ವೀಡಿಯೊ | ಸರ್ಕಾರಿ ಆಸ್ಪತ್ರೆಯಲ್ಲಿ ವೃದ್ಧ ವ್ಯಕ್ತಿ ಮೇಲೆ ಹಲ್ಲೆ ನಡೆಸಿ, ದರದರನೆ ಎಳೆದೊಯ್ದ ವೈದ್ಯ…!

ಛತ್ತರ್ಪುರ: ಒಂದು ಆಘಾತಕಾರಿ ವೀಡಿಯೊದಲ್ಲಿ ವೃದ್ಧನೊಬ್ಬನಿಗೆ ಹೊಡೆದ ನಂತರ ನಂತರ ಆತನನ್ನು ಸರ್ಕಾರಿ ಆಸ್ಪತ್ರೆಯಿಂದ ಹೊರಗೆ ದರದರನೆ ಎಳೆದೊಯ್ಯುತ್ತಿರುವುದು ಕಂಡುಬಂದಿದೆ. ಈ ಘಟನೆ ಮಧ್ಯಪ್ರದೇಶದ ಛತ್ತರ್ಪುರ ಜಿಲ್ಲೆಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.
ಕಳೆದ ಗುರುವಾರ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಛತ್ತರ್‌ಪುರದ ಜಿಲ್ಲಾ ಆಸ್ಪತ್ರೆಯಲ್ಲಿ 77 ವರ್ಷದ ವ್ಯಕ್ತಿಯನ್ನು ವೈದ್ಯರು ನಿರ್ದಯವಾಗಿ ಥಳಿಸಿದ್ದಾರೆ. ನಂತರ ದುರ್ಬಲ ವೃದ್ಧನನ್ನು ಆಸ್ಪತ್ರೆಯ ಆವರಣದಲ್ಲಿ ದರದರನೆ ಎಳೆದೊಯ್ದು ಆಸ್ಪತ್ರೆಯ ಪೊಲೀಸ್ ಹೊರಠಾಣೆಯಲ್ಲಿ ಬಂಧಿಸುವುದಾಗಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಲಾಗಿದೆ. ಏಪ್ರಿಲ್ 17 ರಂದು ನಡೆದ ಈ ಘಟನೆಯನ್ನು ಅಲ್ಲಿದ್ದವರು ಮೊಬೈಲ್ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ.

ಉಧವಲಾಲ ಜೋಶಿ ಎಂಬವರು ತಮ್ಮ ಅನಾರೋಗ್ಯ ಪೀಡಿತ ಪತ್ನಿಯನ್ನು ಹೊಟ್ಟೆಯ ರಕ್ತನಾಳದ ಕಾಯಿಲೆಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದರು. ವೈದ್ಯರು ಅವರಿಗೆ ಎದುರಾದ ವೇಳೆ ತಾನು ಇತರರಂತೆ ದೊಡ್ಡ ಸಾಲಿನಲ್ಲಿ ಕಾಯುತ್ತಿದ್ದೆ ಎಂದು ವೃದ್ಧರು ಹೇಳಿದ್ದಾರೆ.
ಜನಸಂದಣಿಯಿಂದಾಗಿ ಸಿಟ್ಟಿಗೆದ್ದ ವೈದ್ಯರು, ನೀವು ಸರದಿಯಲ್ಲಿ ಏಕೆ ಇದ್ದೀರಿ ಎಂದು ಜೋಶಿ ಅವರನ್ನು ಪ್ರಶ್ನಿಸಿದರು. ಅವರು ವಿವರಿಸಲು ಪ್ರಯತ್ನಿಸಿದಾಗ, ವೈದ್ಯರು ಅವರಿಗೆ ಕಪಾಳಮೋಕ್ಷ ಮಾಡಿದರು ಎಂದು ಆರೋಪಿಸಲಾಗಿದೆ. ನಂತರ, ವೈದ್ಯರು ಅವರನ್ನು ಆಸ್ಪತ್ರೆ ಆವರಣದೊಳಗಿನ ಪೊಲೀಸ್ ಹೊರಠಾಣೆ ಕಡೆಗೆ ಎಳೆದೊಯ್ದರು.

“ವೈದ್ಯರು ನನ್ನನ್ನು ಒದ್ದು ಚೌಕಿಗೆ ಎಳೆದೊಯ್ದರು. ಅವರು ನನ್ನನ್ನು ಹೊಡೆದು ಕನ್ನಡಕವನ್ನು ಒಡೆದರು. ಅವರು ನನ್ನ ಸ್ಲಿಪ್ ಅನ್ನು ಹರಿದುಹಾಕಿ ಕೊಲ್ಲುವುದಾಗಿ ಬೆದರಿಕೆ ಹಾಕಿದರು. ನನ್ನ ಹೆಂಡತಿಯ ಮೇಲೂ ಹಲ್ಲೆ ನಡೆಸಲಾಯಿತು” ಎಂದು ಜೋಶಿ ನಂತರ ಮಾಧ್ಯಮದವರಿಗೆ ತಿಳಿಸಿದರು.
ಸಾರ್ವಜನಿಕರ ಆಕ್ರೋಶ ಮತ್ತು ಘಟನೆಯ ಪುರಾವೆಗಳು ಕಂಡುಬಂದ ನಂತರ ವೈದ್ಯರು ಸ್ಥಳದಿಂದ ಪರಾರಿಯಾಗಿದ್ದಾರೆ. ಇದು ಆಸ್ಪತ್ರೆ ಅಧಿಕಾರಿಗಳು ಕ್ರಮ ಕೈಗೊಳ್ಳಲು ಕಾರಣವಾಯಿತು. ವೈದ್ಯರ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ ಎಂದು ವರದಿಯಾಗಿದೆ.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement