ಮೀರತ್ : ಉತ್ತರ ಪ್ರದೇಶದ ಮೀರತ್ ಜಿಲ್ಲೆಯ ಹಳ್ಳಿಯೊಂದರಲ್ಲಿ ಆಘಾತಕಾರಿ ಹಾಗೂ ನಂಬಲಸಾಧ್ಯವಾದ ಘಟನೆಯೊಂದರಲ್ಲಿ ಯಾರೂ ಊಹಿಸದ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ಆಘಾತಕಾರಿ ಘಟನೆಯಲ್ಲಿ ವಿಷಕಾರಿ ಹಾವೊಂದು ಹತ್ತು ಬಾರಿ ಕಚ್ಚಿ 25 ವರ್ಷದ ವ್ಯಕ್ತಿಯೊಬ್ಬನನ್ನು ಸಾಯಿಸಿದೆ ಎಂದು ನಂಬಲಾಗಿತ್ತು. ಆದರೆ ವಿಷಕಾರಿ ಹಾವು ಕಚ್ಚಿದ್ದು, ಹೌದು ಆದರೆ ದಿಗ್ಭ್ರಮೆಗೊಳಿಸಿದ ಸಂಗತಿಯೆಂದರೆ ಆ ವ್ಯಕ್ತಿಯನ್ನು ಮೊದಲೇ ಸಾಯಿಸಲಾಗಿತ್ತು. ಹಾಗೂ ನಂತರ ಹಾಸಿಗೆಯ ಕೆಳಗೆ ವಿಷಕಾರಿ ಸರ್ಪವನ್ನು ಬಿಟ್ಟು ಅದು ಶವಕ್ಕೆ ಕಚ್ಚುವಂತೆ ಮಾಡಲಾಗಿತ್ತು ಎಂಬ ಸಂಗತಿ ಪೊಲೀಸರ ತನಿಖೆಯಿಂದ ಬಯಲಾಗಿದೆ…!
ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಕೆಲಸ ಮುಗಿಸಿ ಹಿಂತಿರುಗಿದ ನಂತರ ರಾತ್ರಿ ಮುಗಿಸಿ ಮಹಡಿಯ ಮೇಲೆ ಮಲಗಿದ್ದಾಗ ಈ ಘಟನೆ ನಡೆದಿದೆ. ಬೆಳಿಗ್ಗೆ ನೋಡಿದಾಗ ಹಾವು ಹಾಸಿಗೆಯ ಮೇಲೆ ವ್ಯಕ್ತಿಯ ಶವಕ್ಕೆ ಅಂಟಿಕೊಂಡೇ ಇತ್ತು. ಹೀಗಾಗಿ ಹಾಸಿಗೆ ಮೇಲೆ ಮಲಗಿದಾಗ ಹಾಸಿಗೆಯ ಕೆಳಗೆ ಇದ್ದ ಹಾವು ಅದರ ಮೇಲೆ ಭಾರ ಬಿದ್ದ ಕೋಪಗೊಂಡ ಹಾವು, ರಾತ್ರಿಯಿಡೀ ಅವರಿಗೆ ಕಚ್ಚಿದೆ ಎಂದು ಭಾವಿಸಲಾಗಿತ್ತು. ಹಾವು ಅವರಿಗೆ ಹಾವು ಕಚ್ಚಿದ್ದ ಗುರುತುಗಳಿದ್ದವು. ರಾತ್ರಿಯಿಡೀ ಹಾವು ಅವರ ಮೃತದೇಹಕ್ಕೆ ಅಂಟಿಕೊಂಡೇ ಇತ್ತು. ಬೆಳಿಗ್ಗೆ ಜನರಿಗೆ ಈ ವಿಷಯ ತಿಳಿದಾಗ, ಹಾವಾಡಿಗನನ್ನು ಕರೆಸಿ ಹಾವನ್ನು ಹಿಡಿಯಲಾಯಿತು. ಮಾಹಿತಿ ಪಡೆದ ನಂತರ ಸ್ಥಳಕ್ಕೆ ಧಾವಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು. ಮರಣೋತ್ತರ ಪರೀಕ್ಷೆಯಲ್ಲಿ ಹಾವು ಆತನಿಗೆ ಹತ್ತು ಕಡೆ ಕಚ್ಚಿದ್ದು ಗೊತ್ತಾಯಿತು. ಹೀಗಾಗಿ ಹಾವು ಕಡಿತದಿಂದ ಅವರು ಸಾವಿಗೀಡಾಗಿದ್ದಾರೆ ಎಂದು ಭಾವಿಸಲಾಗಿತ್ತು. ಆದರೆ ಮರಣೋತ್ತರ ಪರೀಕ್ಷೆಯಲ್ಲಿ ಮತ್ತೊಂದು ಟ್ವಿಸ್ಟ್ ಸಹ ಇತ್ತು. ಅದೇನೆಂದರೆ ಮೃತ ವ್ಯಕ್ತಿಯ ಕುತ್ತಿಗೆ ಹಿಸುಕಲಾಗಿತ್ತು ಎಂಬ ಅಂಶವೂ ಬೆಳಕಿಗೆ ಬಂದಿದೆ. ಇದು ಪೊಲೀಸರು ಅನುಮಾನದ ಮೇಲೆ ತನಿಖೆ ನಡೆಸಲು ಕಾರಣವಾಯಿತು. ತನಿಖೆ ವೇಳೆ ಪೊಲೀಸರೇ ಬೆಚ್ಚಿಬೀಳುವ ಭೀಕರ ಹತ್ಯೆಯ ಸಂಗತಿ ಬಯಲಾಗಿದೆ..!
ಆಗಿದ್ದೇನು..?
ಮೀರತ್‌ನ ಬಹ್ಸುಮಾ ಪೊಲೀಸ್ ಠಾಣೆ ಪ್ರದೇಶದ ಅಕ್ಬರಪುರ ಸಾದತ್ ಗ್ರಾಮದ ನಿವಾಸಿ ಅಮಿತ್ ಅಲಿಯಾಸ್ ಮಿಕ್ಕಿ ಕಶ್ಯಪ (25) ಕಾರ್ಮಿಕ. ಯುವಕ ರಾತ್ರಿ 10 ಗಂಟೆಗೆ ಕೆಲಸದಿಂದ ಹಿಂತಿರುಗಿದ್ದರು. ಶನಿವಾರ ರಾತ್ರಿ ಹತ್ತು ಗಂಟೆಗೆ ಕೆಲಸದಿಂದ ಹಿಂತಿರುಗಿದ್ದರಿಂದ ತುಂಬಾ ದಣಿದಿದ್ದ ಅವರು ಊಟ ಮಾಡಿದ ನಂತರ ಹೋಗಿ ಮಲಗಿದ್ದಾರೆ.ಆದರೆ ಬೆಳಿಗ್ಗೆ ಅವರು ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಪಕ್ಕದಲ್ಲಿ ಅಂಟಿಕೊಂಡೇ ಹಾವು ಮಲಗಿತ್ತು ಹಾಗೂ ದೇಹದ ಮೇಲೆ ಅದು ಕಚ್ಚಿದ ಗುರುತುಗಳು ಕಂಡುಬಂದಿದ್ದವು. ಅಮಿತ್ ದೇಹದ ಮೇಲೆ ಹತ್ತು ಕಡೆ ಹಾವು ಕಚ್ಚಿದ ಗುರುತುಗಳು ಕಂಡುಬಂದಿವೆ.
ಬೆಳಿಗ್ಗೆ ಬೇಗ ಏಳುತ್ತಿದ್ದ ಅವರು ಇನ್ನೂ ಎದ್ದು ಬಾರದೇ ಇದ್ದಾಗ ಕುಟುಂಬದ ಸದಸ್ಯರು 5:30 ರ ಸುಮಾರಿಗೆ ಅವರನ್ನು ಎಬ್ಬಿಸಲು ಬಂದಾಗ, ಅವರ ಹಾಸಿಗೆಯ ಮೇಲೆ ಅವರಿಗೆ ಅಂಟಿಕೊಂಡೇ ಹಾವು ಇರುವುದನ್ನು ನೋಡಿ ದಿಗ್ಭ್ರಮೆಗೊಂಡರು. ಕುಟುಂಬ ಸದಸ್ಯರ ಪ್ರಕಾರ, ಅಮಿತ್ ಹಾಸಿಗೆಯ ಮೇಲೆ ಪ್ರಜ್ಞಾಹೀನನಾಗಿ ಮಲಗಿದ್ದರು. ಹಾವು ಅವರ ಮೈ ಮೇಲಿತ್ತು, ಸಾವಿನ ನಂತರವೂ ಅದು ಅವರನ್ನು ಕಚ್ಚಿತ್ತು. ಆ ಭಯಾನಕ ದೃಶ್ಯವು ಕುಟುಂಬವನ್ನು ಭಯಭೀತರಾಗಿ ಕಿರುಚುವಂತೆ ಮಾಡಿತು. ಅವರು ಏನೇ ಮಾಡಿದರೂ ಹಾವು ಮಾತ್ರ ಅವರನ್ನು ಬಿಟ್ಟು ಕದಲಿರಲಿಲ್ಲ. ಹೀಗಾಗಿ ಹಾವಾಡಿಗ ಹಾಗೂ ಪೊಲೀಸರಿಗೆ ತಕ್ಷಣವೇ ಮಾಹಿತಿ ನೀಡಲಾಯಿತು. ಮಹಮೂದಪುರ ಸಿಖೇಡಾ ಗ್ರಾಮದ ಹಾವಾಡಿಗರೊಬ್ಬರು ಬಂದು ಬೆಳಿಗ್ಗೆ 7:30 ರ ಸುಮಾರಿಗೆ ಹಾವನ್ನು ಹಿಡಿಯುವಲ್ಲಿ ಯಶಸ್ವಿಯಾದರು.
ಇದಾದ ನಂತರ ಕುಟುಂಬವು ಅಮಿತ್ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ದಿತು. ಪರೀಕ್ಷೆಯ ನಂತರ, ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು.
ನಂತರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಯಿತು. ಅಲ್ಲಿ ಪೊಲೀಸರಿಗೆ ಅನುಮಾನಸ್ಪದ ಸಂಗತಿಗಳು ಬಯಲಾದವು.
ಶವಪರೀಕ್ಷೆಯ ವರದಿಯಲ್ಲಿ ಅವರಿಗೆ ಹತ್ತು ಕಡೆ ಹಾವು ಕಚ್ಚಿದೆ, ಅಮಿತ್ ಅವರು ಹಾವು ಕಚ್ಚುವ ಮೊದಲೇ ಉಸಿರುಗಟ್ಟಿ ಸಾವಿಗೀಡಾಗಿದ್ದಾರೆ ಎಂಬುದು ತಿಳಿದುಬಂತು. ಇದು ಪೊಲೀಸ್ ತನಿಖೆಗೆ ಕಾರಣವಾಯಿತು, ಇದು ಅಂತಿಮವಾಗಿ ಅಮಿತ್ ಅವರ ಪತ್ನಿ ರವಿತಾ ಮತ್ತು ಆಕೆಯ ಪ್ರಿಯಕರ ಅಮರದೀಪ ಬಂಧನಕ್ಕೆ ಕಾರಣವಾಯಿತು. ವಿಚಾರಣೆ ವೇಳೆ ಅವರು ಕೊಲೆಯ ವಿಷಯವನ್ನು ಬಾಯ್ಬಿಟ್ಟಿದ್ದಾರೆ ಎಂದು ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ವಿಪಿನ್ ಟಾಡಾ ಹೇಳಿದ್ದಾರೆ.
ಈ ಪ್ರಕರಣದ ಬೆನ್ನುಬಿದ್ದ ಪೊಲೀಸರು, ಇದರ ಹಿಂದಿನ ಸಂಗತಿಗಳನ್ನು ಭೇದಿಸುವಲ್ಲಿ ಯಶಸ್ವಿಯಾದರು. ಅಮಿತ್ ಪತ್ನಿಯ ಪ್ರಿಯಕರ ಅಮರದೀಪ ₹1,000 ಗೆ ಹಾವು ಖರೀದಿಸಿದ್ದಾರೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಗ್ರಾಮೀಣ) ರಾಕೇಶಕುಮಾರ ಮಿಶ್ರಾ ಹೇಳಿದ್ದಾರೆ. “ಕೊಲೆ ನಡೆದ ರಾತ್ರಿ, ಇಬ್ಬರೂ ಅಮಿತ್ ನಿದ್ರಿಸುವವರೆಗೂ ಕಾದು ನಂತರ ಅವರನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ಪೊಲೀಸರನ್ನು ದಿಕ್ಕು ತಪ್ಪಿಸಲು ಮತ್ತು ಅವರಿಗೆ ಯಾವುದೇ ಅನುಮಾನ ಬಾರದಂತೆ ಮಾಡಲು, ಅವರು ವಿಷಕಾರಿ ಹಾವನ್ನು ಅಮಿತ್ ದೇಹದ ಕೆಳಗೆ ಇಟ್ಟರು, ಕೋಪಗೊಂಡ ಹಾವು ಹಲವು ಬಾರಿ ಕಚ್ಚಿತು” ಎಂದು ಮಿಶ್ರಾ ಹೇಳಿದರು.
ಪೊಲೀಸ್ ತನಿಖೆಯಲ್ಲಿ ರವಿತಾ ಮತ್ತು ಅಮರದೀಪ ಒಂದು ವರ್ಷದಿಂದ ಅನೈತಿಕ ಸಂಬಂಧದಲ್ಲಿದ್ದರು ಎಂದು ತಿಳಿದುಬಂದಿದೆ. ಅಮಿತ್ ಜೊತೆ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ ಅಮರದೀಪ ಆಗಾಗ್ಗೆ ಅವರ ಮನೆಗೆ ಭೇಟಿ ನೀಡುತ್ತಿದ್ದ. ಅಮಿತ್ ಅವರಿಗೆ ಇತ್ತೀಚೆಗೆ ತಮ್ಮ ಪತ್ನಿಯ ವಿವಾಹೇತರ ಸಂಬಂಧದ ಬಗ್ಗೆ ಗೊತ್ತಾಗಿತ್ತು. ಹೀಗಾಗಿ ಅದನ್ನು ವಿರೋಧಿಸಲು ಪ್ರಾರಂಭಿಸಿದ್ದ. ಇದು ಅಮಿತ್ ಅವರ ಕೊಲೆಗೆ ಸಂಚು ರೂಪಿಸಲು ಕಾರಣವಾಯಿತು. ಸಿಕ್ಕಿಬೀಳದಂತೆ ನೋಡಿಕೊಳ್ಳಲು, ಅವರು ಗೂಗಲ್ ಮತ್ತು ಯೂಟ್ಯೂಬ್‌ನಲ್ಲಿ ಕೊಲೆ ತಂತ್ರಗಳನ್ನು ಸಹ ಅವರು ಅವರು ವೀಕ್ಷಿಸಿದ್ದಾರೆ. ನಂತರ ಅವರು ವಿಷಪೂರಿತ ಹಾವನ್ನು ತಾವು ಕೊಲೆ ಹಾವು ಕಚ್ಚಿ ಸಂಭವಿಸಿದೆ ಎಂದು ತೋರಿಸಲು ಒಂದು ಸಾಧನವಾಗಿ ಬಳಸಲಾಗಿದೆ ಎಂದು ಎಂದು ಪೊಲೀಸರು ಹೇಳಿದ್ದಾರೆ.
ರವಿತಾ ಮತ್ತು ಅಮರದೀಪ್ ಇಬ್ಬರನ್ನೂ ಬಂಧಿಸಲಾಗಿದೆ. ತನಿಖೆ ಮುಂದುವರೆದಿದ್ದು, ಪ್ರಕರಣವನ್ನು ಬಲಪಡಿಸಲು ಹೆಚ್ಚುವರಿ ವಿಧಿವಿಜ್ಞಾನ ವಿಶ್ಲೇಷಣೆ ನಡೆಯುತ್ತಿದೆ ಎಂದು ಮೀರತ್ ಪೊಲೀಸರು ತಿಳಿಸಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ