26/11 ಮುಂಬೈ ದಾಳಿ ಸಂಚುಕೋರ ತಹವ್ವೂರ್ ರಾಣಾನನ್ನು 18 ದಿನಗಳ ಎನ್‌ಐಎ ಕಸ್ಟಡಿಗೆ ಕಳುಹಿಸಿದ ನ್ಯಾಯಾಲಯ

ನವದೆಹಲಿ: ಗುರುವಾರ ಭಾರತಕ್ಕೆ ಹಸ್ತಾಂತರಿಸಲ್ಪಟ್ಟ 26/11 ಮುಂಬೈ ದಾಳಿಯ ಪ್ರಮುಖ ಆರೋಪಿ ತಹವ್ವೂರ್ ರಾಣಾನನ್ನು ನ್ಯಾಯಾಲಯವು 18 ದಿನಗಳ ರಾಷ್ಟ್ರೀಯ ತನಿಖಾ ದಳ(NIA)ದ ಕಸ್ಟಡಿಗೆ ಕಳುಹಿಸಿದೆ.
ಎನ್‌ಐಎ ಗುರುವಾರ ಸಂಜೆ ರಾಣಾನನ್ನು ಔಪಚಾರಿಕವಾಗಿ ಬಂಧಿಸಿದ ನಂತರ ವಿಶೇಷ ಎನ್‌ಐಎ ನ್ಯಾಯಾಲಯದ ಮುಂದೆ ಹಾಜರುಪಡಿಸಿತು ಹಾಗೂ 20 ದಿನಗಳ ಕಸ್ಟಡಿಗೆ ಕೋರಿತು, ನಂತರ ಆದೇಶವನ್ನು ಕಾಯ್ದಿರಿಸಲಾಯಿತು. ವಾದಗಳನ್ನು ಆಲಿಸಿದ ಎನ್‌ಐಎ ನ್ಯಾಯಾಧೀಶ ಚಂದರಜೀತ್ ಸಿಂಗ್ ಅವರು ಭಯೋತ್ಪಾದನಾ ನಿಗ್ರಹ ತನಿಖಾ ಸಂಸ್ಥೆಗೆ 18 ದಿನಗಳ ಕಸ್ಟಡಿಗೆ ಆದೇಶಿಸಿದರು.
ಪ್ರಕರಣವನ್ನು ಮುನ್ನಡೆಸಲು ಗೃಹ ಸಚಿವಾಲಯ(MHA)ದಿಂದ ಎನ್‌ಐಎ ವಕೀಲರಾಗಿ ನೇಮಿಸಲ್ಪಟ್ಟ ಹಿರಿಯ ವಕೀಲ ದಯಾನ್ ಕೃಷ್ಣನ್ ಮತ್ತು ವಿಶೇಷ ಸಾರ್ವಜನಿಕ ಅಭಿಯೋಜಕ ನರೇಂದರ ಮಾನ್ ಎನ್‌ಐಎ ಅನ್ನು ಪ್ರತಿನಿಧಿಸಿದರು. ನ್ಯಾಯಾಲಯವು ರಾಣಾನಿಗೆ ಕಾನೂನು ನೆರವು ನೀಡುವ ಸಲಹೆಗಾರರನ್ನು ಸಹ ಒದಗಿಸಿತು. ಇದಕ್ಕೂ ಮೊದಲು, ಹೆಚ್ಚಿನ ಭದ್ರತೆಯ ನಡುವೆ ರಾಣಾನನ್ನು ನ್ಯಾಯಾಲಯಕ್ಕೆ ಕರೆದೊಯ್ಯಲಾಯಿತು.

ರಾಣಾ ಕಳುಹಿಸಿದ ಇಮೇಲ್‌ಗಳು ಸೇರಿದಂತೆ ನ್ಯಾಯಾಲಯದಲ್ಲಿ ಎನ್‌ಐಎ (NIA) ಬಲವಾದ ಪುರಾವೆಗಳನ್ನು ಸಲ್ಲಿಸಿತು. 2008 ರಲ್ಲಿ ಮುಂಬೈ ಭಯೋತ್ಪಾದಕ ದಾಳಿಯ ಹಿಂದಿನ ದುಷ್ಕೃತ್ಯದ ಸಂಚನ್ನು ಬಯಲು ಮಾಡಲು ಕಸ್ಟಡಿ ವಿಚಾರಣೆ ಅಗತ್ಯ ಎಂದು ಸಂಸ್ಥೆ ಒತ್ತಿ ಹೇಳಿತು.
ಮುಂಬೈ ಭಯೋತ್ಪಾದಕ ದಾಳಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಅಮೆರಿಕದ ಜೈಲಿನಲ್ಲಿ ಬಂಧಿಸಲ್ಪಟ್ಟಿರುವ ಆರೋಪಿ ನಂಬರ್ 1, ಭಾರತಕ್ಕೆ ಭೇಟಿ ನೀಡುವ ಮೊದಲು ರಾಣಾ ಜೊತೆ ಭಯೋತ್ಪಾದಕ ಸಂಚಿನ ಬಗ್ಗೆ ಚರ್ಚಿಸಿದ್ದ ಎಂದು ಎನ್‌ಐಎ ವಾದಿಸಿತು. ಆರೋಪಿ ನಂಬರ್ 1 ಹೆಡ್ಲಿ ತನ್ನ ವಸ್ತುಗಳು ಮತ್ತು ಆಸ್ತಿಗಳ ಬಗ್ಗೆ ವಿವರಗಳನ್ನು ಹಂಚಿಕೊಂಡಿದ್ದ ರಾಣಾಗೆ ಇಮೇಲ್ ಕಳುಹಿಸಿದ್ದ. ಇಲ್ಯಾಸ್ ಕಾಶ್ಮೀರಿ ಮತ್ತು ಅಬ್ದುರ್ ರೆಹಮಾನ್ ಪಿತೂರಿಯಲ್ಲಿ ಭಾಗಿಯಾಗಿರುವ ಬಗ್ಗೆಯೂ ಆತ ರಾಣಾಗೆ ಮಾಹಿತಿ ನೀಡಿದ್ದ.

ಪ್ರಮುಖ ಸುದ್ದಿ :-   ಸಿಇಟಿ ಫಲಿತಾಂಶ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ ರಾಜ್ಯಕ್ಕೆ ಪ್ರಥಮ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement