ವೀಡಿಯೊ…| 6 ತಿಂಗಳ ಶಿಶುವನ್ನು ಎತ್ತಿಕೊಂಡು ನಿಗಿನಿಗಿ ಕೆಂಡ ಹಾಯಲು ಹೋಗಿ ಮುಗ್ಗರಿಸಿ ಬಿದ್ದ ವ್ಯಕ್ತಿ…!

ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಅವರಂಗಾಡುನಲ್ಲಿರುವ ಅಗ್ನಿ ಮರಿಯಮ್ಮನ್ ದೇವಾಲಯದ ಉತ್ಸವದಲ್ಲಿ ಆರು ತಿಂಗಳ ಮಗುವನ್ನು ಎತ್ತಿಕೊಂಡು ಕೆಂಡ ಹಾಯಲು ಹೋಗಿ ವ್ಯಕ್ತಿಯೊಬ್ಬ ಮುಗ್ಗರಿಸಿ ಬಿದ್ದಿದ್ದು, ಅಲ್ಲಿದ್ದವರು ತಕ್ಷಣವೇ ಸಹಾಯಕ್ಕೆ ಧಾವಿಸಿ ಮುಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಿದ್ದಾರೆ.
ಈ ಘಟನೆಯ ವೀಡಿಯೊ ಈಗ ವೈರಲ್‌ ಆಗಿದೆ. ವ್ಯಕ್ತಿಯೊಬ್ಬರು ಆರು ತಿಂಗಳಿನ ಶಿಶುವನ್ನು ಎತ್ತಿಕೊಂಡು ಕೆಂಡ ಹಾಯಲು ಮುಂದಾಗಿದ್ದಾರೆ, ಜೋರಾಗಿ ನಡೆಯುವಾಗ ಆಯತಪ್ಪಿ ಕೆಳಗೆ ಕೆಂಡದ ಮೇಲೆ ಬಿದ್ದಿದ್ದಾರೆ. ತಕ್ಷಣ ಅಲ್ಲಿದ್ದವರು ಸಹಾಯಕ್ಕೆ ಧಾವಿಸಿ ಮುಗುವನ್ನು ಸುರಕ್ಷಿತವಾಗಿ ಮೇಲೆಕ್ಕೆತ್ತಿದ್ದಾರೆ. ನಂತರ ಇಬ್ಬರಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವರದಿ ತಿಳಿಸಿದೆ.

ಶ್ರೀ ಅಗ್ನಿ ಮಾರಿಯಮ್ಮನ ದೇವಸ್ಥಾನವು ತಮಿಳುನಾಡಿನ ನಾಮಕ್ಕಲ್ ಜಿಲ್ಲೆಯ ಪಲ್ಲಿಪಾಳ್ಯಂ ಅವರಂಗಾಡು ಪ್ರದೇಶದಲ್ಲಿದೆ. ಕೆಲವು ದಿನಗಳ ಹಿಂದೆ ಪುಷ್ಪಾರ್ಚನೆಯೊಂದಿಗೆ ಉತ್ಸವವು ಪ್ರಾರಂಭವಾಗಿದ್ದು, ಅದು ಮುಂದುವರೆದಿದೆ. ಇದರ ಬೆನ್ನಲ್ಲೇ ಹಬ್ಬದ ಪ್ರಮುಖ ಕಾರ್ಯಕ್ರಮವಾದ ಗುಂಡಮ್ಮನ ಹಬ್ಬ ವಿಜೃಂಭಣೆಯಿಂದ ನಡೆಯಿತು. ಅಗ್ನಿಕುಂಡೋತ್ಸವದಲ್ಲಿ ಬಾಲಕ, ಬಾಲಕಿಯರು, ಯುವತಿಯರು, ಯುವಕರು ಸೇರಿದಂತೆ ಸುತ್ತಮುತ್ತಲಿನ ಸಹಸ್ರಾರು ಭಕ್ತರು ಪಾಲ್ಗೊಂಡು ಹರಕೆ ತೀರಿಸಿದ್ದಾರೆ.

ಅವರಂಗಾಡು ಭಾಗದ ಕುಮಾರ ಎಂಬ ಭಕ್ತ ತನ್ನ ಆರು ತಿಂಗಳ ಹೆಣ್ಣು ಮಗುವಿನೊಂದಿಗೆ ನಿಗಿ ನಿಗಿ ಕೆಂಡ ತುಳಿಯಲು ಮುಂದಾದರು. ನಂತರ ಅಗ್ನಿ ಕುಂಡದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅನಿರೀಕ್ಷಿತವಾಗಿ ಎಡವಿ ತನ್ನ ಮಗುವಿನೊಂದಿಗೆ ಕುಂಡದ ಸಮೀಪದಲ್ಲಿ ಬಿದ್ದರು.
ಆಘಾತಕ್ಕೊಳಗಾದ ಸುತ್ತಮುತ್ತಲಿನ ಜನರು ಭಯದಿಂದ ಕಿರುಚಿದರು. ಇದಾದ ಬಳಿಕ ದೇವಸ್ಥಾನದ ಸಿಬ್ಬಂದಿ ತಕ್ಷಣವೇ ಮಗು ಹಾಗೂ ಕುಮಾರ ಅವರನ್ನು ಅಲ್ಲಿಂದ ಸುರಕ್ಷಿತವಾಗಿ ಮೇಲಕ್ಕೆತ್ತಿ ಹೆಚ್ಚಿನ ಅಪಾಯದಿಂದ ಪಾರು ಮಾಡಿದ್ದಾರೆ. ಇಬ್ಬರೂ ಸಣ್ಣಪುಟ್ಟ ಗಾಯಗಳಾಗಿದ್ದು, ಚಿಕಿತ್ಸೆ ನೀಡಲಾಗಿದೆ.

ಪ್ರಮುಖ ಸುದ್ದಿ :-   ತಿರುಪತಿ ದೇವಸ್ಥಾನದ ಆವರಣದಲ್ಲಿ ನಮಾಜ್ ; ಭುಗಿಲೆದ್ದ ವಿವಾದ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement