ಬೆಂಗಳೂರು : ಈ ವಾರದ ಆರಂಭದಲ್ಲಿ ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಕೊನೆಗೂ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಪೊಲೀಸರು 700 ಸಿಸಿಟಿವಿಗಳ ದೃಶ್ಯಾವಳಿಗಳನ್ನು ಸ್ಕ್ಯಾನ್ ಮಾಡಿದ ನಂತರ ಅಂತಿಮವಾಗಿ ಕೇರಳದ ದೂರದ ಹಳ್ಳಿಯಲ್ಲಿ ಆತನನ್ನು ಭಾನುವಾರ ಕೇರಳದ ನಡುವನ್ನೂರ್ ಪಟ್ಟಣದ ಬಳಿ ಸೆರೆಹಿಡಿದಿದ್ದಾರೆ.
ಪೊಲೀಸರು 10 ದಿನಗಳ ಕಾಲ ನಡೆಸಿದ ಶೋಧ ಕಾರ್ಯಾಚರಣೆಯ ನಂತರ ಈತನನ್ನು ಬಂಧಿಸಿದ್ದಾರೆ.
ಬೆಂಗಳೂರಿನ ಬಿಟಿಎಂ ಲೇಔಟ್ನ ಓಣಿಯಲ್ಲಿ ಇಬ್ಬರು ಮಹಿಳೆಯರನ್ನು ವ್ಯಕ್ತಿಯೊಬ್ಬ ಹಿಂಬಾಲಿಸುತ್ತಿರುವುದು ಸಿಸಿಟಿವಿ ದೃಶ್ಯಾವಳಿಯಲ್ಲಿ ಕಂಡುಬಂದಿತ್ತು. ಮಹಿಳೆಯರು ಆ ವ್ಯಕ್ತಿಯಿಂದ ತಪ್ಪಿಸಲು ಪ್ರಯತ್ನಿಸುತ್ತಿರುವಾಗ, ಆತ ಇದ್ದಕ್ಕಿದ್ದಂತೆ ಓರ್ವ ಮಹಿಳೆಯನ್ನು ಹಿಡದು ತಬ್ಬಿಕೊಳ್ಳಲು ಯತ್ನಿಸಿದ್ದ ಮತ್ತು ನಂತರ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ.
ಬಂಧಿತ ಆರೋಪಿಯನ್ನು ಸಂತೋಷ (26) ಎಂದು ಗುರುತಿಸಲಾಗಿದ್ದು, ಬೆಂಗಳೂರಿನ ಜಾಗ್ವಾರ್ ಶೋರೂಂನಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತನನ್ನು ಹುಡುಕಲು ಪ್ರಾರಂಭಿಸಿದ ನಂತರ ಬೆಂಗಳೂರಿನಿಂದ ತಮಿಳುನಾಡಿನ ಹೊಸೂರಿಗೆ ಪರಾರಿಯಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಂತರ ಆತ ಅಲ್ಲಿಂದ ಸೇಲಂಗೆ ಮತ್ತು ನಂತರ ಕೇರಳದ ಕೋಝಿಕ್ಕೋಡ್ಗೆ ಪರಾರಿಯಾಗಿದ್ದ. ಕೇರಳದ ದೂರದ ಹಳ್ಳಿಯಲ್ಲಿ ಪೊಲೀಸರು ಆತನನ್ನು ಹಿಡಿಯುವಲ್ಲಿ ಯಶಸ್ವಿಯಾದರು. ಸುಮಾರು ಒಂದು ವಾರ ಕಾಲ ನಡೆದ ಮತ್ತು ಮೂರು ರಾಜ್ಯಗಳನ್ನು ಒಳಗೊಂಡ ಶೋಧ ಕಾರ್ಯಾಚರಣೆ ಕೊನೆಗೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪೊಲೀಸರು ಹಲ್ಲೆ, ಲೈಂಗಿಕ ಕಿರುಕುಳ ಮತ್ತು ಹಿಂಬಾಲಿಸುವುದು ಸೇರಿದಂತೆ ಹಲವು ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರು ತೊಂದರೆಗೊಳಗಾದ ಮಹಿಳೆ ಮತ್ತು ಆಕೆಯ ಸ್ನೇಹಿತನನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಆದರೆ ಅವರು ಗೌಪ್ಯತೆ ಕಾಪಾಡಲು ವಿನಂತಿಸಿದ್ದರಿಂದ ಬಹಿರಂಗಪಡಿಸಿಲ್ಲ ಎನ್ನಲಾಗಿದೆ.
ಬೆಂಗಳೂರಿನ ಬಿಟಿಎಂ ಲೇಔಟ್ ಪ್ರದೇಶದಲ್ಲಿ ಏಪ್ರಿಲ್ 3 ರಂದು ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಖಾಲಿ ಬೀದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಇಬ್ಬರು ಮಹಿಳೆಯರ ಕಡೆಗೆ ಓಡಿಬಂದ ವ್ಯಕ್ತಿಯೊಬ್ಬ ದೃಶ್ಯಗಳು ತೋರಿಸುತ್ತವೆ, ಮಹಿಳೆಯೊಬ್ಬಳನ್ನು ಹಿಂದಿನಿಂದ ಹಿಡಿದು ಅನುಚಿತವಾಗಿ ಸ್ಪರ್ಶಿಸುತ್ತಿರುವುದು ಹಾಗೂ ನಂತರ ಆತ ಸ್ಥಳದಿಂದ ಪರಾರಿಯಾಗುವುದು ಅದರಲ್ಲಿ ಕಂಡುಬಂದಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ