ವೀಡಿಯೊ…| 28 ಕಿಮೀ ರಾಮಸೇತು ಸಮುದ್ರ ಈಜಿದ ಹುಬ್ಬಳ್ಳಿ ಪೊಲೀಸ್‌ ಅಧಿಕಾರಿ…!

ಹುಬ್ಬಳ್ಳಿ : ಶ್ರೀಲಂಕಾದಿಂದ ಭಾರತದ ಧನುಷ್ ಕೋಡಿಯ ವರೆಗೆ ರಾಮ ಸೇತು ಸಮುದ್ರ ಮಾರ್ಗದಲ್ಲಿ 28 ಕಿ.ಮೀ.ಈಜುವ ಮೂಲಕ ಹುಬ್ಬಳ್ಳಿಯ ಹುಬ್ಬಳ್ಳಿಯ ಪೊಲೀಸ್ ಅಧಿಕಾರಿ ಇದ್ದ ಈಜು ತಂಡ ಜಾಗತಿಕವಾಗಿ ಗಮನ ಸೆಳೆದಿದೆ.
ಈ ಸಾಧನೆ ಮಾಡಿದವರಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಇನ್ಸ್‌ಪೆಕ್ಟರ್‌ ಮುರುಗೇಶ ಚನ್ನಣ್ಣವರ ಅವರು ಒಬ್ಬರು. ಇವರ ಜೊತೆ ಹುಬ್ಬಳ್ಳಿಯ ವೈದ್ಯಕೀಯ ವಿದ್ಯಾರ್ಥಿ ಅಮನ್ ಶಾನಭಾಗ, ಉತ್ತರ ಪ್ರದೇಶ ಮತ್ತು ಹರಿಯಾಣದ ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಪಶ್ಚಿಮ ಬೆಂಗಾಲ ಮತ್ತು ಹರಿಯಾಣದ ಎರಡು ಜನ ಅಂಗವಿಕಲ ಕ್ರೀಡಾಪಟುಗಳನ್ನು ಒಳಗೊಂಡ ವಿಶೇಷ ಈಜು ತಂಡವು ಹಿಂದೂ ಮಹಾಸಾಗರ ಮತ್ತು ಬಂಗಾಳಕೊಲ್ಲಿಯ ಸಮುದ್ರದಲ್ಲಿ ಪ್ರತಿಕೂಲ ಹವಾಮಾನದಲ್ಲಿಯೂ 28 ಕಿ.ಮೀದೂರವನ್ನು ಕೇವಲ 8 ಗಂಟೆ 30 ನಿಮಿಷಗಳಲ್ಲಿ ಈಜಿ ಸಾಧನೆ ಮಾಡಿದ್ದಾರೆ. ರಿಲೇ ಮಾದರಿಯಲ್ಲಿ ನಾಲ್ವರು 28 ಕಿ.ಮೀ. ಈಜಿ ಸಾಧನೆ ಮಾಡಿದ್ದಾರೆ.

ಪತ್ನಿ ಶ್ವೇತಾ ಚನ್ನಣ್ಣವರ ಅವರ ಜೊತೆ ಬೋಟಿನಲ್ಲಿ ಶ್ರೀಲಂಕಾ ಗೆ ಹೋಗಿದ್ದ ಮುರುಗೇಶ ಈ ಮೊದಲು ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸೈಕ್ಲಿಂಗ್ ಮೂಲಕ ಪ್ರಯಾಣ ಮಾಡಿ ‌ಸಾಧನೆ ಮಾಡಿದ್ದರು. ಈಗ ಶ್ರೀಲಂಕಾದಿಂದ ಭಾರತದ ಧನುಷ್‌ ಕೋಡಿವರೆಗೆ ಈಜಿ ಈಗ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ತಮ್ಮ ಪೊಲೀಸ್‌ ಕರ್ತವ್ಯದ ಮಧ್ಯೆಯೂ ಚನ್ನಣ್ಣವರ ಇಂತಹ ಸಾಹಸದಲ್ಲಿ ತೊಡಗಿಸಿಕೊಂಡು ಸಾಧನೆ ಮಾಡಿ ಕರ್ನಾಟಕ ಪೊಲೀಸ್‌ ಇಲಾಖೆಯ ಕೀರ್ತಿಯನ್ನೂ ಹೆಚ್ಚಿಸಿದ್ದಾರೆ.
ಮುಂಬರುವ ಜೂನ್‌ ತಿಂಗಳಲ್ಲಿ ವಿಶ್ವದ ಅತಿ ಕ್ಲಿಷ್ಟಕರವಾದ ಇಂಗ್ಲಿಷ್‌ ಕಾಲುವೆಯನ್ನು ಈಜಲು ಅಮನ್ ಶಾನಭಾಗ ಜೊತೆ ಸಿದ್ಧತೆ ಆರಂಭಿಸಿದ್ದಾರೆ.

ಪ್ರಮುಖ ಸುದ್ದಿ :-   ವಿಜಯಪುರದಲ್ಲಿ ಪಾಕ್ ಪರ ಪೋಸ್ಟ್ ಮಾಡಿದ ವಿದ್ಯಾರ್ಥಿನಿ ; ದೂರಿನ ನಂತರ ಕ್ಷಮೆಯಾಚನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement