50 ಕೋಟಿ ರೂ. ನಾಯಿ ಖರೀದಿಸಿದ್ದೇನೆ ಎಂದವನ ಮನೆ ಮೇಲೆ ಇ.ಡಿ. ದಾಳಿ ; ಆದ್ರೆ ನಿಜ ಗೊತ್ತಾಗಿ ಶಾಕ್‌…!

ಬೆಂಗಳೂರು : 50 ಕೋಟಿ ರೂ. ಮೌಲ್ಯದ ಅಪರೂಪದ “ತೋಳ ನಾಯಿ”ಯನ್ನು ಆಮದು ಮಾಡಿಕೊಂಡಿರುವುದಾಗಿ ಹೇಳಿಕೊಂಡ ಬೆಂಗಳೂರಿನ ವ್ಯಕ್ತಿಯೊಬ್ಬರ ನಿವಾಸದಲ್ಲಿ ಜಾರಿ ನಿರ್ದೇಶನಾಲಯ (ED) ಗುರುವಾರ ಶೋಧ ನಡೆಸಿದೆ.
ಸಾಮಾಜಿಕ ಮಾಧ್ಯಮದಲ್ಲಿ ಚರ್ಚೆಯ ವಿಷಯವಾದ ಆ ವ್ಯಕ್ತಿಯ ಹೇಳಿಕೆಯ ನಂತರ, ಇ.ಡಿ. ಅಧಿಕಾರಿಗಳು ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆಯ (FEMA) ಸಂಭಾವ್ಯ ಉಲ್ಲಂಘನೆಗಳ ಬಗ್ಗೆ ತನಿಖೆ ಮಾಡಲು ಅವರ ಮನೆಗೆ ಭೇಟಿ ನೀಡಿ ಶೋಧ ನಡೆಸಿದ್ದಾರೆ. ಈ ಸಂದರ್ಭದಲ್ಲಿ ನಾಯಿಯ ಬೆಲೆ 50 ಕೋಟಿ ರೂ. ಎಂದು ಹೇಳಿರುವುದು ಬರೀ ಬೊಗಳೆ ಬಿಟ್ಟಿದ್ದ ಎಂದು ತಿಳಿದುಬಂದಿದೆ. ಆದರೂ, ಅನುಮಾನಗಳ ಹಿನ್ನೆಲೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಸತೀಶ ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.
ಆ ವ್ಯಕ್ತಿಗೆ ಅಷ್ಟು ದುಬಾರಿ ನಾಯಿಯನ್ನು ಖರೀದಿಸಲು ಯಾವುದೇ ಮಾರ್ಗವಿಲ್ಲ ಎಂದು ಅಧಿಕಾರಿಗಳು ಕಂಡುಕೊಂಡರು ಮತ್ತು ಸಾಮಾಜಿಕ ಮಾಧ್ಯಮದ ಗಮನ ಸೆಳೆಯಲು ಈ ವರದಿಗಳು ಕಟ್ಟುಕಥೆ ಎಂದು ತೀರ್ಮಾನಿಸಿದರು ಎಂದು ಹೇಳಲಾಗಿದೆ.

ಹಲವಾರು ವರದಿಗಳ ಪ್ರಕಾರ, ಆ ವ್ಯಕ್ತಿ “ವಿಶ್ವದ ಅತ್ಯಂತ ದುಬಾರಿ” ನಾಯಿಯನ್ನು ಆಮದು ಮಾಡಿಕೊಂಡಿದ್ದಾಗಿ ಹೇಳಿಕೊಂಡಿದ್ದ – ಇದು ಕಕೇಶಿಯನ್ ಶೆಫರ್ಡ್ ಮತ್ತು ತೋಳದ ಮಿಶ್ರತಳಿ ಎಂದು ಹೇಳಿದ್ದ. ಈ ಹೇಳಿಕೆ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ಗಮನ ಸೆಳೆಯಿತು. ಆದರೆ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಈತನ ಹೇಳಿಕೆಯನ್ನು ನಂಬಿರಲಿಲ್ಲ. ಆದರೂ, ಈತನ ವೀಡಿಯೊಗಳು ವೈರಲ್ ಆಗಿದ್ದವು. ನಂತರ ಇ.ಡಿ. ಈತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿತ್ತು. ಆ ಹಿನ್ನೆಲೆಯಲ್ಲಿ ಏ. 17ರಂದು ಬೆಳಗ್ಗೆ ಸತೀಶ್ ಅವರ ನಿವಾಸದ ಮೇಲೆ ದಾಳಿ ನಡೆಸಲಾಗಿದೆ.
ಈ ಮಾಹಿತಿಯ ಮೇರೆಗೆ ಕಾರ್ಯನಿರ್ವಹಿಸಿದ ಜಾರಿ ನಿರ್ದೇಶನಾಲಯವು, ಹೇಳಿಕೆಗಳ ಬಗ್ಗೆ ಪರಿಶೀಲಿಸಲು ಅವರ ಮನೆಗೆ ಭೇಟಿ ನೀಡಿತು, ಆದರೆ ಅವು ಸುಳ್ಳು ಎಂದು ತಿಳಿದುಬಂದಿದೆ. ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲ್ಪಟ್ಟ ಆ ನಾಯಿ ವಾಸ್ತವವಾಗಿ ಅದು ಪಕ್ಕದ ಮನೆಯವನದಾಗಿತ್ತು. ಅದರ ಬೆಲೆ “ಒಂದು ಲಕ್ಷ (ರೂಪಾಯಿ) ಗಿಂತ ಕಡಿಮೆ” ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕಸದ ರಾಶಿಯ ಮಧ್ಯೆ ಕ್ಯಾನ್ಸರ್ ಪೀಡಿತ ವೃದ್ಧ ಮಹಿಳೆ ಪತ್ತೆ : ಮೊಮ್ಮಗ ನನ್ನನ್ನು ಇಲ್ಲಿ ಬಿಟ್ಟು ಹೋದ ಎಂದ ವೃದ್ಧೆ...!

4 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement