ಎಂಜಿನ್ ನಲ್ಲಿ ತೊಂದರೆ ಕಾಣಿಸಿಕೊಂಡ ನಂತರ ವಿಮಾನವೊಂದನ್ನು ವಾಹನ ನಿಬಿಡ ರಸ್ತೆಯಲ್ಲಿ ಕಾರುಗಳು ಮತ್ತು ಲಾರಿಗಳ ನಡುವೆ ವಿಮಾನವನ್ನು ತುರ್ತಾಗಿ ಇಳಿಸಿದ ಘಟನೆ ಬ್ರೆಜಿಲ್‌ನಲ್ಲಿ ನಡೆದಿದೆ.
ಲಘು ವಿಮಾನದ ಹಿಂದೆ ಪ್ರಯಾಣಿಸುತ್ತಿದ್ದ ವಾಹನ ಚಾಲಕರು ಇದನ್ನು ಚಿತ್ರೀಕರಣ ಮಾಡಿದ್ದಾರೆ. ಅನೇಕ ವಾಃನ ಚಾಲಕರು ವಿಮಾನವು ಇಳಿಯುವಾಗ ವಾಹನಗಳಿಗೆ ಡಿಕ್ಕಿ ಹೊಡೆಯಲಿದೆ ಎಂದು ಭಯಪಟ್ಟರು.
ಆದರೆ ಇಂತಹ ಟ್ರಿಕಿ ಪರಿಸ್ಥಿತಿಯಲ್ಲೂ ಪೈಲಟ್ ತನ್ನ ಕೌಶಲ್ಯವನ್ನು ಓತೋರಿದ್ದು ಯಾರಿಗೂ ಏನೂ ತೊಂದರೆಯಾಗದಂತೆ ವಿಮಾನವನ್ನು ಹೆದ್ದರಿಯ ಮೇಲೆ ಚಲಿಸುತ್ತಿರುವ ವಾಹನಗಳ ಮಧ್ಯೆಯೇ ಸುರಕ್ಷಿತವಾಗಿ ಇಳಿಸಿದ್ದಾನೆ.
ಇಬ್ಬರು ವಿಮಾನದಲ್ಲಿದ್ದರು ಮತ್ತು ಅವರು ಸುರಕ್ಷಿತವಾಗಿದ್ದಾರೆ ಎಂದು ದೃಢಪಡಿಸಲಾಗಿದೆ. ಪೈಲಟ್ ಅವರನ್ನು 29 ವರ್ಷದ ಮಾಟಿಯಸ್ ರೆನಾನ್ ಕ್ಯಾಲಾಡೊ ಎಂದು ಗುರುತಿಸಲಾಗಿದೆ. ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದ ಮತ್ತೊಬ್ಬರನ್ನು ವಿಮಾನದ ಮಾಲೀಕ, 71 ವರ್ಷದ ಉದ್ಯಮಿ ವಾಲ್ಡೆಮಿರೊ ಜೋಸ್ ಮಿನೆಲ್ಲಾ ಎಂದು ಪೊಲೀಸರು ತಿಳಿಸಿದ್ದಾರೆ.
ದಕ್ಷಿಣ ಬ್ರೆಜಿಲ್ ರಾಜ್ಯವಾದ ಸಾಂತಾ ಕ್ಯಾಟರಿನಾದ ಗೌರಮಿರಿಮ್‌ನಲ್ಲಿ ವಿಮಾನವು ಏರೋಡ್ರೋಮ್ ಅನ್ನು ಬಿಟ್ಟ ನಂತರ ಈ ಘಟನೆ ಸಂಭವಿಸಿದೆ.
ಸಿಂಗಲ್-ಎಂಜಿನ್ ಪೆಲಿಕನ್ 500 ಬಿಆರ್ ವಿಮಾನಕ್ಕೆ ಹತ್ತಿರದ ಗಡುವಾದಲ್ಲಿ ಎಂಜಿನ್ ತೊಂದರೆ ಕಾಣಿಸಿಕೊಂಡಿತು ಎಂದು ವರದಿಯಾಗಿದೆ ಮತ್ತು ತುರ್ತು ಸ್ಪಂದನೆ ವಾಹನಗಳು ಘಟನಾ ಸ್ಥಳಕ್ಕೆ ಬರುತ್ತಿದ್ದಂತೆ ವಾಹನಗಳಿಂದ ತುಂಬಿದ್ದ ಹೆದ್ದಾರಿಯಲ್ಲಿ ತುರ್ತಾಗಿ ಇಳಿಸಲಾಯಿತು.
ವಿಮಾನದ ಹಿಂದೆ ಪ್ರಯಾಣಿಸುವ ಕಾರಿನಲ್ಲಿ ಮಹಿಳಾ ಪ್ರಯಾಣಿಕರೊಬ್ಬರು ‘ಇದು ಲಾರಿಯ ಮೇಲ್ಭಾಗದಲ್ಲಿ ಇಳಿಯಲಿದೆ, ಅದು ಕ್ರ್ಯಾಶ್ ಆಗಲಿದೆ’ ಎಂದು ಕೂಗುತ್ತಿರುವುದು ರೆಕಾರ್ಡ್ ಮಾಡಿದ ವೀಡಿಯೊದಲ್ಲಿ ಕಂಡುಬಂದಿದೆ.
ಒಂದು ಹಂತದಲ್ಲಿ ಅದು ಕಾರ್ಯನಿರತ ರಸ್ತೆಯ ಪಕ್ಕದಲ್ಲಿರುವ ಹುಲ್ಲಿನ ಅಂಚಿನಲ್ಲಿ ಇಳಿಯಲು ಹೋಗುತ್ತಿದೆಯೆಂದು ತೋರುತ್ತಿತ್ತು. ಆದರೆ ಟಾರ್ಮ್ಯಾಕ್‌ನಲ್ಲಿ ಲೇನ್‌ಗಳನ್ನು ದಾಟಿ ನಂತರ ವಾಹನಗಳ ದಟ್ಟಣೆಯ ನಡುವೆ ಸುರಕ್ಷಿತವಾಗಿ ವಿಮಾನವನ್ನು ಇಳಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ