ಶಿರಸಿ: ಚಿರತೆಯೊಂದು ಊರಿನೊಳಗೆ ಬಂದು ಬಚ್ಚಲು (ಸ್ನಾನದ) ಮನೆಯಲ್ಲಿ ಅಡಗಿ ಕುಳಿತು ಮನೆಯವರ ಬೆಚ್ಚಿ ಬೀಳುವಂತೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ನಗರಕ್ಕೆ ಹೊಂದಿಕೊಂಡಿರುವ ಮೂಲೆ ಮನೆಯಲ್ಲಿ ಶುಕ್ರವಾರ ನಡೆದಿದೆ.
ಶಿರಸಿ ನಗರದಿಂದ ಅನತಿ ದೂರದ ಮೂಲೆಮನೆ ಹಳ್ಳಿಯಲ್ಲಿ ಶುಕ್ರವಾರ ಬೆಳ್ಳಂಬೆಳಗ್ಗೆ ಈ ಘಟನೆ ನಡೆದಿದ್ದು, ನೀರು ಕಾಯಿಸಲು ಬಚ್ಚಲ ಮನೆಗೆ ಹೋದಾಗ ಅವರಿಗೆ ಚಿರತೆ ಕಂಡು ಬೆಚ್ಚಿ ಬಿದ್ದಿದ್ದಾರೆ.
ಜೋರಾಗಿ ಕೂಗುವುದನ್ನು ಕಂಡು ಏನಾಯಿತು ಎಂದು ಆಚೆ ಈಚೆ ನೋಡಿದಾಗ ಅಲ್ಲಿಸ್ವಲ್ಪ ಕಪ್ಪಗಿದ್ದ ಚಿರತೆ ಯನ್ನು ಕಂಡು ಮನೆಯವರು ಹೌಹಾರಿದ್ದಾರೆ. ಕಪ್ಪು ಚಿರತೆಯು ಹೆದರಿದ ಸ್ಥಿತಿಯಲ್ಲಿ ಕುಳಿತಿರುವುದು ಕಂಡುಬಂದಿತು.
ಗ್ರಾಮಸ್ಥರಿಗೆ ವಿಷಯ ತಿಳಿಯಿತು. ನಂತರ ಅರಣ್ಯ ಇಲಾಖೆಯವರಿಗೆ ಈ ಬಗ್ಗೆ ಮಾಹಿತಿ ನೀಡಿದರು. ಇಲಾಖೆ ಸಿಬ್ಬಂದಿ ಆಗಮಿಸಿದರು.
ಬಂದಾಗಲೂ ಚಿರತೆ ಅದು ಅಲ್ಲಿಯೇ ಕುಳಿತಿತ್ತು. ಏನೂ ಮಾಡಿದರೂ ಹೋಗಲಿಲ್ಲ. ನಂತರ ಪಟಾಕಿ ಸಿಡಿಸಿ ಬೆದರಿಸಿ ಅದನ್ನು ಅಲ್ಲಿಂದ ಓಡಿಸಲಾಯಿತು.
ಚಿರತೆಯು ಬೆದರಿದ್ದು ನೋಡಿದರೆ ಅದು ಕಾಡು ನಾಯಿಗಳಿಗೆ ಹೆದರಿ ಬಂದಿರಬಹುದು ಅಥವಾ ಇತರ ಪ್ರಾಣಿಗಳಿಗೆ ಹೆಸರಿ ಬಂದಿರಬಹುದು ಎಂದು ಊಹಿಸಲಾಗಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡುಪ್ರಾಣಿಗಳು ಅದರಲ್ಲಿಯೂ ವಿಶೇಷವಾಗಿ ಚಿರತೆಗಳು ಗ್ರಾಮದೊಳಕ್ಕೆ ಬರುತ್ತಿವೆ.
ನಿಮ್ಮ ಕಾಮೆಂಟ್ ಬರೆಯಿರಿ