ನವದೆಹಲಿ: ಕೇಂದ್ರ ಲೋಕಸೇವಾ ಆಯೋಗ (UPSC)ವು ಯುಪಿಎಸ್‌ಸಿಯ ನಾಗರಿಕ ಸೇವಾ ಪರೀಕ್ಷೆ (CSE) ಅಂತಿಮ ಫಲಿತಾಂಶ 2024 ಅನ್ನು ಪ್ರಕಟಿಸಿದೆ.
ಇದರಲ್ಲಿ ಸೆಪ್ಟೆಂಬರ್ 2024 ರಲ್ಲಿ ಲಿಖಿತ ಪರೀಕ್ಷೆ ಮತ್ತು ಜನವರಿ ಮತ್ತು ಏಪ್ರಿಲ್ 2025 ರ ನಡುವೆ ನಡೆದ ವ್ಯಕ್ತಿತ್ವ ಪರೀಕ್ಷೆ/ಸಂದರ್ಶನಗಳು ಸೇರಿವೆ.
ಪ್ರಯಾಗರಾಜ್‌ನ ಶಕ್ತಿ ದುಬೆ 1ನೇ ಶ್ರೇಯಾಂಕ (ಮೊದಲ ಸ್ಥಾನ) ಗಳಿಸಿದ್ದಾರೆ. ಅವರು ತಮ್ಮ ಮೊದಲ ಪ್ರಯತ್ನದಲ್ಲೇ ವರ್ಷದ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಹರಿಯಾಣದ ಹರ್ಷಿತಾ ಗೋಯಲ್ 2 ನೇ ಶ್ರೇಯಾಂಕ ಪಡೆದರೆ, ಡೊಂಗ್ರೆ ಅರ್ಚಿತ ಪರಾಗ್ 3 ನೇ ಶ್ರೇಯಾಂಕ ಪಡೆದರು. ವಡೋದರಾದ ಹರ್ಷಿತಾ ಗೋಯಲ್ ವೃತ್ತಿಯಲ್ಲಿ ಚಾರ್ಟರ್ಡ್ ಅಕೌಂಟೆಂಟ್.
ಐಎಎಸ್ (IAS), ಐಪಿಎಸ್ (IPS), ಐಎಫ್‌ಎಸ್ (IFS) ಮತ್ತು ಕೇಂದ್ರ ಸೇವೆಗಳ ಗುಂಪು A ಮತ್ತು B ನಂತಹ ಸೇವೆಗಳಲ್ಲಿ ನೇಮಕಾತಿಗಾಗಿ 1009 ಅಭ್ಯರ್ಥಿಗಳನ್ನು ಯುಪಿಎಸ್‌ಸಿ (UPSC) ಶಿಫಾರಸು ಮಾಡಿದೆ.ಬಸಂದರ್ಶನಗಳಿಗೆ ಹಾಜರಾದ ಅಭ್ಯರ್ಥಿಗಳು ಈಗ ತಮ್ಮ ಅಂತಿಮ ಆಯ್ಕೆ ಸ್ಥಿತಿಯನ್ನು ಅಧಿಕೃತ ಯುಪಿಎಸ್‌ಸಿ ವೆಬ್‌ಸೈಟ್ upsc.gov.in ನಲ್ಲಿ ಪರಿಶೀಲಿಸಬಹುದು.
ಯುಪಿಎಸ್‌ಸಿ ಟಾಪರ್ 2024 ರ ಶ್ರೇಯಾಂಕ ಪಟ್ಟಿ: 25 ಟಾಪರ್‌ಗಳು ಯಾರು?
1 ಶಕ್ತಿ ದುಬೆ
2 ಹರ್ಷಿತಾ ಗೋಯಲ್
3 ಡೋಂಗ್ರೆ ಅರ್ಚಿತ್ ಪರಾಗ್
4 ಮಾರ್ಗಿ ಚಿರಾಗ್ ಶಾ
5 ಆಕಾಶ್ ಗರ್ಗ್
6 ಕೋಮಲ್ ಪುನಿಯಾ
7 ಆಯುಷಿ ಬನ್ಸಾಲ್
8 ರಾಜ್ ಕೃಷ್ಣ ಝಾ
9 ಆದಿತ್ಯ ವಿಕ್ರಮ ಅಗರ್ವಾಲ್
10 ಮಯಾಂಕ್ ತ್ರಿಪಾಠಿ
11 ಎತ್ತಬೋಯಿನಾ ಸಾಯಿ ಶಿವಾನಿ
12 ಆಶಿ ಶರ್ಮಾ
13 ಹೇಮಂತ್
14 ಅಭಿಷೇಕ ವಶಿಷ್ಠ
15 ಬನ್ನಾ ವೆಂಕಟೇಶ
16 ಮಾಧವ ಅಗರ್ವಾಲ್
17 ಸಂಸ್ಕೃತಿ ತ್ರಿವೇದಿ
18 ಸೌಮ್ಯ ಮಿಶ್ರಾ
19 ವಿಭೋರ ಭಾರದ್ವಾಜ್
20 ತ್ರಿಲೋಕ ಸಿಂಗ್
21 ದಿವ್ಯಾಂಕ ಗುಪ್ತಾ
22 ರಿಯಾ ಸೈನಿ
23 ಬಿ ಶಿವಚಂದ್ರನ್
24 ಆರ್ ರಂಗಮಂಜು
25 ಗೀ ಗೀ ಎ ಎಸ್
ಕರ್ನಾಟಕದ ಟಾಪರ್ಸ್
ಆರ್ ರಂಗರಾಜು – 24
ಡಾ. ಸಚಿನ್ ಬಸವರಾಜ ಗುತ್ತೂರ – 41
ಅನುಪ್ರಿಯಾ ಸಖ್ಯ – 120.
ಬಿ.ಎಂ. ಮೇಘನಾ – 425.
ಮಾಧವಿ ಆರ್. – 446
ಭರತ್ ಸಿ. – 567
ಡಾ.ಭಾನುಪ್ರಕಾಶ – 523
ನಿಖಿಲ್ ಎಂ.ಆರ್.- 724
ಟಿ ವಿಜಯಕುಮಾರ – 894.
ಹನುಮಂತಪ್ಪ ನಂದಿ – 910.
ವಿಶಾಕ ಕದಂ – 962
ಸಂದೀಪ ಸಿಂಗ್ – 981
ಮೋಹನ ಪಾಟೀಲ – 984
ಕೇಂದ್ರ ಲೋಕಸೇವಾ ಆಯೋಗ (UPSC) 2024ರ ನಾಗರಿಕ ಸೇವಾ ಪರೀಕ್ಷೆಯಲ್ಲಿ ಒಟ್ಟು 1,009 ಅಭ್ಯರ್ಥಿಗಳನ್ನು ನೇಮಕಾತಿಗಾಗಿ ಆಯ್ಕೆ ಮಾಡಿದೆ. ಆಯ್ಕೆಯಾದ ಅಭ್ಯರ್ಥಿಗಳಲ್ಲಿ ಸಾಮಾನ್ಯ ವರ್ಗದ 335, ಆರ್ಥಿಕವಾಗಿ ದುರ್ಬಲ ವರ್ಗ (ಇಡಬ್ಲ್ಯೂಎಸ್) 109, ಇತರ ಹಿಂದುಳಿದ ವರ್ಗಗಳು (ಒಬಿಸಿ) 318, ಪರಿಶಿಷ್ಟ ಜಾತಿ (ಎಸ್‌ಸಿ) 160 ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) 87 ಸೇರಿದಂತೆ ವಿವಿಧ ವರ್ಗಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ.
ವಿಶೇಷ ಚೇತನರ ವಿಭಾಗದಿಂದ 45, ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ. ಅದರಲ್ಲಿ 12 ಅಭ್ಯರ್ಥಿಗಳು ಪಿಡಬ್ಲ್ಯೂಬಿಡಿ-1 (ದೃಷ್ಟಿಹೀನ), 8 ಪಿಡಬ್ಲ್ಯೂಬಿಡಿ-2 (ಶ್ರವಣದೋಷ), 16 ಪಿಡಬ್ಲ್ಯೂಬಿಡಿ-3 (ಚಲನಾ ದುರ್ಬಲತೆ) ಮತ್ತು 9 ಪಿಡಬ್ಲ್ಯೂಬಿಡಿ-5 (ಇತರ ಅಂಗವೈಕಲ್ಯ) ಅಭ್ಯರ್ಥಿಗಳಿದ್ದಾರೆ.
2024ರ ಕೇಂದ್ರ ಲೋಕಸೇವಾ ಆಯೋಗದ ಪೂರ್ವಭಾವಿ ಪರೀಕ್ಷೆಯು ಜೂನ್ 16ರಂದು ನಡೆದಿತ್ತು. 9,92,599 ಅಭ್ಯರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ 5,83,213 ಅಭ್ಯರ್ಥಿಗಳು ಮಾತ್ರ ಪರೀಕ್ಷೆ ಬರೆದಿದ್ದರು. ಮುಖ್ಯ ಪರೀಕ್ಷೆಗೆ 14,627 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಕಳೆದ ಸೆಪ್ಟೆಂಬರ್‌ನಲ್ಲಿ ಮುಖ್ಯ ಪರೀಕ್ಷೆ ನಡೆದಿತ್ತು. ಈ ಪೈಕಿ 2,845 ಅಭ್ಯರ್ಥಿಗಳು ಸಂದರ್ಶನ ಹಂತಕ್ಕೆ ಆಯ್ಕೆಯಾಗಿದ್ದರು. ಐಎಎಸ್, ಐಎಫ್‌ಎಸ್, ಐಪಿಎಸ್ ಸೇರಿದಂತೆ ಕೇಂದ್ರ ಲೋಕಸೇವಾ ಆಯೋಗ ನಡೆಸುವ ಕೇಂದ್ರ ನಾಗರಿಕ ಸೇವಾ ಪರೀಕ್ಷೆಯ ವಿವಿಧ ಹುದ್ದೆಗಳಿಗೆ ಅಂತಿಮವಾಗಿ 1,009 ಅಭ್ಯರ್ಥಿಗಳು ಆಯ್ಕೆಯಾಗಿದ್ದರು. ಈ ಪೈಕಿ 725 ಪುರುಷರು ಹಾಗೂ 284 ಮಹಿಳೆಯರು ಸೇರಿದ್ದಾರೆ.
ಐಎಎಸ್, ಐಪಿಎಸ್, ಐಎಫ್‌ಎಸ್ ಮತ್ತು ಇತರ ಕೇಂದ್ರ ಸೇವೆಗಳಿಗೆ ಅಂತಿಮ ನೇಮಕಾತಿಗಳು ಖಾಲಿ ಹುದ್ದೆಗಳ ಲಭ್ಯತೆ ಮತ್ತು ಸಂಬಂಧಿತ ಸೇವಾ ನಿಯಮಗಳನ್ನು ಆಧರಿಸಿರುತ್ತವೆ.
ಈ ವರ್ಷ ಕೇಂದ್ರವು ಒಟ್ಟು 1129 ಖಾಲಿ ಹುದ್ದೆಗಳಿವೆ ಎಂದು ವರದಿ ಮಾಡಿದೆ, ಇದರಲ್ಲಿ 50 ಬೆಂಚ್‌ಮಾರ್ಕ್ ಅಂಗವೈಕಲ್ಯ ಹೊಂದಿರುವ ವ್ಯಕ್ತಿಗಳಿಗೆ ಸೇರಿವೆ.
241 ಅಭ್ಯರ್ಥಿಗಳ ಉಮೇದುವಾರಿಕೆ ಪ್ರಸ್ತುತ ತಾತ್ಕಾಲಿಕವಾಗಿದೆ ಮತ್ತು 1 ಫಲಿತಾಂಶವನ್ನು ತಡೆಹಿಡಿಯಲಾಗಿದೆ. ಫಲಿತಾಂಶ ಬಿಡುಗಡೆಯಾದ 15 ದಿನಗಳ ಒಳಗೆ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗುತ್ತದೆ.
ನಿಮ್ಮ ಕಾಮೆಂಟ್ ಬರೆಯಿರಿ