ಪತ್ನಿ ಕೊಲೆ ಪ್ರಕರಣದಲ್ಲಿ 1.5 ವರ್ಷ ಜೈಲಲ್ಲಿದ್ದ ಪತಿ ; ಪತ್ನಿ ಕೋರ್ಟ್‌ ಮುಂದೆ ಹಾಜರು…!

 ಮೈಸೂರು : ಹೆಂಡತಿ ಕೊಲೆ ಆರೋಪದ ಮೇಲೆ  ಗಂಡ ಸುಮಾರು 1.5 ವರ್ಷ ಜೈಲಿನಲ್ಲಿದ್ದ ಪ್ರಕರಣಕ್ಕೆ ಥ್ರಿಲ್ಲರ್‌ ಸಿನೆಮಾದಲ್ಲಿ ನಡೆಯುವಂತೆ ಟ್ವಿಸ್ಟ್​ ಸಿಕ್ಕಿದೆ. ಕೊಲೆಯಾಗಿದ್ದಾಳೆ ಎಂದು ತಿಳಿದಿದ್ದ ಪತ್ನಿ ನ್ಯಾಯಾಲಯಕ್ಕೆ ಹಾಜರಾದ ನಂತರ ಪ್ರಕರಣದ ಬಗ್ಗೆ ಸರಿಯಾದ ತನಿಖೆ ನಡೆಸಿ, ವರದಿ ಸಲ್ಲಿಸುವಂತೆ ಮೈಸೂರು ಸೆಷನ್ಸ್​ ನ್ಯಾಯಾಲಯ ಪೊಲೀಸರಿಗೆ ಆದೇಶಿಸಿದೆ. ಕೊಲೆಯಾಗಿದ್ದಾಳೆಂದು ನಂಬಲಾಗಿದ್ದ ಮಹಿಳೆ ಈಗ ಜೀವಂತವಾಗಿ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ವರದಿ ಸಲ್ಲಿಸುವಂತೆ ತನಿಖೆ ನಡೆಸಿ  ವರದಿ ಸಲ್ಲಿಸುವಂತೆ  ನ್ಯಾಯಾಲಯವು ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದೆ.
2020ರ ಡಿಸೆಂಬರ್‌ನಲ್ಲಿ ಕುಶಾಲನಗರದಿಂದ ನಾಪತ್ತೆಯಾಗಿದ್ದ ಪತ್ನಿ ಮಲ್ಲಿಗೆಯನ್ನು ಹತ್ಯೆಗೈದ ಆರೋಪದ ಮೇಲೆ ಬಂಧಿತರಾಗಿ ಜೈಲು ಸೇರಿದ್ದ ಸುರೇಶ ಎಂಬವರ ಸುತ್ತ ಪ್ರಕರಣ ಸುತ್ತುತ್ತದೆ. 2020ರಲ್ಲಿ ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಮೃತದೇಹವೊಂದು ಅಸ್ಥಿಪಂಜರದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ತನ್ನ ಹೆಂಡತಿ ಮಲ್ಲಿಗೆ ಕಾಣೆಯಾಗಿದ್ದಾಳೆ ಎಂದು ಸುರೇಶ ಎಂಬವರು ಇದೇ ಬೆಟ್ಟದಪುರ ಠಾಣೆಯಲ್ಲಿ ದೂರು ನೀಡಿದ್ದರು. ತನಿಖೆ ನಡೆಸಿದ ನಂತರ ಮಹಿಳೆಯ ಶವ ಸಿಕ್ಕ ಪ್ರಕರಣದಲ್ಲಿ ಪತಿಯೇ (ಸುರೇಶ) ಆರೋಪಿ ಎಂದು ಆತನನ್ನು ಬಂಧಿಸಲಾಗಿತ್ತು. ಬಳಿಕ ಆತನ ವಿರುದ್ಧ ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಲಾಗಿತ್ತು ಎಂದು ದೂರುದಾರರ ಪರ ವಕೀಲ ಪಾಂಡು ಪೂಜಾರಿ ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಶಿರಸಿ-ಕುಮಟಾ ರಸ್ತೆಯಲ್ಲಿ ವಾಹನ ಸಂಚಾರ ಸಂಪೂರ್ಣ ಬಂದ್‌

‘ಮಹಿಳೆಯ ಮೃತದೇಹವನ್ನು 2022ರಲ್ಲಿ ಡಿಎನ್​ಐ ಪರೀಕ್ಷೆ ಮಾಡಲಾಗಿತ್ತು. ಆದರೆ, ಮೃತದೇಹದ ಡಿಎನ್​ಐ ಪರೀಕ್ಷೆಯ ವರದಿ ಬರುವ ಮೊದಲು ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದರು. ಸುರೇಶ ಸುಮಾರು ಎರಡು ವರ್ಷಗಳ ಕಾಲ ಜೈಲಿನಲ್ಲಿರಬೇಕಾಯಿತು. ಮೊದಲು ಅವರಿಗೆ ಜಾಮೀನು ತಿರಸ್ಕರಿಸಲಾಗಿತ್ತು. ನಂತರ ಹೈಕೋರ್ಟ್​ನಲ್ಲಿ ಅವರಿಗೆ ಜಾಮೀನು ಸಿಕ್ಕಿತು” ಎಂದು ಅವರು ಹೇಳಿದರು.
ಏಪ್ರಿಲ್ 1 ರಂದು ಮಡಿಕೇರಿಯ ಹೋಟೆಲ್‌ನಲ್ಲಿ ಒಬ್ಬ ವ್ಯಕ್ತಿಯೊಂದಿಗೆ ಮಲ್ಲಿಗೆ ಊಟ ಮಾಡುತ್ತಿರುವುದು ಕಂಡಿದೆ. ಚಾರ್ಜ್ ಶೀಟ್‌ನಲ್ಲಿ ಹೆಸರಿಸಲಾದ ಸಾಕ್ಷಿಯೂ ಆಗಿರುವ ಸುರೇಶ ಅವರ ಸ್ನೇಹಿತ ಮಲ್ಲಿಗೆಯನ್ನು ಕಂಡಿದ್ದಾರೆ. ನಂತರ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಯಿತು. ನಂತರ ಆಕೆಯನ್ನು ಮಡಿಕೇರಿ ಪೊಲೀಸ್ ಠಾಣೆಗೆ ಕರೆದೊಯ್ದು, ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯಕ್ಕೆ “ಅಡ್ವಾನ್ಸ್‌ಮೆಂಟ್‌ ಅರ್ಜಿ” ಸಲ್ಲಿಸಲಾಯಿತು ಎಂದು ತಿಳಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ, ಆಕೆಯನ್ನು ಕೂಡಲೇ ಹಾಜರುಪಡಿಸುವಂತೆ ಪೊಲೀಸರಿಗೆ ಸೂಚಿಸಿತು. ನಂತರ ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ವಿಚಾರಣೆಗೆ ಒಳಪಡಿಸಿದಾಗ ಆಕೆ ಓಡಿಹೋಗಿ ಬೇರೊಬ್ಬನನ್ನು ಮದುವೆಯಾಗಿರುವುದಾಗಿ ಒಪ್ಪಿಕೊಂಡಿದ್ದಾಳೆ. ಸುರೇಶ ಅವರಿಗೆ ಏನಾಗಿದೆ ಎಂಬುದರ ಬಗ್ಗೆ ತನಗೆ ತಿಳಿದಿಲ್ಲ ಎಂದು ಹೇಳಿದ್ದಾಳೆ. ಮಡಿಕೇರಿಯಿಂದ ಕೇವಲ 25-30 ಕಿಮೀ ದೂರದಲ್ಲಿರುವ ಶೆಟ್ಟಿಹಳ್ಳಿ ಎಂಬ ಗ್ರಾಮದಲ್ಲಿ ಆಕೆ ವಾಸಿಸುತ್ತಿದ್ದಳು, ಆದರೆ ಪೊಲೀಸರು ಅವಳನ್ನು ಪತ್ತೆಹಚ್ಚಲು ಯಾವುದೇ ಪ್ರಯತ್ನ ಮಾಡಲಿಲ್ಲ. ಇದನ್ನು ಅತ್ಯಂತ ಗಂಭೀರ ಮತ್ತು ಅಪರೂಪದ ಪ್ರಕರಣ ಎಂದು ಕರೆದ ವಕೀಲರು, ಸುರೇಶ ನಿರಪರಾಧಿ ಎಂದು ತೀರ್ಪು ನೀಡುವ ಮೊದಲು ಏಪ್ರಿಲ್ 17 ರೊಳಗೆ ಲೋಪಗಳ ಬಗ್ಗೆ ಸಂಪೂರ್ಣ ವರದಿ ಸಲ್ಲಿಸುವಂತೆ ಎಸ್‌ಪಿಗೆ ಸೂಚಿಸಿದೆ” ಎಂದು ಪಾಂಡು ಪೂಜಾರಿ ಹೇಳಿದರು.
ನ್ಯಾಯಾಲಯದ ಅಂತಿಮ ತೀರ್ಪಿನ ನಂತರ ಸುರೇಶಗೆ ನ್ಯಾಯ ಮತ್ತು ಪರಿಹಾರ ಕೋರಿ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಯೋಜಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕರ್ನಾಟಕದಲ್ಲಿ ಈಗ ಚುನಾವಣೆ ನಡೆದರೆ ಬಿಜೆಪಿಗೆ ಪೂರ್ಣ ಬಹುಮತ ; ಪೀಪಲ್ಸ್ ಪಲ್ಸ್ ಸಮೀಕ್ಷೆಯಲ್ಲಿ ಬಹಿರಂಗ....

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement