ಸ್ಕೂಟಿ ಮೇಲೆ ಹತ್ತಿದ ಬ್ಯಾಲೆನ್ಸ್ ತಪ್ಪಿ ಹಿಂದೆ ಬರುತ್ತಿದ್ದ ಟ್ರಕ್ ; ಮುಂದೇನಾಯ್ತೆಂದರೆ…

ಕೋಝಿಕ್ಕೋಡ್: ಶುಕ್ರವಾರ ಕೇರಳದ ಕೋಝಿಕ್ಕೋಡ್‌ನಲ್ಲಿ ಸ್ಕೂಟಿಯ ಮುಂದೆ ಚಲಿಸುತ್ತಿದ್ದ ಟ್ರಕ್ ನಿಯಂತ್ರಣ ತಪ್ಪಿ ಹಿಂದಕ್ಕೆ ಚಲಿಸಲು ಪ್ರಾರಂಭಿಸಿದಾಗ ಮಹಿಳೆಯೊಬ್ಬರು ಅದೃಷ್ಟಶಾತ್‌ ಪವಾಡಸದೃಶ ರೀತಿಯಲ್ಲಿ ಪಾರಾದ ಘಟನೆ ನಡೆದಿದೆ.
ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಅದರ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಪೆರಿಂಗಲಂ ಪಟ್ಟಣದ ರಸ್ತೆಯ ಬೆಟ್ಟದ ಪ್ರದೇಶದಲ್ಲಿ ಶುಕ್ರವಾರ ಬೆಳಿಗ್ಗೆ 7:30 ರ ಸುಮಾರಿಗೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ವೀಡಿಯೊದಲ್ಲಿ ಟ್ರಕ್ ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡು ಹಿಂದಕ್ಕೆ ಚಲಿಸುವುದನ್ನು ಕಾಣಬಹುದು. ಓಝ್ಯಾಡಿ ನಿವಾಸಿ ಅಶ್ವತಿ ಎಂಬ ಮಹಿಳೆ ಘಟನೆ ನಡೆದಾಗ ಟ್ರಕ್ ಹಿಂದೆಯೇ ಇದ್ದರು. ವಾಹನ ಅಶ್ವತಿ ಅವರ ಸ್ಕೂಟಿಗೆ ಡಿಕ್ಕಿ ಹೊಡೆದ ನಂತರ ಅವರು ರಸ್ತೆಗೆ ಬಿದ್ದರು.

ಆದರೆ ಅವರು ಟ್ರಕ್‌ನ ಟೈರ್‌ಗಳ ಪಕ್ಕದಲ್ಲಿ ಬಿದ್ದಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರ ಸ್ಕೂಟಿ ಟ್ರಕ್‌ ಕೆಳಗೆ ಸಿಲುಕಿ ನುಜ್ಜುಗುಜ್ಜಾಗಿದೆ. ನಂತರ ಟ್ರಕ್‌ ರಸ್ತೆಯ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದು ನಿಂತಿದೆ ಎಂದು ವರದಿಯಾಗಿದೆ. ಕೆಲ ವರದಿಯ ಪ್ರಕಾರ, ಟೊಳ್ಳಾದ ಇಟ್ಟಿಗೆಗಳನ್ನು ಸಾಗಿಸುತ್ತಿತ್ತು. ಟ್ರಕ್ ಚಾಲಕ ನಿಯಂತ್ರಣ ಕಳೆದುಕೊಂಡ ಕಾರಣ ಇದ್ದಕ್ಕಿದ್ದಂತೆ ವಾಹನವನ್ನು ಇಳಿಜಾರಿನಲ್ಲಿ ನಿಲ್ಲಿಸಿದರು. ಆದರೆ ಅದು ನಿಲ್ಲದೆ ಹಿಮ್ಮುಖವಾಗಿ ಚಲಿಸಲು ಪ್ರಾರಂಭಿಸಿತು. ಅದರ ಹಿಂದೆ ಅಶ್ವತಿ ಸ್ಕೂಟಿಯಲ್ಲಿ ಹೋಗುತ್ತಿದ್ದರು. ಅಶ್ವತಿ ಅವರ ಕಿರುಚಾಟ ಕೇಳಿದ ಸ್ಥಳೀಯರು ಸ್ಥಳಕ್ಕೆ ಧಾವಿಸಿ ರಕ್ಷಿಸಿದರು. ನಂತರ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು.

ಪ್ರಮುಖ ಸುದ್ದಿ :-   ಭಾರತದ ವಿರುದ್ಧ ಪಾಕಿಸ್ತಾನದ ದಾಳಿಗಳಿಗೆ ಚೀನಾದ ಬೆಂಬಲ ; ಇಲ್ಲಿವೆ ಪ್ರಮುಖ ಪುರಾವೆಗಳು...

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement