ಮದುವೆಗೆ 10 ದಿನಗಳ ಮೊದಲು ತನ್ನ ಮಗಳ ಜೊತೆಗೆ ಮದುವೆ ನಿಶ್ಚಿತಾರ್ಥವಾದ ವರನೊಂದಿಗೆ ಪರಾರಿಯಾದ ವಧುವಿನ ತಾಯಿ…!

ಅಲಿಗಢದಲ್ಲಿ ನಡೆದ ಆಘಾತಕಾರಿ ಘಟನೆಯೊಂದರಲ್ಲಿ, ಮದ್ರಾಕ್ ಪೊಲೀಸ್ ಠಾಣೆ ವ್ಯಾಪ್ತಿ ಪ್ರದೇಶದ ಮಹಿಳೆಯೊಬ್ಬರು ಮದುವೆಗೆ ಕೇವಲ ಒಂಬತ್ತು ದಿನಗಳ ಮೊದಲು ತನ್ನ ಮಗಳ ಜೊತೆ ಮದುವೆ ನಿಶ್ಚಯವಾಗಿದ್ದ ಹುಡುಗನೊಂದಿಗೆ ಪರಾರಿಯಾದ ಘಟನೆ ವರದಿಯಾಗಿದೆ.
ವರನ ಪ್ರೇಮಪಾಶದಲ್ಲಿ ಸಿಲುಕಿದ್ದ ವಧುವಿನ ತಾಯಿ ಹಾಗೂ ತನ್ನ ಭಾವಿ ಅತ್ತೆಯ ಪ್ರೇಮಪಾಶದಲ್ಲಿ ಸಿಲುಕಿದ ವರ ಇಬ್ಬರೂ ಓಡಿಹೋಗಲು ಯೋಜನೆ ರೂಪಿಸಿದರು. ಓಡಿಹೋಗುವ ಮೊದಲು, ಮಹಿಳೆ ತನ್ನ ಮಗಳ ಮದುವೆಗಾಗಿ ಇಟ್ಟಿದ್ದ ಆಭರಣ ಮತ್ತು ಹಣವನ್ನು ತೆಗೆದುಕೊಂಡು ೋಡಿ ಹೋಗಿದ್ದಾಳೆ. ನಂತರ ಕುಟುಂಬವು ಪೊಲೀಸರಿಗೆ ದೂರು ನೀಡಿದೆ.
ಮಹಿಳೆಯೇ ತನ್ನ ಮಗಳ ಮದುವೆಯನ್ನು ಈ ಹುಡುಗನೊಂದಿಗೆ ನಿಶ್ಚಯ ಮಾಡಿಸಿದ್ದಳು ಎಂದು ತಿಳಿದುಬಂದಿದೆ. ವಿವಾಹ ಸಿದ್ಧತೆಗಳ ನೆಪದಲ್ಲಿ ವರ ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ.

ಕುಟುಂಬಕ್ಕೆ ತಿಳಿಯದಂತೆ, ಅಳಿಯ ಮತ್ತು ಅತ್ತೆಯ ನಡುವೆ ಸಂಬಂಧ ಬೆಳೆಯುತ್ತ ಹೋಯಿತು. ವರನು ತನ್ನ ಭಾವಿ ಅತ್ತೆಗೆ ಮೊಬೈಲ್ ಫೋನ್ ಅನ್ನು ಉಡುಗೊರೆಯಾಗಿ ನೀಡಿದ್ದ. ಅದನ್ನು ಸಾಮಾನ್ಯ ವಿಚಾರ ಎಂದು ಯಾರೂ ಹೆಚ್ಚು ಗಮನಕೊಡಲಿಲ್ಲಿ.
ಏಪ್ರಿಲ್ 16 ರಂದು ಮದುವೆ ನಿಗದಿಯಾಗಿತ್ತು ಮತ್ತು ಆಮಂತ್ರಣಗಳನ್ನು ಹಂಚಲಾಗಿತ್ತು. ಆದಾಗ್ಯೂ, ವರ ಮತ್ತು ಅತ್ತೆ ಶಾಪಿಂಗ್ ನೆಪದಲ್ಲಿ ಒಟ್ಟಿಗೆ ಮನೆಯಿಂದ ಹೊರಟರು ಮತ್ತು ಅಂದಿನಿಂದ ಅವರ ಎಲ್ಲಿದ್ದಾರೆಂಬ ಸುದ್ದಿ ಇನ್ನೂ ಬಂದಿಲ್ಲ.
ಹುಡುಗಿಯ ತಂದೆಗೆ ಅನುಮಾನ ಬಂದು ಅವರು ಬೀರು ಪರಿಶೀಲಿಸಿದಾಗ ಮದುವೆಯ ಆಭರಣಗಳು ಮತ್ತು ನಗದು ನಾಪತ್ತೆಯಾಗಿರುವುದು ಕಂಡುಬಂದಿದೆ, ಇದು ಅವರ ಅನುಮಾನವನ್ನು ದೃಢಪಡಿಸಲು ಕಾರಣವಾಯಿತು. ಪೊಲೀಸರು ಈಗ ಅವರಿಬ್ಬರನ್ನು ಹುಡುಕುತ್ತಿದ್ದಾರೆ ಮತ್ತು ಅವರ ಫೋನ್ ಸ್ಥಳಗಳನ್ನು ಪತ್ತೆಹಚ್ಚುತ್ತಿದ್ದಾರೆ.

ಪ್ರಮುಖ ಸುದ್ದಿ :-   ಇಂಗ್ಲೆಂಡ್ ಟೆಸ್ಟ್ ಸರಣಿಗೆ ಭಾರತದ ಕ್ರಿಕೆಟ್‌ ತಂಡ ಪ್ರಕಟ ; ಶುಭಮನ್ ಗಿಲ್ ನೂತನ ನಾಯಕ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement