ವೀಡಿಯೊಗಳು..| ಭಯೋತ್ಪಾದಕ ದಾಳಿಯ 5 ದಿನಗಳ ನಂತರ ಪಹಲ್ಗಾಮ್‌ ನಲ್ಲಿ ಭರವಸೆಯ ಬೆಳಕು..: ಮತ್ತೆ ಪ್ರವಾಸಿಗರ ಆಗಮನ ಶುರು…

ಪಹಲ್ಗಾಮ್: ಪಹಲ್ಗಾಮ್ ನಲ್ಲಿ 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದನೆ ಘಟನೆಯಿಂದ ತತ್ತರಿಸಿದ ಕಾಶ್ಮೀರ ಕಣಿವೆಯಲ್ಲಿ ಘಟನೆ ನಡೆದು ಐದು ದಿನಗಳ ನಂತರ ಪ್ರವಾಸೋಸದ್ಯಮ ಮತ್ತೆ ಪುಟಿದೇಳುವ ಲಕ್ಷಣ ಕಂಡುಬಂದಿದೆ.
“ಲಿಟಲ್ ಸ್ವಿಟ್ಜರ್ಲೆಂಡ್” ಎಂಬ ಟ್ಯಾಗ್ ಅನ್ನು ಪಡೆದಿದ್ದ ರಮಣೀಯ ಪ್ರದೇಶದಲ್ಲಿ ಮಂಗಳವಾರ ನಡೆದ ಭೀಕರ ಭಯೋತ್ಪಾದಕ ದಾಳಿಯ ದಾಳಿಯ ಐದು ದಿನಗಳ ನಂತರ ಪ್ರವಾಸಿಗರಿಗೆ ತೆರೆಯಲಾಯಿತು. ಆದರೆ ದಾಳಿಯ ಗ್ರೌಂಡ್ ಝೀರೋ ಸ್ಥಳವಾದ ಬೈಸರನ್ ಹುಲ್ಲುಗಾವಲು ಇನ್ನೂ ಮುಚ್ಚಲ್ಪಟ್ಟಿದೆ.
ಭಯೋತ್ಪಾದಕರ ಗುಂಪು ಹುಲ್ಲುಗಾವಲಿನ ಸುತ್ತಲಿನ ಪೈನ್ ಕಾಡುಗಳಿಂದ ಹೊರಬಂದುಪ್ರವಾಸಿಗರ ಗುಂಪಿನ ಮೇಲೆ ಗುಂಡು ಹಾರಿಸಿದ ನಂತರ ಕೆಲವು ದಿನಗಳವರೆಗೆ, ತುಂಬಿರುತ್ತಿದ್ದ ಪ್ರವಾಸಿ ಕೇಂದ್ರವು ಬಹುತೇಕ ಖಾಲಿಯಾಗಿತ್ತು.
ದಿನಕ್ಕೆ 5,000 ರಿಂದ 7,000 ಪ್ರವಾಸಿಗರು ಬರುತ್ತಿದ್ದ ಸ್ಥಳದಲ್ಲಿ, ಹತ್ಯಾಕಾಂಡದ ನಂತರ ಕೇವಲ 100 ಜನರನ್ನು ನೋಡಲು ಸಾಧ್ಯವಾಗಲಿಲ್ಲ, ಇದು ಹೆಚ್ಚಾಗಿ ಪ್ರವಾಸೋದ್ಯಮವನ್ನು ಅವಲಂಬಿಸಿರುವ ಸ್ಥಳೀಯರಿಗೆ ನಿರುದ್ಯೋಗದ ಭೀತಿಗೆ ಕಾರಣವಾಗಿದೆ.ಆದರೆ ಭಾನುವಾರ, ಪಹಲ್ಗಾಮ್ ಬೀದಿಗಳಲ್ಲಿ ದೇಶ-ವಿದೇಶಗಳ ಪ್ರವಾಸಿಗರು ಅಡ್ಡಾಡುತ್ತಿದ್ದಂತೆ ಹೃದಯಸ್ಪರ್ಶಿ ದೃಶ್ಯವೊಂದು ತೆರೆದುಕೊಂಡಿತು, ಇದು ಸಾಮಾನ್ಯಕ್ಕೆ ಮರಳುವ ನಿರೀಕ್ಷೆಗೆ ಕಾರಣವಾಯಿತು.

ಮಹಾರಾಷ್ಟ್ರದಿಂದ ಭೇಟಿ ನೀಡಿದ ಗುಂಪೊಂದು ಟ್ರಾವೆಲ್ ಏಜೆಂಟ್‌ಗಳು ಮತ್ತು ತಮ್ಮ ಪ್ರವಾಸ ಗುಂಪಿನ ಬೆಂಬಲವನ್ನು ಹೊಂದಿರುವುದರಿಂದ ತಾವು ಹೆದರುವುದಿಲ್ಲ ಎಂದು ಹೇಳಿದರು. “ನಾವು ಭಯಪಡಬಾರದು. ಏನಾಗುತ್ತದೆಯೋ, ಆಗುತ್ತದೆ ಎಂದು ಅವರಲ್ಲಿ ಒಬ್ಬರು ಹೇಳಿದರು.
ಕ್ರೊಯೇಷಿಯಾದ ಮತ್ತು ಸೆರ್ಬಿಯನ್ ಪ್ರವಾಸಿಗರು ಪಹಲ್ಗಾಮ್ ಬೀದಿಗಳಲ್ಲಿ ಕಂಡುಬಂದರು. ಕ್ರೊಯೇಷಿಯಾದ ಪ್ರವಾಸಿ ವ್ಲಾಟ್ಕೊ ಅವರು, “ಇದು ಕಾಶ್ಮೀರಕ್ಕೆ ನನ್ನ 10 ನೇ ಬಾರಿ ಭೇಟಿಯಾಗಿದೆ. ಮತ್ತು ಪ್ರತಿ ಬಾರಿಯೂ ಅದು ಅದ್ಭುತವಾಗಿ ಕಾಣುತ್ತದೆ. ನನಗೆ, ಇದು ವಿಶ್ವದಲ್ಲೇ ನಂಬರ್ ಒನ್ ತಾಣ. ಕ್ರೊಯೇಷಿಯಾದ ಮತ್ತು ಸೆರ್ಬಿಯನ್ ಜನರ ನಮ್ಮ ಗುಂಪಿಗೆ ತುಂಬಾ ಸಂತೋಷವಾಗಿದೆ; ಇದು ಅವರಿಗೆ ಮೊದಲ ಭೇಟಿ ಎಂದು ಹೇಳಿದರು.

ಪ್ರಮುಖ ಸುದ್ದಿ :-   ಎವರೆಸ್ಟ್‌ ಏರುವವರಿಂದಲೇ ಈಗ ಹಿಮನದಿಗೆ ಕಂಟಕ ; ದಿನಕ್ಕೆ 6000 ಲೀಟರ್ ಮೂತ್ರದಿಂದ ಕರಗುತ್ತಿದೆ ಹಿಮ....!

https://x.com/i/status/1916063600760001011

ಸುರಕ್ಷತೆಯ ಬಗ್ಗೆ ಕೇಳಿದಾಗ, “ನಾನು ಸಂಪೂರ್ಣವಾಗಿ ಸುರಕ್ಷಿತ ಎಂದು ಭಾವಿಸುತ್ತೇನೆ, ಇಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲೆಡೆ, ಜನರು ಶೂನ್ಯ ಭಯ ಎಂದು ಹೇಳುತ್ತಾರೆ ಎಂದು ತಿಳಿಸಿದರು.
ಕ್ರೊಯೇಷಿಯಾದ ಮತ್ತೊಬ್ಬ ಪ್ರವಾಸಿ ಅಡ್ಮಿರ್ ಜಾಹಿಕ್ ಅವರು ದಾಳಿಯ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ “ನನಗೆ ಯಾವುದೇ ಭಯ ಅನಿಸಲಿಲ್ಲ. ದಾಳಿ ಇಲ್ಲಿ ನಿಯಮಿತವಾಗಿ ನಡೆಯುವ ವಿಷಯವಲ್ಲ ಎಂದು ನನಗೆ ತಿಳಿದಿದೆ. ನೀವು ಭಯಪಡುತ್ತಿದ್ದರೆ, ನೀವು ಮನೆಯಲ್ಲಿಯೇ ಇರಬೇಕಾಗುತ್ತದೆ. ಆದರೆ ಅಲ್ಲಿಯೂ ಸಹ ಅದು ಸಂಭವಿಸಬಹುದು. ಇದು ಯುರೋಪಿನಲ್ಲಿ, ಎಲ್ಲೆಡೆ ನಡೆಯುತ್ತದೆ. ಜಗತ್ತಿನಲ್ಲಿ ಇನ್ನು ಮುಂದೆ ಸುರಕ್ಷಿತ ಸ್ಥಳ ಎಂಬುದು ಇರುವುದಿಲ್ಲ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮೈ ಜುಂ ಎನ್ನುವ ವಿಡಿಯೊ | ಹಠಾತ್‌ ಪ್ರವಾಹದಲ್ಲಿ ಸಿಲುಕಿದ ಬೈಕರ್‌; ಹಗ್ಗದಂತೆ ದುಪಟ್ಟಾ ಬಳಸಿ ಆತನನ್ನು ರಕ್ಷಿಸಿದ ಕುಟುಂಬ

4 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement