತಿದ್ದನೇ? ಇದು ಖಂಡಿತವಾಗಿಯೂ ವಂಚನೆಯ ಪ್ರಕರಣವಾಗಿದೆ” ಎಂದು ಾತನ ಸ್ನೇಹಿತ ಸೊಹೈಲ್ ಹೇಳಿದರು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ | ಅಮೃತಸರದ ಗೋಲ್ಡನ್​ ಟೆಂಪಲ್ ಮೇಲೆ ದಾಳಿಗೆ ಯತ್ನಿಸಿದ್ದ ಪಾಕಿಸ್ತಾನ; ದಾಳಿ ವಿಫಲಗೊಳಿಸಿದ ಭಾರತೀಯ ಸೇನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement