ಜೈಪುರ: ವಿವಾಹವಾಗಬೇಕು ಎಂದು ಬಯಸುತ್ತಿದ್ದ ಅಮಾಯಕರನ್ನು ವಂಚಿಸಿ ಲಕ್ಷಾಂತರ ಮೌಲ್ಯದ ಆಭರಣ ಮತ್ತು ನಗದು ಜೊತೆ ಪರಾರಿಯಾಗಿದ್ದಕ್ಕಾಗಿ ‘ಲೂಟಿಕೋರ ವಧು’ ಎಂದೇ ಕುಖ್ಯಾತಿ ಪಡೆದಿದ್ದ ಅನುರಾಧಾ ಪಾಸ್ವಾನ್ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಆಕೆ ಹೊಸ ಹೆಸರು ಇಟ್ಟುಕೊಂಡು, ಅನೇಕ ಶಹರ ಮತ್ತು ಗುರುತನ್ನು ಬದಲಿಸಿಕೊಂಡು ಅನೇಕ ಬಾರಿ ಮದುವೆಯಾಗಿ ಆಭರಣ ಮತ್ತು ನಗದು ಜೊತೆ ಓಡಿಹೋಗುವ ಮೊದಲು ಈಕೆ ಆದರ್ಶ ವಧುವಿನಂತೆ ನಟಿಸುತ್ತಿದ್ದಳು ಹಾಗೂ ಪರಿಪೂರ್ಣ ಸೊಸೆಯಂತೆ ನಾಟಕವಾಡುತ್ತಿದ್ದಳು. ಕೊನೆಗೂ ಸವಾಯಿ ಮಾಧೋಪುರ ಪೊಲೀಸರು ಅನುರಾಧಾ ಪಾಸ್ವಾನ್ ಅವಳನ್ನು ಪೊಲೀಸರು ಬಂಧಿಸಿದ್ದಾರೆ.
ಪಕ್ಕದ ಮನೆಯ ಸುಂದರಿ-ಬಡವಳಂತೆ ನಟನೆ…
ಅವಳು ಒಂಟಿ, ಅವಳು ಬಡವಳು. ಅವಳು ಅಸಹಾಯಕಳು. ಅವಳಿಗೆ ಒಬ್ಬ ನಿರುದ್ಯೋಗಿ ಸಹೋದರನಿದ್ದಾನೆ. ಅವಳು ಮದುವೆಯಾಗಲು ಬಯಸುತ್ತಾಳೆ, ಆದರೆ ಆರ್ಥಿಕ ನಿರ್ಬಂಧಗಳು ಅವಳ ಜೀವನದಲ್ಲಿ ಹೊಸ ಅಧ್ಯಾಯವನ್ನು ಪ್ರಾರಂಭಿಸುವುದನ್ನು ತಡೆಯುತ್ತವೆ. ಹೀಗೆ 32 ವರ್ಷದ ಅನುರಾಧಾ ಪಾಸ್ವಾನ್, ಪಕ್ಕದ ಮನೆಯ ಸುಂದರಿ ಮಹಿಳೆ-ಬಡವಿಯಂತೆ ನಟಿಸಿ ಮೋಸ ಮಾಡುತ್ತಿದ್ದಳು.
ಅವಳು ನಕಲಿ ವಿವಾಹ ಮಾಡಿಕೊಂಡು ಮೋಸ ಮಾಡುವ ಗ್ಯಾಂಗ್‌ನ ನಾಯಕಿ, ಜನರ ನಂಬಿಕೆ ಮತ್ತು ಹಣವನ್ನು ವಂಚಿಸುವಲ್ಲಿ ಹೆಸರುವಾಸಿಯಾಗಿದ್ದಾಳೆ. ಅನುರಾಧಾ ಪಾಸ್ವಾನ್ ಗ್ಯಾಂಗ್ ಸದಸ್ಯರು ಅವಳ ಫೋಟೋಗಳು ಮತ್ತು ಪ್ರೊಫೈಲ್ ಅನ್ನು ಸಂಭಾವ್ಯ ವರನ ಬಳಿ ತೆಗೆದುಕೊಂಡು ಹೋಗಿ, ಮದುವೆಗಾಗಿ ಪಿಚ್ ಮಾಡುತ್ತಾರೆ. ಮೂಲತಃ ಗ್ಯಾಂಗ್ ಸದಸ್ಯರಾಗಿರುವ ಮ್ಯಾಚ್‌ಮೇಕರ್, ಮದುವೆಯನ್ನು ಏರ್ಪಡಿಸಲು 2 ಲಕ್ಷ ರೂ.ಗಳ ಶುಲ್ಕ ವಿಧಿಸುತ್ತಾನೆ. ಇದಕ್ಕೆ ವಿವಾಹವಾಗಲು ಬಯಸುವ ವ್ಯಕ್ತಿ ಒಪ್ಪಿದರೆ ವಿವಾಹ ಒಪ್ಪಿಗೆ ಪತ್ರವನ್ನು ಸಿದ್ಧಪಡಿಸಲಾಗುತ್ತದೆ. ನಂತರ ದಂಪತಿ ದೇವಸ್ಥಾನದಲ್ಲಿ ಅಥವಾ ಮನೆಯಲ್ಲಿ, ವಿಧಿವಿಧಾನಗಳ ಪ್ರಕಾರ ಮದುವೆಯಾಗುತ್ತಾರೆ. ನಂತರ ಈ ಗ್ಯಾಂಗ್ ನಾಟಕವನ್ನು ಪ್ರಾರಂಭಿಸುತ್ತದೆ.
ನಂತರ ಈ ಮಹಿಳೆ ಮದುಮಗ ಮತ್ತು ಆತನ ಅತ್ತೆಯ ಜೊತೆ ನಿಷ್ಕಪಟಿಯಂತೆ ವರ್ತಿಸುತ್ತಾಳೆ. ಎಲ್ಲರ ವಿಶ್ವಾಸ ಗಳಿಸಲು, ಕುಟುಂಬದ ಪ್ರತಿಯೊಬ್ಬ ಸದಸ್ಯರೊಂದಿಗೆ ಬಾಂಧವ್ಯ ಹಾಗೂ ವಿಶ್ವಾಸಗಳಿಸಲು ಎಲ್ಲ ಪ್ರಯತ್ನ ನಡೆಸುತ್ತಾಳೆ. ಕೆಲವೇ ದಿನಗಳಲ್ಲಿ, ಈ ಗ್ಯಾಂಗ್ ತಮ್ಮ ಯೋಜನೆಯನ್ನು ಅಂತಿಮವಾಗಿ ಕಾರ್ಯಗತಗೊಳಿಸುತ್ತದೆ. ಅಂದರೆ ಮನೆಮಂದಿಗೆ ಪಾನೀಯದಲ್ಲಿ ಮತ್ತು ಭರಿಸುವ ವಸ್ತು ಬೆರೆಸಿ ಅದನ್ನು ಕುಡಿಸಿ ಎಚ್ಚರ ತಪ್ಪಿಸಿ ಆಭರಣ, ನಗದು ಮತ್ತು ಇತರ ಬೆಲೆಬಾಳುವ ವಸ್ತುಗಳೊಂದಿಗೆ ಈ ಗ್ಯಾಂಗ್ ಪರಾರಿಯಾಗುತ್ತದೆ.
ಈಕೆಯಿಂದ ಮೋಸಹೋದ 25 ಜನರಲ್ಲಿ ಒಬ್ಬರಾದ ವಿಷ್ಣು ಶರ್ಮಾ ತಮ್ಮ ಮದುವೆಗಾಗಿ ಸಾಲ ಪಡೆದಿದ್ದರು. ಏಪ್ರಿಲ್ 20 ರಂದು, ಸವಾಯಿ ಮಾಧೋಪುರದ ನಿವಾಸಿ ವಿಷ್ಣು ಶರ್ಮಾ, ಮಧ್ಯಪ್ರದೇಶದ ಅನುರಾಧಾ ಪಾಸ್ವಾನಳನ್ನು ವಿವಾಹವಾದರು. ಸ್ನೇಹಿತರು ಮತ್ತು ಕುಟುಂಬದ ಸಮ್ಮುಖದಲ್ಲಿ ಹಿಂದೂ ವಿಧಿವಿಧಾನಗಳ ಪ್ರಕಾರ ಮದುವೆ ನಡೆಯಿತು. ಮದುವೆಯನ್ನು ಬ್ರೋಕರ್ ಪಪ್ಪು ಮೀನಾ ಮೂಲಕ ಏರ್ಪಡಿಸಲಾಗಿತ್ತು, ಇದಕ್ಕಾಗಿ ವಿಷ್ಣು ಅವರು ಪಪ್ಪು ಮೀನಾಗೆ ಎರಡು ಲಕ್ಷ ರೂಪಾಯಿಗಳನ್ನೂ ಪಾವತಿಸಿದರು. ಅಲ್ಲಿವರೆಗೆ ನಾಟಕ ಮಾಡುತ್ತಿದ್ದ ಅನುರಾಧಾ ಪಾಸ್ವಾನ್ ಮದುವೆಯಾದ ಎರಡು ವಾರಗಳಲ್ಲಿ 1.25 ಲಕ್ಷ ರೂಪಾಯಿ ಮೌಲ್ಯದ ಆಭರಣಗಳು, 30,000 ರೂಪಾಯಿ ನಗದು ಮತ್ತು 30,000 ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಳು.
“ನಾನು ಕೈಗಾಡಿ ನಡೆಸುತ್ತೇನೆ ಮತ್ತು ಸಾಲ ಪಡೆದು ಮದುವೆಯಾದೆ. ನಾನು ಮೊಬೈಲ್ ಕೂಡ ಸಾಲ ಪಡೆದಿದ್ದೆ, ಅವಳು ಅದನ್ನೂ ತೆಗೆದುಕೊಂಡಳು. ಅವಳು ನನಗೆ ಮೋಸ ಮಾಡುತ್ತಾಳೆಂದು ನನಗೆ ಎಂದಿಗೂ ಅನಿಸಿರಲಿಲ್ಲ” ಎಂದು ವಿಷ್ಣು ಶರ್ಮಾ ಹೇಳಿದರು. “ನಾನು ಸಾಮಾನ್ಯವಾಗಿ ಹೆಚ್ಚು ನಿದ್ರೆ ಮಾಡುವುದಿಲ್ಲ, ಆದರೆ ಆ ರಾತ್ರಿ ನಾನು ಮಗುವಿನಂತೆ ಮಲಗಿದ್ದೆ, ಎಚ್ಚರವಾಗಲೇ ಇಲ್ಲ. ಯಾರೋ ನನಗೆ ನಿದ್ರೆ ಮಾತ್ರೆ ಕೊಟ್ಟಂತೆ ಅನ್ನಿಸಿತು” ಎಂದು ಅವರು ಹೇಳಿದರು. ಶರ್ಮಾ ಅವರ ತಾಯಿ ಕೂಡ ಆಘಾತಕ್ಕೊಳಗಾಗಿದ್ದಾರೆ. ಇದರ ನಂತರ, ಶರ್ಮಾ ಕುಟುಂಬವು ಪೊಲೀಸ್ ದೂರು ದಾಖಲಿಸಿದೆ.
ವಿಷ್ಣು ಹಂಚಿಕೊಂಡ ಮಾಹಿತಿಯ ಆಧಾರದ ಮೇಲೆ, ಸವಾಯಿ ಮಾಧೋಪುರ ಪೊಲೀಸರು ಅನುರಾಧಾ ಪಾಸ್ವಾನ್‌ಗಾಗಿ ಬಲೆ ಬೀಸಿದರು. ಒಬ್ಬ ಕಾನ್‌ಸ್ಟೆಬಲ್ ಸಂಭಾವ್ಯ ವರನಂತೆ ನಟಿಸಿದರು. ಏಜೆಂಟ್‌ನ ಗ್ರಾಹಕನೂ ಆಗಿದ್ದರು, ಅವರು ಹಲವಾರು ಮಹಿಳೆಯರ ಚಿತ್ರಗಳನ್ನು ತೋರಿಸಿದರು. “ತನಿಖೆಯ ನಂತರ, ಎಲ್ಲಾ ದಾಖಲೆಗಳು ಮತ್ತು ವಿವಾಹ ಒಪ್ಪಂದಗಳು ನಕಲಿ ಎಂದು ಕಂಡುಬಂದಿದೆ. ನಮ್ಮ ತಂಡದಿಂದ, ನಾವು ಕಾನ್‌ಸ್ಟೆಬಲ್‌ನನ್ನು ವರನನ್ನಾಗಿ ಸಿದ್ಧಪಡಿಸಿ ಮಹಿಳೆಯನ್ನು ಮೋಸಗೊಳಿಸಿ ಮದುವೆ ಮಾಡಿದ್ದೇವೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು. ನಂತರ ಪಾಸ್ವಾನಳನ್ನು ಭೋಪಾಲ್‌ನಲ್ಲಿ ಬಂಧಿಸಲಾಯಿತು.
ನಿಮ್ಮ ಕಾಮೆಂಟ್ ಬರೆಯಿರಿ