ಬೆಂಗಳೂರು : ಶೋಧ ಕಾರ್ಯಾಚರಣೆಯ ನಂತರ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (ಕೆಬಿಡಿಸಿ) ಮಾಜಿ ಪ್ರಧಾನ ವ್ಯವಸ್ಥಾಪಕರನ್ನು ಬಂದಿಸಲಾಗಿದೆ ಎಂದು ಜಾರಿ ನಿರ್ದೇಶನಾಲಯ (ಇ.ಡಿ.)ಭಾನುವಾರ ತಿಳಿಸಿದೆ.
ಬಿ ಕೆ ನಾಗರಾಜಪ್ಪ ಅವರನ್ನು ಏಪ್ರಿಲ್ 5 ರಂದು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬೆಂಗಳೂರಿನ ವಿಶೇಷ ಪ್ರಿವೆನ್ಶನ್ ಆಫ್ ಮನಿ ಲಾಂಡರಿಂಗ್ ಆಕ್ಟ್ (ಪಿಎಂಎಲ್‌ಎ) ನ್ಯಾಯಾಲಯವು ಅವರನ್ನು 14 ದಿನಗಳ ಕಾಲ ಇ.ಡಿ. ಕಸ್ಟಡಿಗೆ ಕಳುಹಿಸಿದೆ ಎಂದು ಇ.ಡಿ.ಹೇಳಿಕೆಯಲ್ಲಿ ತಿಳಿಸಿದೆ.
ಕರ್ನಾಟಕದ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಭೋವಿ ಸಮುದಾಯದ ಕಲ್ಯಾಣಕ್ಕಾಗಿ ಕೆಬಿಡಿಸಿಯಿಂದ ₹ 97 ಕೋಟಿ ಮೌಲ್ಯದ ಹಣವನ್ನು “ದುರುಪಯೋಗದ ಆರೋಪದ ಮೇಲೆ ಸಲ್ಲಿಸಲಾದ ಅನೇಕ ಎಫ್‌ಐಆರ್‌ಗಳಿಂದ ಅಕ್ರಮ ಹಣ ವರ್ಗಾವಣೆ (ಮನಿ ಲಾಂಡರಿಂಗ್) ಪ್ರಕರಣವು ಉದ್ಭವಿಸಿದೆ.
ಏಪ್ರಿಲ್ 4 ರಂದು ಪ್ರಕರಣದ ವಿವಿಧ ಆರೋಪಿಗಳ ವಿರುದ್ಧ ಮತ್ತು ಬೆಂಗಳೂರಿನ ವಿ ವಿ ಟವರ್‌ನಲ್ಲಿರುವ ಕೆಬಿಡಿಸಿ ಕಚೇರಿಯಲ್ಲಿ ಇಡಿ ಶೋಧ ನಡೆಸಿತು. ಭೋವಿ ಸಮುದಾಯದ ಏಜೆಂಟರು ಒದಗಿಸಿದ ‘ನಕಲಿ’ ಫಲಾನುಭವಿಗಳ ಬ್ಯಾಂಕ್ ಖಾತೆಗಳನ್ನು ಬಳಸಿಕೊಂಡು ಕೆಬಿಡಿಸಿಯಿಂದ ಹಣವನ್ನು ಬೇರೆಡೆಗೆ ವರ್ಗಾಯಿಸುವಲ್ಲಿ ನಾಗರಾಜಪ್ಪ ‘ಪ್ರಮುಖ ಟೂಲ್ʼ ಎಂದು ಆರೋಪಿಸಲಾಗಿದೆ.
ಇತರ ಶಂಕಿತರು/ಆರೋಪಿಗಳೊಂದಿಗೆ ಸಹಕರಿಸಿ ತನ್ನ ಸಹಚರರ ಹೆಸರಿನಲ್ಲಿ ಸಂಘಟಿತವಾದ ಘಟಕಗಳ ಮೂಲಕ ಹಣವನ್ನು ಮತ್ತಷ್ಟು ಲೇಯರ್ ಮಾಡಲಾಗಿದೆ ಮತ್ತು ವರ್ಗಾವಣೆ ಮಾಡಲಾಗಿದೆ” ಎಂದು ಸಂಸ್ಥೆ ಹೇಳಿಕೊಂಡಿದೆ.
ಭೋವಿ ಅಭಿವೃದ್ಧಿ ನಿಗಮದ ಉದ್ಯಮಶೀಲತಾ ಯೋಜನೆ ಮತ್ತು ನೇರ ಸಾಲ ಯೋಜನೆಗಳಡಿ ಲಕ್ಷಾಂತರ ರೂ. ಸಾಲ ಕೊಡಿಸುವುದಾಗಿ ಮಧ್ಯವರ್ತಿಗಳ ಮೂಲಕ ಆಮಿಷವೊಡ್ಡಿ ಸಾರ್ವಜನಿಕರ ಗುರುತಿನ ದಾಖಲೆಗಳು, ಬ್ಯಾಂಕ್ ಚೆಕ್ ಪಡೆದು ದುರ್ಬಳಕೆ ಮಾಡಿಕೊಂಡಿರುವುದು ತನಿಖೆಯಲ್ಲಿ ಪತ್ತೆಯಾಗಿತ್ತು.
ಈ ಸಂಬಂಧ ಶುಕ್ರವಾರ ನಿಗಮದ ಅಧ್ಯಕ್ಷ ವ್ಯವಸ್ಥಾಪಕ ನಿರ್ದೇಶಕ ನಾಗರಾಜಪ್ಪ ಸೇರಿದಂತೆ ಹಲವರಿಗೆ ಸಂಬಂಧಿಸಿದ ಸ್ಥಳಗಳ ಮೇಲೆ ದಾಳಿ ನಡೆಸಿ ಶೋಧ ಕಾರ್ಯವನ್ನು ಇಡಿ ಅಧಿಕಾರಿಗಳು ಕೈಗೊಂಡಿದ್ದರು. ಆರೋಪಿಗಳು, ಇ.ಡಿ. ಪ್ರಕಾರ,ಕರ್ನಾಟಕ ಭೋವಿ ಅಭಿವೃದ್ಧಿ ನಿಗಮದ (KBDC) ಖಾತೆಗಳಿಂದ ಹಣವನ್ನು ನಕಲಿ ಘಟಕಗಳು ಮತ್ತು ಫಲಾನುಭವಿಗಳಿಗೆ “ಬದಲಾಯಿಸಲು” ನಿರ್ವಹಿಸುತ್ತಿದ್ದರು ಮತ್ತು ಅವರನ್ನು ಮತ್ತಷ್ಟು ಆರೋಪಿಗಳ ಸ್ನೇಹಿತರು ಮತ್ತು ಕುಟುಂಬ ಸದಸ್ಯರಿಗೆ ವರ್ಗಾಯಿಸಲಾಯಿತು ಎಂದು ಆರೋಪಿಸಲಾಗಿದೆ.
ದಾಳಿಯ ವೇಳೆ ಇ.ಡಿ.ಯು ಹಲವರು ದಾಖಲೆಗಳು, ಡಿಜಿಟಲ್ ದಾಖಲೆಗಳು ಮತ್ತು ಆಸ್ತಿ ವಿವರಗಳನ್ನು ವಶಪಡಿಸಿಕೊಂಡಿದೆ.
ನಿಮ್ಮ ಕಾಮೆಂಟ್ ಬರೆಯಿರಿ